ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರು ತಮ್ಮ ಚುನಾವಣ ವಿಜಯ ಭಾಷಣ ಮಾಡುವ ವೇಳೆ, ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ ತನ್ನ ಪತ್ನಿ ಮೆಲಾನಿಯಾ ಟ್ರಂಪ್ ಅವರಿಗೆ ಕಿಸ್ ಕೊಟ್ಟಿದ್ದು, ಜನರ ಗಮನ ಸೆಳೆದಿದೆ.
ಹೌದು, ಟ್ರಂಪ್ ಗೆಲುವಿನ ಭಾಷಣ ಮಾಡುವ ವೇಳೆ ತಮಗೆ ಬೆಂಬಲಿಸಿದವರಿಗೆ ಕೃತಜ್ಞತೆ ತಿಳಿಸುವ ವೇಳೆ ತನ್ನ ಪತ್ನಿಯ ಬಗ್ಗೆ ಭಾಷಣ ಶುರು ಮಾಡಿದ್ದರು. ಈ ವೇಳೆ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ ವೇದಿಕೆ ಮೇಲೆ ನಿಂತಿದ್ದ ಮೆಲಾನಿಯಾ ಅವರ ಬಳಿ ಹೋಗಿ ಟ್ರಂಪ್ ಚುಂಬಿಸಿದರು. ನಂತರ ಬಂದು ತಮ್ಮ ಭಾಷಣವನ್ನು ಮುಂದುವರೆಸಿದರು.
ದೇಶಕ್ಕಾಗಿ ದೇವರೇ ಜೀವ ಕಾಪಾಡಿದ:
ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್, ದೇವರು ಒಂದು ಕಾರಣಕ್ಕಾಗಿ ನನ್ನ ಜೀವ ಕಾಪಾಡಿದ ಎಂದು ಸ್ಮರಿಸಿದ್ದಾರೆ. ಜು.13ರಂದು ವ್ಯಕ್ತಿಯೊಬ್ಬ ತಮ್ಮ ಮೇಲೆ ನಡೆಸಿದ ಗುಂಡಿನ ದಾಳಿಯನ್ನು ನೆನಪಿಸಿಕೊಂಡು, ’ದೇವರು ನನ್ನ ಜೀವ ಕಾಪಾಡಿದ. ಅದು ಒಂದು ಉದ್ದೇಶಕ್ಕಾಗಿ (ಚುನಾವಣೆಯಲ್ಲಿ ಗೆದ್ದು ದೇಶ ಸೇವೆ ಮಾಡುವುದಕ್ಕಾಗಿ) ಎಂದಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ವ್ಯಕ್ತಿಯೊಬ್ಬ ಹಾರಿಸಿದ ಗುಂಡು ಅದೃಷ್ಟವಶಾತ್ ಅವರ ತಲೆಗೆ ತಾಗದೇ ಕಿವಿಗೆ ತಗುಲಿತ್ತು. ಹೀಗಾಗಿ ಟ್ರಂಪ್ ಜೀವ ಉಳಿದಿತ್ತು.