ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಎಸ್ಎಲ್ ವರದಿ ಬಂದಿದೆ. ಈ ವಿಡಿಯೋಗಳು ಅಸಲಿ ಎಂದು ಎಫ್ಎಸ್ಎಲ್ ವರದಿಯಲ್ಲಿ ಬಹಿರಂಗವಾಗಿದೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಬಂದಿರುವ ಎಫ್ಎಸ್ಎಲ್ ವರದಿ ಪ್ರಕಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋ ನಕಲಿ ಅಲ್ಲ ಅಸಲಿ ಎಂದು ಬಹಿರಂಗವಾಗಿದೆ. ವಿಡಿಯೋಗಳು ಯಾವುದೇ ಅನಿಮೇಷನ್, ಗ್ರಾಫಿಕ್ಸ್, ಎಡಿಟ್, ಮಾರ್ಫ್ ಮಾಡಿದ್ದಲ್ಲ. ಅವು ಅಸಲಿ ವಿಡಿಯೋಗಳು ಎಂದು ವರದಿಯಲ್ಲಿ ಸಾಬೀತಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದವು. ನಂತರ ಪ್ರಜ್ವಲ್ ವಿರುದ್ಧ ದಾಖಲಾದ ಪ್ರಕರಣದ ಮೇರೆಗೆ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಆ ವಿಡಿಯೋ ನಕಲಿ, ವಿರೋಧಿಗಳು ಎಡಿಟ್, ಮಾರ್ಫಿಂಗ್ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ಬಳಿಕ ಎಸ್ಐಟಿ ನಿಜಾಂಶ ಪತ್ತೆ ಮಾಡಲು ಎಫ್ಎಸ್ಎಲ್ಗೆ ಕಳುಹಿಸಿತ್ತು. ಇದೀಗ ಬಂದ ಎಫ್ಎಸ್ಎಲ್ ವರದಿ ಅನುಸಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಅಶ್ಲೀಲ ವಿಡಿಯೋ ಅಸಲಿ ಎಂದು ದೃಢಪಟ್ಟಿದೆ.