Kala Bhairava Jayanti | ಇಂದು ಕಾಲ ಭೈರವ ಜಯಂತಿ; ಶುಭ ಸಮಯ, ಪೂಜಾ ವಿಧಾನ

Kala Bhairava Jayanti : ಶಿವನ ಉಗ್ರ ರೂಪ ಕಾಲ ಭೈರವನನ್ನು ಪ್ರತಿದಿನ ಶ್ರದ್ಧಾ ಭಕ್ತಿಯಿ೦ದ ಜನ ಪೂಜಿಸಲಿದ್ದು, ವಿಶೇಷವಾಗಿ ಕಾಲಭೈರವ ಜಯಂತಿಯ ದಿನದಂದು ಆತನನ್ನು ಪೂಜಿಸುವುದರಿಂದ ಭಕ್ತರು ವಿಶೇಷ ಫಲಗಳನ್ನು ಪಡೆಯುತ್ತಾರೆ. ಕಾಲ…

Kala Bhairava Jayanti

Kala Bhairava Jayanti : ಶಿವನ ಉಗ್ರ ರೂಪ ಕಾಲ ಭೈರವನನ್ನು ಪ್ರತಿದಿನ ಶ್ರದ್ಧಾ ಭಕ್ತಿಯಿ೦ದ ಜನ ಪೂಜಿಸಲಿದ್ದು, ವಿಶೇಷವಾಗಿ ಕಾಲಭೈರವ ಜಯಂತಿಯ ದಿನದಂದು ಆತನನ್ನು ಪೂಜಿಸುವುದರಿಂದ ಭಕ್ತರು ವಿಶೇಷ ಫಲಗಳನ್ನು ಪಡೆಯುತ್ತಾರೆ.

ಕಾಲ ಭೈರವ ಜಯಂತಿ ಯಾವಾಗ?

ಉದಯತಿಥಿಯ ಆಧಾರದ ಮೇಲೆ ಈ ಬಾರಿಯ ಅಷ್ಟಮಿ ತಿಥಿಯು ನ. 22, 2024 ರಂದು ಸಂಜೆ 06.07 ರಿಂದ ಪ್ರಾರಂಭವಾಗಿ, ನ. 23, 2024 ರಂದು ಬೆಳಗ್ಗೆ 07.56 ಕ್ಕೆ ಕೊನೆಗೊಳ್ಳುತ್ತದೆ. ಈ ದಿನ ಉಪವಾಸ ಮಾಡಬೇಕು. ನ. 22 ರಂದು ಬೆಳಿಗ್ಗೆ 6:50 ರಿಂದ 10:48 ರವರೆಗೆ ಕಾಲ ಭೈರವನ ಆರಾಧನೆಗೆ ಮಂಗಳಕರ ಸಮಯ ಇರುತ್ತದೆ.

ಇದನ್ನೂ ಓದಿ: Rashi bhavishya | ಇಂದಿನ ರಾಶಿ ಭವಿಷ್ಯ; 22-11-2024 ಶುಕ್ರವಾರ

Vijayaprabha Mobile App free

Kala Bhairava Jayanti : ಶುಭ ಸಮಯ

  • ಸೂರ್ಯೋದಯ- ಬೆಳಗ್ಗೆ 6:53
  • ಚಂದ್ರೋದಯ- ತಡರಾತ್ರಿ 11:41 ರಾಹುಕಾಲ – 10:48 ರಿಂದ 12:07 ರವರೆಗೆ
  • ಅಭಿಜಿತ್ ಮುಹೂರ್ತ : 11:46 ರಿಂದ 12:28 ರವರೆಗೆ
  • ಅಮೃತ ಕಾಲ – 03:26 ರಿಂದ 05:08 ರವರೆಗೆ
  • ಬ್ರಹ್ಮಮುಹೂರ್ತ- 05:18 ರಿಂದ 06:06 ರವರೆಗೆ

ಇದನ್ನೂ ಓದಿ: ಸೂರ್ಯ ಪಥ ಬದಲಾವಣೆ | ಈ 5 ರಾಶಿಯವರಿಗೆ ಭಾರಿ ಅದೃಷ್ಟ

Kala Bhairava Jayanti : ಪೂಜೆಯ ವಿಧಾನ

  • ಬ್ರಹ್ಮಮುಹೂರ್ತದಲ್ಲಿ ಎದ್ದು, ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಿ.
  • ಈ ದಿನ ಉಪವಾಸ ಮಾಡುವುದು ತುಂಬಾ ಶುಭ.
  • ಕಾಲ ಭೈರವನಿಗೆ ಹೂವು, ಹಣ್ಣು, ಕಪ್ಪು ಎಳ್ಳು, ಅಕ್ಕಿ, ಸಿಹಿ ತಿನಿಸು ಅರ್ಪಿಸಿ
  • ಭೈರವನಿಗೆ ತುಪ್ಪದ ದೀಪ, ಸಾಸಿವೆ ಎಣ್ಣೆಯ ದೀಪ ಬೆಳಗಿಸಿ.
  • ಸಂಜೆ ಆರತಿ ಮಾಡುವ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಿ.
  • ಉಪವಾಸ ಮುಗಿದ ನಂತರ ಕಪ್ಪು ನಾಯಿಗೆ 5 ಬಗೆಯ ಸಿಹಿ ತಿನ್ನಿಸುವುದರಿಂದ ಪಾಪಗಳಿಂದ ಮುಕ್ತಿ.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.