Railways: ಭಾರತೀಯ ರೈಲ್ವೆಯಲ್ಲಿ ಖಾಲಿ ಇದೆ 11,558 ಹುದ್ದೆಗಳು!! ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು: ಸ್ಟೇಷನ್ ಮಾಸ್ಟರ್, ಟ್ರೈನ್ಸ್ ಕ್ಲರ್ಕ್, ಜೂನಿಯರ್ ಅಕೌಂಟೆಂಟ್ ಸೇರಿದಂತೆ 11,558 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 27ರವರೆಗೆ ದಿನಾಂಕ ವಿಸ್ತರಿಸಿ ಭಾರತೀಯ ರೈಲ್ವೆ ಅವಕಾಶ ಒದಗಿಸಿದೆ. ಹುದ್ದೆಗಳ ವಿವರ: ಗೂಡ್ಸ್ ಟ್ರೈನ್ ಮ್ಯಾನೇಜರ್ –…

ಬೆಂಗಳೂರು: ಸ್ಟೇಷನ್ ಮಾಸ್ಟರ್, ಟ್ರೈನ್ಸ್ ಕ್ಲರ್ಕ್, ಜೂನಿಯರ್ ಅಕೌಂಟೆಂಟ್ ಸೇರಿದಂತೆ 11,558 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 27ರವರೆಗೆ ದಿನಾಂಕ ವಿಸ್ತರಿಸಿ ಭಾರತೀಯ ರೈಲ್ವೆ ಅವಕಾಶ ಒದಗಿಸಿದೆ.

ಹುದ್ದೆಗಳ ವಿವರ: ಗೂಡ್ಸ್ ಟ್ರೈನ್ ಮ್ಯಾನೇಜರ್ – 3144, ಸ್ಟೇಷನ್ ಮಾಸ್ಟರ್ – 994, ಚೀಫ್ ಕಮರ್ಷಿಯಲ್ ಆ್ಯಂಡ್ ಟಿಕೆಟ್ ಸೂಪರ್ವೈಸರ್ – 1736, ಜೂನಿಯರ್ ಅಕೌಂಟೆಂಟ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್ – 1507, ಸೀನಿಯರ್ ಕ್ಲರ್ಕ್ ಆ್ಯಂಡ್ ಟೈಪಿಸ್ಟ್ – 732, ಅಕೌಂಟ್ ಕ್ಲರ್ಕ್ ಆ್ಯಂಡ್ ಟೈಪಿಸ್ಟ್ – 361, ಕಮರ್ಷಿಯಲ್ ಆ್ಯಂಡ್ ಟಿಕೆಟ್ ಕ್ಲರ್ಕ್ – 2022, ಜೂನಿಯರ್ ಕ್ಲರ್ಕ್ ಆ್ಯಂಡ್ ಟೈಪಿಸ್ಟ್ – 990, ಟ್ರೈನ್ ಕ್ಲರ್ಕ್- 72 ಖಾಲಿ ಹುದ್ದೆಗಳಿಗೆ ನೇಮಕಾತಿ ಆದೇಶ ಹೊರಡಿಸಲಾಗಿದೆ.

ವಿದ್ಯಾರ್ಹತೆ: ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಹಾಗೂ ಗರಿಷ್ಟ ವಯೋಮಿತಿ 33 ವರ್ಷ, ಇನ್ನಿತರ ಹುದ್ದೆಗಳಿಗೆ ಪದವಿ ಹಾಗೂ ಗರಿಷ್ಠ ವಯೋಮಿತಿ 36 ವರ್ಷ ನಿಗದಿಪಡಿಸಲಾಗಿದೆ.

Vijayaprabha Mobile App free

ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು, ತೃತೀಯ ಲಿಂಗಿಗಳಿಗೆ 250 ರೂ., ಇತರೆ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ಪಾವತಿಸಿ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ indianrailways.gov.in ಇಲ್ಲಿಗೆಭೇಟಿ ನೀಡಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.