ನವದೆಹಲಿ: ಜಗತ್ತಿನ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಒಂದಾದಂತಹ ಭಾರತದ ಅಗ್ನಿ ಕ್ಷಿಪಣಿಯ ಪಿತಾಮಹ ಖ್ಯಾತ ಡಿಆರ್‌ಡಿಒ ಕ್ಷಿಪಣಿ ವಿಜ್ಞಾನಿ ಪದ್ಮಭೂಷಣ ಪುರಸ್ಕೃತ ರಾಮ್ ನಾರಾಯಣ್ ಅಗರ್ವಾಲ್ (84) ಅವರು ಗುರುವಾರ ಕೊನೆಯುಸಿರೆಳೆದಿದ್ದಾರೆ.
ದೇಶವನ್ನು ಪ್ರಮುಖ ಕ್ಷಿಪಣಿ ಶಕ್ತಿಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಮ್ ನಾರಾಯಣ್ ಅಗರ್ವಾಲ್ ಅವರು ಭಾರತದ ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದರು. ಅಗರ್ವಾಲ್ ಅವರು ಕ್ಷಿಪಣಿಗಳ ಮೊದಲ ಕಾರ್ಯಕ್ರಮದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು.
ಭಾರತದ ಪರಮಾಣು ಸಾಮರ್ಥ್ಯದ ಬೆನ್ನೆಲುಬು ಎಂದು ಡಿಆರ್‌ಡಿಒ ತಯಾರಿಸಿದ ಅಗ್ನಿ ಕ್ಷಿಪಣಿಯನ್ನು ಪರಿಗಣಿಸಲಾಗುತ್ತದೆ. ಈವರೆಗೆ ಅಗ್ನಿ ಕ್ಷಿಪಣಿಯ ಐದು ರೂಪಾಂತರಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment