ಹೈದರಾಬಾದ್: ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ನಟನೆಯ `ಪುಷ್ಪಾ-2′ ಸಿನಿಮಾ ಡಿಜಿಟಲ್ ಮಾರ್ಕೆಟ್ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೀಗ ‘ಪುಷ್ಪ-2’ ಸಿನಿಮಾದ ಡಿಜಿಟಲ್ ಹಕ್ಕು ಮಾರಾಟ ಭರ್ತಿ 270 ಕೋಟಿಗೆ ಮಾರಾಟವಾಗಿದೆ.
ಪ್ರಸ್ತುತ ಪುಷ್ಪ-2 ಸಿನಿಮಾ ಟೀಸರ್ ಹಾಗೂ ಹಾಡುಗಳಿಂದ ಪ್ರೇಕ್ಷಕರ ಗಮನ ಸೆಳೆದಿದ್ದು, ಇದೀಗ ಡಿಜಿಟಲ್ ಹಕ್ಕು ಮಾರಾಟದಿಂದ ಮತ್ತಷ್ಟು ಹವಾ ಸೃಷ್ಟಿಸಿದೆ. ಪುಷ್ಪ ಸಿನಿಮಾದ ಪಾರ್ಟ್-1 ಭಾರೀ ಸದ್ದು ಮಾಡಿತ್ತು. ಇದೀಗ ಪುಷ್ಪ-2 ಸಿನಿಮಾವೂ ಡಿಫರೆಂಟ್ ಮೇಕಿಂಗ್ ನೊಂದಿಗೆ ಸದ್ದು ಮಾಡಲಿದೆ. ಈಗಾಗಲೇ ಸ್ಯಾಂಪಲ್ಸ್ ಇಂದಲೇ ಫ್ಯಾನ್ಸ್ ಕ್ರೇಜ್ ಹೆಚ್ಚಿಸಿರುವ ಸಿನಿಮಾ ಡಿಜಿಟಲ್ ಮಾರ್ಕೆಟ್ನಲ್ಲೂ ಟ್ರೆಂಡ್ ಸೃಷ್ಟಿಸಿದೆ.
ಅಲ್ಲು ಅರ್ಜುನ್ ಅವರ ವೃತ್ತಿ ಜೀವನದಲ್ಲೇ ಪುಷ್ಪ ಸಿನಿಮಾವು ವಿಭಿನ್ನವಾಗಿದ್ದು, ಸದ್ಯ ಡಿಜಿಟಲ್ ರೈಟ್ಸ್ ಸೌಂಡ್ ಮೂಲಕ ಸಿನಿಮಾವು ಸದ್ದು ಮಾಡುತ್ತಿದೆ. ಈ ಮೊದಲು ಸಿನಿಮಾವನ್ನು ಆಗಸ್ಟ್ 15ಕ್ಕೆ ಬಿಡುಗಡೆ ಮಾಡಬೇಕೆಂದು ಚಿತ್ರತಂಡವು ನಿರ್ಧರಿಸಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾದ ಬಿಡುಗಡೆ ದಿನಾಂಕವು ಪೋಸ್ಟ್ಪೋನ್ ಆಗಿದೆ. ಅದರಂತೆ ಇದೇ ವರ್ಷ ಡಿಸೆಂಬರ್ 6ಕ್ಕೆ ಪುಷ್ಪ-2 ಸಿನಿಮಾ ಬಿಡುಗಡೆಯಾಗಲಿದೆ.