Kichcha Sudeep: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಇಂದು (ಸೆ.2) ಜನ್ಮದಿವಾಗಿದ್ದು (birthday), ಕಿಚ್ಚನಿಗೆ ಅನೇಕ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈದಿದ್ದಾರೆ.
ಹೌದು, ಕನ್ನಡ ಚಿತ್ರರಂಗಕ್ಕೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟ ಕಿಚ್ಚ ಸುದೀಪ್, ಇಂದು 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲ, ನಿರ್ದೇಶಕನಾಗಿಯೂ ಸೈ ಎನಿಸಿಕೊಂಡಿದ್ದಾರೆ. ಮೈ ಅಟೋಗ್ರಾಫ್, ನಂ 73 ಶಾಂತಿನಿವಾಸ, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ, ಮಾಣಿಕ್ಯ ಸಿನಿಮಾಗಳನ್ನು ಸುದೀಪ್ ನಿರ್ದೇಶನ ಮಾಡಿ ಗೆದ್ದಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಿರು ಪರಿಚಯ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕ. 1973ರ ಸೆಪ್ಟೆಂಬರ್ 2ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಸಂಜೀವ್ ಮಂಜಪ್ಪ, ಸರೋಜ ದಂಪತಿಗಳಿಗೆ ಜನಿಸಿದರು. 2001ರಲ್ಲಿ ಪ್ರಿಯಾ ಅವರನ್ನು ಪ್ರೀತಿಸಿ ಮದುವೆಯಾದ ಜೋಡಿಗೆ ಸಾನ್ವಿ ಎಂಬ ಓರ್ವ ಪುತ್ರಿಯಿದ್ದಾರೆ. 1997 ರಲ್ಲಿ ತಾಯವ್ವ ಚಿತ್ರದಿಂದ ಸಿನಿಪಯಣ ಆರಂಭಿಸಿದ ಸುದೀಪ್ 2001 ರಲ್ಲಿ ತೆರೆಕಂಡ ಹುಚ್ಚ ಚಿತ್ರದಿಂದ ನಾಯಕನಾಗಿ ಮೊದಲ ಯಶಸ್ಸನ್ನು ಕಂಡರು.
ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರೋಮೋ ರಿಲೀಸ್
ಕಿಚ್ಚ ಸುದೀಪ್ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಇರ್ತಾರಾ? ಇಲ್ಲವಾ ಎನ್ನುವುದು ಪ್ರಶ್ನೆಯಾಗಿತ್ತು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಪ್ರೋಮೋ ರಿಲೀಸ್ ಮಾಡಿದ್ದು, ಪ್ರೋಮೋದಲ್ಲಿ ಲೋಗೋ ರಿವೀಲ್ ಮಾಡಲಾಗಿದೆ ಅಷ್ಟೇ. ಕ್ಯಾಪ್ಶನ್ನಲ್ಲಿ ‘Kichcha Sudeep’ ಹ್ಯಾಶ್ಟ್ಯಾಗ್ ಹಾಕಲಾಗಿದೆ. ಇದರಿಂದ ಸುದೀಪ್ ಅವರು ಇರೋದು ಪಕ್ಕಾ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ.
ನಟ ಸುದೀಪ್ ಬರ್ತ್‌ಡೇ ಹಿನ್ನೆಲೆ ಮಧ್ಯರಾತ್ರಿ ಮನೆ ಮುಂದೆ ನೂರಾರು ಅಭಿಮಾನಿಗಳ ಆಗಮನ, ವಿಡಿಯೋ ಬೆಳಕಿಗೆ
51ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಸುದೀಪ್ ಅವರಿಗೆ ವಿಶ್ ಮಾಡಲು ಮಧ್ಯರಾತ್ರಿಯೇ ನೂರಾರು ಅಭಿಮಾನಿಗಳು ಬೆಂಗಳೂರಿನ ಜೆಪಿ ನಗರದಲ್ಲಿರುವ ಅವರ ಮನೆ ಮುಂದೆ ಜಮಾಯಿಸಿದ್ದರು. ಈ ವಿಡಿಯೋ ಸದ್ಯ ಬೆಳಕಿಗೆ ಬಂದಿದೆ.
ಅಭಿಮಾನಿಗಳ ಕೈ ಬೀಸಿದ ಬಳಿಕ ಸುದೀಪ್, ಆತ್ಮೀಯರ ಸಮ್ಮುಖದಲ್ಲಿ ಕೇಕ್ ಕತ್ತರಿಸಿದರು. “ಹುಟ್ಟುಹಬ್ಬದ ದಿನ ನನ್ನ ಮನೆಯ ಬಳಿ ಬರಬೇಡಿ, ಆ ರಸ್ತೆ ತುಂಬಾ ಸಣ್ಣದಿದೆ,” ಎಂದು ಕೆಲವು ದಿನಗಳ ಹಿಂದೆ ಅಭಿಮಾನಿಗಳಲ್ಲಿ ಸುದೀಪ್ ಮನವಿ ಮಾಡಿದ್ದರು.
https://vijayaprabha.com/18th-installment-of-pm-kisan-scheme/