PM Kisan scheme: ದೇಶದಲ್ಲಿನ ಕೃಷಿಕರಿಗೆ ಸಹಾಯಕ್ಕಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಇನ್ನು ಈ ಯೋಜನೆಯನ್ನು ಕೇಂದ್ರ ಸರ್ಕಾರವು 2019ರಿಂದ ಜಾರಿಗೆ ತಂದಿದೆ.
ರೈತರ ಖಾತಗೆಳಿಗೆ ಪ್ರತಿ 4 ತಿಂಗಳಿಗೆ ಒಮ್ಮೆ 2,000ರೂ. ನಂತೆ ಪ್ರತಿ ರೈತರಿಗೆ ನೀಡಲಾಗುತ್ತಿದ್ದು, 18ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರವು ನವಂಬರ್ ತಿಂಗಳಲ್ಲಿ ಫಲಾನುಭವಿಗಳ ಖಾತೆಗೆ 2 ಸಾವಿರ ರೂ. ಜಮೆ ಆಗಲಿದೆ ಎಂದು ತಿಳಿಸಿದೆ.
ಪಿಎಂ ಕಿಸಾನ್ 18ನೇ ಕಂತನ್ನು ಪಡೆಯಲು ಈ ಕೆಲಸ ಮಾಡಿ
ಪಿಎಂ ಕಿಸಾನ್ 18ನೇ ಕಂತನ್ನು ಪಡೆಯಲು ಈ ಕೆಲಸಗಳು ಅವಶ್ಯ.
- ಫಲಾನುಭವಿ ಹೆಸರನ್ನು ಸರಿಪಡಿಸುವುದು.
- ಪೆಂಡಿಗ್ ಇರುವ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಆಧಾರ್ ನಂಬರ್ ಮತ್ತು ಬ್ಯಾಂಕ್ ಖಾತೆ ಜೊತೆ ಸೀಡಿಂಗ್
- ಇ-ಕೆವೈಸಿ ಪೂರ್ಣಗೊಳಿಸಿ.
- ಯೋಜನೆಯ ಪ್ರಯೋಜನಗಳನ್ನು ಪಡೆಯಲು ಹೊಸ ರೈತರು ಅಧಿಕೃತ ವೆಬ್‌ಸೈಟ್ WWW.pmkisan.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು.
ನೀವು ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ ಕೇಂದ್ರವು ವರ್ಷಕ್ಕೆ ರೂ.6000 ನೀಡುತ್ತಿದೆ ಎಂದು ಈಗಾಗಲೇ ತಿಳಿಸಿದೆ. ಕೇಂದ್ರವು 3 ಕಂತುಗಳಲ್ಲಿ ರೈತರ ಖಾತೆಗೆ ಹಣ ಜಮಾ ಮಾಡುತ್ತಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಸ್ಥಳೀಯ ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಇಲ್ಲವೇ www.pmkisan.gov.in ವೆಬ್‌ಸೈಟ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಲು 1800115526 ಅಥವಾ 155261 ಗೆ ಕರೆ ಮಾಡಬಹುದು.
https://vijayaprabha.com/job-news-61/