ಪಾಟ್ನಾ: ಬಿಹಾರದ ಮುಜಾಫರ್‌ಪುರದಲ್ಲಿ 3 ವರ್ಷದ ಬಾಲಕಿಯ ಶವ ಟ್ರೋಲಿ ಬ್ಯಾಗ್‌ನೊಳಗೆ ಪತ್ತೆಯಾಗಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಘಾತಕಾರಿ ಸಂಗತಿ ಏನೆಂದರೆ ತಾಯಿಯೇ ಮಗುವಿನ ಹಂತಕಿ ಆಗಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಮುಜಾಫರ್‌ಪುರದ ನಿವಾಸಿ ಕಾಜಲ್ ಬಂಧಿತ ಆರೋಪಿ ಆಗಿದ್ದಾಳೆ. ಮನೋಜ್ ಕುಮಾರ್ ಮತ್ತು ಕಾಜಲ್ ಕುಮಾರಿ ದಂಪತಿಯ ಮೂರು ವರ್ಷದ ಮಗಳು ಮಿಷ್ಟಿ ಕುಮಾರಿ ತಾಯಿಯಿಂದಲೇ ಕೊಲೆಯಾದ ಮಗು. ಮಗುವಿನ ತಂದೆ ಮನೋಜ್ ಕುಮಾರ್ ಪತ್ನಿಯ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ವಿಚಾರಣೆ ವೇಳೆ ಬಾಯಿಬಿಟ್ಟಿರುವ ಕಾಜಲ್ ಕುಮಾರಿ, ತಾನು ರಾಮಪುರಹರಿ ಕ್ಷೇತ್ರದ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿರುವ ವಿಷಯ ಹೇಳಿದ್ದಾಳೆ. ಮದುವೆಯಾಗುವಂತೆ ಕೇಳಿದಾಗ ಯುವಕ, ನಿನ್ನ ಮಗಳು ನಮ್ಮ ಜೊತೆಯಲ್ಲಿರೋದು ಬೇಡ ಎಂಬ ಕಂಡೀಷನ್ ಹಾಕಿದ್ದನು. ಖಾಸಗಿ ವಾಹಿನಿಯಲ್ಲಿ ಕ್ರೈಂ ಪೆಟ್ರೋಲ್ ಶೋ ನೋಡುತ್ತಿದ್ದ ಮಹಿಳೆ ಅದರಲ್ಲಿ ತೋರಿಸಿದಂತೆ ಮಗುವನ್ನು ಕೊಂದು, ಶವವನ್ನು ಟ್ರೋಲಿ ಬ್ಯಾಗ್‌ನಲ್ಲಿ ತುಂಬಿ ಕಸ ಎಸೆಯುವ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಳು.