ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇಂಡಿಯನ್ ನೇವಿಯು ತನ್ನ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಫ್ಲೈನ್ ಮೂಲಕ ಬರುವಂತ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಇಲಾಖೆ ಹೇಳಿದೆ. ಹೀಗಾಗಿ ಎಲ್ಲಾ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೇ ಮಾಡಬೇಕಾಗಿದೆ.
ಭಾರತದ ನೌಕಾಪಡೆಯಲ್ಲಿರುವ ಶಾರ್ಟ್ ಸರ್ವೀಸ್ ಕಮಿಷನ್ ಆಫೀಸರ್ ಪೋಸ್ಟ್ಗಾಗಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿರುತ್ತದೆ. ಭಾರತೀಯ ನೌಕಾಪಡೆಗೆ ಸೇರಲು ನೀವು ಬಯಸಿದರೆ ಹಾಗೂ ಅಗತ್ಯ ಅರ್ಹತೆ ಹೊಂದಿದ್ದರೆ, ಈ ಅವಕಾಶ ಸದುಪಯೋಗ ಮಾಡಿಕೊಳ್ಳಿ. ಈ ಹುದ್ದೆಗಳ ನೇಮಕಾತಿಗಳಿಗಾಗಿ ಫಾರ್ಮ್ ಅನ್ನು ಭರ್ತಿ ಮಾಡಲು ಬಯಸುವ ಅಭ್ಯರ್ಥಿಗಳು ಲಿಂಕ್ ಅನ್ನು ಓಪನ್ ಮಾಡಿದ ನಂತರ ಸಂಪೂರ್ಣವಾಗಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.
ಹುದ್ದೆಗಳಿಗೆ ಇರುವ ಸಂಬಳ- 56,100 ರೂ.ಗಳು ಸಂಬಳ ಜೊತೆ ಇತರೆ ಸರ್ಕಾರಿ ಸೌಲಭ್ಯಗಳು ಇರುತ್ತವೆ
ಒಟ್ಟು ಹುದ್ದೆಗಳು- 250
ಕೆಲಸದ ಸ್ಥಳ- ಭಾರತದ್ಯಾಂತ
ಅರ್ಜಿಯ ಶುಲ್ಕ ಇರುವುದಿಲ್ಲ
ಜನರಲ್ ಸರ್ವೀಸ್ [GS(X)] ಹೈಡ್ರೋ ಕೇಡರ್ (ಎಕ್ಸ್ಕ್ಯುಟಿವ್ ಬ್ರಾಂಚ್)= 56
ಪೋಸ್ಟ್ ಪೈಲಟ್ (ಎಕ್ಸ್ಕ್ಯುಟಿವ್ ಬ್ರಾಂಚ್)= 24
ಹುದ್ದೆಗಳು
ನಾವೆಲ್ ಏರ್ ಆಪರೇಷನ್ ಆಫೀಸರ್ (ಎಕ್ಸ್ಕ್ಯುಟಿವ್ ಬ್ರಾಂಚ್)= 21 ಹುದ್ದೆಗಳು
ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) (ಎಕ್ಸ್ಕ್ಯುಟಿವ್ ಬ್ರಾಂಚ್)= 20 ಕೆಲಸಗಳು
ಲಾಜಿಸ್ಟಿಕ್ಸ್ (ಎಕ್ಸ್ಕ್ಯುಟಿವ್ ಬ್ರಾಂಚ್)= 20 ಪೋಸ್ಟ್ಗಳು
ನಾವೆಲ್ ಆರ್ಮಮೆಂಟ್ ಇನ್ಸ್ಪೆಕ್ಟರ್ ಕೇಡರ್ = 16 ಹುದ್ದೆಗಳು
ಎಜುಕೇಶನ್ ಬ್ರಾಂಚ್- 15 ಹುದ್ದೆಗಳು
ಇಂಜಿನಿಯರಿಂಗ್ ಬ್ರಾಂಚ್- 36 ಪೋಸ್ಟ್
ಎಲೆಕ್ಟ್ರಿಕಲ್ ಬ್ರಾಂಚ್- 42 ಹುದ್ದೆಗಳು
ವಿದ್ಯಾರ್ಹತೆ– ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕನಿಷ್ಠ ಶೇ.60 ಅಂಕಗಳೊಂದಿಗೆ BE, ಬಿಎಸ್ಸಿ, ಬಿ.ಕಾಮ್, ಪಿಜಿ ಡಿಪ್ಲೊಮಾ, B.Tech, MSc, MCA ಅಥವಾ MBA ಪದವಿ ಪಡೆದಿರಬೇಕು.
ಇಷ್ಟೇ ಅಲ್ಲದೇ ಅಭ್ಯರ್ಥಿಯು 10 ಮತ್ತು 12 ನೇ ತರಗತಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಕನಿಷ್ಠ ಶೇ. 60ರಷ್ಟು ಅಂಕ ಪಡೆದಿರಬೇಕು.