Ganesha Chaturthi: ಒಮ್ಮೆ ಗಣೇಶನು ಚಂದ್ರಲೋಕದಿಂದ ಲಡ್ಡುಗಳೊಂದಿಗೆ ಬರುತ್ತಿದ್ದಾಗ, ದಾರಿಯಲ್ಲಿ ಚಂದ್ರದೇವ ಕಂಡರು. ಗಣೇಶನ ಕೈಯಲ್ಲಿರುವ ಲಡ್ಡುಗಳು ಮತ್ತ ಗಣಪನ ದೊಡ್ಡ ಹೊಟ್ಟೆಯನ್ನು ನೋಡಿ ಚಂದ್ರ ದೇವನು ನಗಲು ಆರಂಭಿಸಿದನು.
ಇದರಿಂದ ಕೋಪಗೊಂಡ ಗಣಪತಿಯು ಚಂದ್ರ ದೇವನನ್ನು ಶಪಿಸಿದನು. ಚಂದ್ರದೇವ ತನ್ನನ್ನು ನೋಡಿ ನಗುತ್ತಿರುವುದನ್ನು ಕಂಡ ಗಣೇಶನು ಕೋಪಗೊಂಡು ಚಂದ್ರದೇವನು ಕ್ಷೀಣಿಸುವಂತಾಗಲಿ ಎಂದು ಶಾಪವನ್ನು ನೀಡುತ್ತಾನೆ. ಅಂದಿನಿಂದ ಚತುರ್ಥಿ ದಿನ ಚಂದ್ರನನ್ನು ನೋಡಿದರೆ ಕಳಂಕ ಬರುತ್ತದೆ ಎಂದು ನಂಬಲಾಗಿದೆ.
ಚತುರ್ಥಿ ದಿನ ಚಂದ್ರನನ್ನು ನೋಡಿದರೆ ದೋಷ ಪರಿಹಾರಕ್ಕೆ ಹೀಗೆ ಮಾಡಿ!
ಚೌತಿಯ ದಿನದಂದು ಚಂದ್ರನನ್ನು ನೋಡಬಾರದು. ಏನಾದರೂ ಅಪ್ಪಿ ತಪ್ಪಿ ಚಂದ್ರನನ್ನು ನೋಡಿದರೆ ಸುಳ್ಳು ಅಪವಾದ ಬರುತ್ತದೆ ಎನ್ನಲಾಗಿದೆ. ಶ್ರೀ ಕೃಷ್ಣ ಕೂಡ ಚೌತಿಯ ಚಂದ್ರನನ್ನು ನೋಡಿ ಶಮಂತಕ ಮಣಿಯನ್ನು ಕದ್ದ ಆರೋಪ ಎದುರಿಸಿದ್ದ. ಹೀಗಾಗಿ ಇಂದಿಗೂ ಜನರು ಚೌತಿಯಂದು ಚಂದ್ರನ ದರ್ಶನ ಮಾಡಬಾರದು ಎನ್ನುತ್ತಾರೆ.
ಒಂದುವೇಳೆ ಗಣಪತಿ ಹಬ್ಬದಂದು ಅಪ್ಪಿತಪ್ಪಿ ಚಂದ್ರನನ್ನು ನೋಡಿದರೆ ಕೃಷ್ಣ ಶಮಂತಕ ಮಣಿ ಕಥೆಯನ್ನು ಕೇಳಿದರೆ ಈ ಅಪವಾದ ಕಾಡುವುದಿಲ್ಲ. ಹೀಗಾಗಿ ಚಂದ್ರನನ್ನು ನೋಡಿದವರು ಈ ಕಥೆಯನ್ನು ಕೇಳುತ್ತಾರೆ.
https://vijayaprabha.com/why-do-they-offer-garike-grass-to-ganesha/