Paralympics: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ F57 ಶಾಟ್‌ಪುಟ್ ಸ್ಪರ್ಧೆಯಲ್ಲಿ ಭಾರತದ ಹೊಕಾಟೊ ಹೊಟೊಶ್ ಕಂಚಿನ ಪದಕವನ್ನು ಗೆದ್ದಿದ್ದು,ಇದರೊಂದಿಗೆ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.
ಹೌದು, 14.65 ಮೀಟರ್ ಶಾಟ್ ಎಸೆಯುವ ಮೂಲಕ ಹೊಕಾಟೊ ಹೊಟೊಶ್ ತಮ್ಮ ಅಮೋಘ ಪ್ರದರ್ಶನ ತೋರಿದ್ದಾರೆ. ಇರಾನ್‌ನ ಯಾಶಿನ್ 15.96 ಮೀ ಎಸೆದು ಮೊದಲ ಸ್ಥಾನ ಮತ್ತು ಬ್ರೆಜಿಲ್‌ನ ಥಿಯಾಗೊ 15.06 ಮೀ ಎಸೆದು ಎರಡನೇ ಸ್ಥಾನ ಪಡೆದರು.
ಹೈಜಂಪ್‌ನಲ್ಲಿ ಚಿನ್ನ ಗಳಿಸಿದ ಪ್ರವೀಣ್
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಶುಕ್ರವಾರ ನಡೆದ ಪುರುಷರ ಹೈಜಂಪ್-T64 ಸ್ಪರ್ಧೆಯಲ್ಲಿ ಭಾರತದ ಹೈಜಂಪರ್ ಪ್ರವೀಣ್ ಕುಮಾರ್ ಚಿನ್ನದ ಪದಕ ಪಡೆದರು. ಪುರುಷರ ಹೈಜಂಪ್ ಟಿ 64 ವಿಭಾದ ಫೈನಲ್‌ನಲ್ಲಿ 2.8 ಮೀ ಎತ್ತರ ಜಿಗಿದ ಭಾರತ ಪ್ರವೀಣ್ ಕುಮಾರ್ ಇತಿಹಾಸವನ್ನು ರಚಿಸಿ, ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.
ಒಂದೇ ಪ್ಯಾರಾಲಿಂಪಿಕ್ಸ್‌ನಲ್ಲಿ ಅತ್ಯಧಿಕ ಚಿನ್ನದ ಪದಕ ಗೆದ್ದ ದಾಖಲೆ ಬರೆದ ಭಾರತ
ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಲಭಿಸಿದ ಆರನೇ ಚಿನ್ನದ ಪದಕ ಇದಾಗಿದೆ. ಇದರೊಂದಿಗೆ, ಭಾರತವು ಒಂದೇ ಪ್ಯಾರಾಲಿಂಪಿಕ್ಸ್ ಆವೃತ್ತಿಯಲ್ಲಿ ಅತ್ಯಧಿಕ ಚಿನ್ನ ಗೆದ್ದ ದಾಖಲೆ ಬರೆದಿದ್ದು, ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಐದು ಚಿನ್ನದ ಪದಕ ಗೆದ್ದಿದ್ದ ಹಿಂದಿನ ದಾಖಲೆಯನ್ನು ಮೀರಿಸಿದೆ.
ಪ್ಯಾರಾಲಿಂಪಿಕ್ಸ್‌ನಲ್ಲಿ ಏಕೈಕ ಕಂಚಿನ ಪದಕ ಗೆದ್ದ ಪಾಕಿಸ್ತಾನ
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಇದೇ ಸೆ.8ಕ್ಕೆ ಅಂತ್ಯವಾಗಲಿದ್ದು, ಈ ನಡುವೆ ಪಾಕಿಸ್ತಾನಕ್ಕೆ ಏಕೈಕ ಪದಕ ಸಿಕ್ಕಿದೆ. ಪ್ಯಾರಾ ಅಥ್ಲೀಟ್, ಹೈದರ್ ಅಲಿ ಡಿಸ್ಕಸ್ ಎಸೆತದಲ್ಲಿ 52.54 ಮೀಟರ್ ದೂರ ಡಿಸ್ಕಸ್ ಎಸೆದು ಪದಕ ಗೆದ್ದರು.
ಹೈದರ್ ಅಲಿ ಈ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದು, ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಮೊದಲ ಚಿನ್ನ, ಮೊದಲ ಬೆಳ್ಳಿ ಮತ್ತು ಮೊದಲ ಕಂಚಿನ ಪದಕ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೈದರ್ ಅಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಇದುವರೆಗೆ ಒಟ್ಟು 4 ಪದಕಗಳನ್ನು ಗೆದ್ದಿದ್ದಾರೆ.
https://vijayaprabha.com/heavy-rain-in-these-districts-big-alert/