Unified Pension Scheme: ಪಿಂಚಣಿ ಯೋಜನೆಗೆ (Pension Scheme) ಸಂಬಂಧಿಸಿದಂತೆ ಮೋದಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹಳೆಯ ಪಿಂಚಣಿ ಯೋಜನೆ & ಹೊಸ ಪಿಂಚಣಿ ಯೋಜನೆಗೆ ಬದಲಾಗಿ ಏಕೀಕೃತ ಪಿಂಚಣಿ ಯೋಜನೆಗೆ (Unified Pension Scheme) ಅನುಮೋದನೆ ನೀಡಲಾಗಿದೆ.
ಸರ್ಕಾರಿ ನೌಕರರಿಗೆ ಪಿಂಚಣಿ ಖಾತ್ರಿಪಡಿಸುವ ಏಕೀಕೃತ ಪಿಂಚಣಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು 25 ವರ್ಷಗಳ ಕನಿಷ್ಠ ಅರ್ಹತಾ ಸೇವೆಗಾಗಿ ನಿವೃತ್ತಿಗೆ ಮುನ್ನ 12 ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ ಶೇ.50ರಷ್ಟು ಆಗಿದೆ. ಈ ಯೋಜನೆಯಡಿ ಖಾತರಿಪಡಿಸಿದ ಕುಟುಂಬ ಪಿಂಚಣಿ ಮತ್ತು ಖಚಿತವಾದ ಕನಿಷ್ಠ ಪಿಂಚಣಿಯೂ ಇರಲಿದೆ.
ಈ ಯೋಜನೆಯು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದ್ದು, ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ & ಹೊಸ ಏಕೀಕೃತ ಪಿಂಚಣಿ ಯೋಜನೆಗಳ ನಡುವೆ ಆಯ್ಕೆ ಮಾಡಲು ಅನುಮತಿಸುತ್ತದೆ. ಇನ್ನು ರಾಜ್ಯ ಸರ್ಕಾರಗಳು ಸಹ ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. UPS ಯೋಜನೆಯಿಂದ ಒಟ್ಟಾರೆ 90 ಲಕ್ಷ ನೌಕರರಿಗೆ ಪ್ರಯೋಜನವಾಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
Unified Pension Scheme: ಹೊಸ ಪಿಂಚಣಿ, ತಿಂಗಳಿಗೆ 10 ಸಾವಿರ ರೂ.
ಕೇಂದ್ರ ಏಕೀಕೃತ ಪಿಂಚಣಿ ಯೋಜನೆ (UPS) ಜಾರಿಗೊಳಿಸಿದ್ದು, ಈ ಯೋಜನೆಯಡಿ, ಉದ್ಯೋಗಿಯು ಕನಿಷ್ಠ 25 ವರ್ಷಗಳ ಕಾಲ ಕೆಲಸ ಮಾಡಿದ್ದರೆ, ನಿವೃತ್ತಿಯ ಮೊದಲು, ಕೆಲಸದ ಕೊನೆಯ 12 ತಿಂಗಳ 50% ಸಂಬಳವನ್ನು ಪಿಂಚಣಿಯಾಗಿ ನೀಡಲಾಗುತ್ತದೆ. ಪಿಂಚಣಿದಾರ ಮರಣ ಹೊಂದಿದ್ದರೆ, ಉದ್ಯೋಗಿಯ ಮರಣದ ಸಮಯದವರೆಗೆ ಪಡೆದ ಪಿಂಚಣಿಯ 60% ಅವನ ಕುಟುಂಬವು ಪಡೆಯುತ್ತದೆ. 10 ವರ್ಷಗಳ ನಂತರ ಯಾರಾದರೂ ಕೆಲಸವನ್ನ ತೊರೆದರೆ, 10 ಸಾವಿರ ರೂ. ಪಿಂಚಣಿ ನೀಡಲಾಗುತ್ತದೆ.
Unified Pension Scheme: ‘ಏಕೀಕೃತ ಪಿಂಚಣಿ ಯೋಜನೆ’ಗೆ ಯಾರು ಅರ್ಹರು?
ಕೇಂದ್ರ ಜಾರಿಗೆ ತರಲಿರುವ ಹೊಸ ಪಿಂಚಣಿ ಯೋಜನೆಯಾದ ‘ಏಕೀಕೃತ ಪಿಂಚಣಿ ಯೋಜನೆ’ಯಲ್ಲಿ ಸುಮಾರು 23 ಲಕ್ಷ ನೌಕರರು ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಕೇಂದ್ರ ನೌಕರರು ಹೊಸ ಪಿಂಚಣಿ ಯೋಜನೆಯಲ್ಲಿ NPSನಲ್ಲಿ ಉಳಿಯಲು ಅಥವಾ UPSಗೆ ಸೇರಲು ಹಕ್ಕನ್ನು ಹೊಂದಿರುತ್ತಾರೆ. ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಥವಾ UPS ಆಯ್ಕೆಗೆ ಅವಕಾಶವಿರುತ್ತದೆ. 2004ರಿಂದ NPS ಅಡಿಯಲ್ಲಿ ನಿವೃತ್ತರಾದವರು & ಮಾರ್ಚ್ 31, 2025ರವರೆಗೆ ನಿವೃತ್ತರಾಗುವ UPSಗೆ ಅರ್ಹರಾಗಿರುತ್ತಾರೆ.
https://vijayaprabha.com/when-is-shri-krishna-janmashtami/