Housewife commits suicide: ಅಶ್ಲೀಲ ವಿಡಿಯೋ ತೋರಿಸಿ ಕಿರುಕುಳ ನೀಡುತ್ತಿದ್ದ ಗಂಡನ ನಡೆಗೆ ಬೇಸತ್ತು ಮಹಿಳೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಳಿಮಾವು ಅಕ್ಷಯನಗರದಲ್ಲಿ ನಡೆದಿದೆ.
ಹೌದು, ಅನುಷಾ ಆತ್ಮಹತ್ಯೆಗೆ ಶರಣಾದ ದುರ್ದೈಯಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ. ಕಳೆದ 5 ವರ್ಷದ ಹಿಂದೆ ಅನುಷಾಗೆ ಶ್ರೀಹರಿ ಎಂಬಾತನ ಜೊತೆ ವಿವಾಹವಾಗಿತ್ತು, ದಂಪತಿಗೆ ಎರಡು ವರ್ಷದ ಮಗು ಇದೆ.
ಪತಿ ಶ್ರೀಹರಿ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಹೀಗೆ ಸಹಕರಿಸು ಎಂದು ಟಾರ್ಚರ್ ಕೊಡ್ತಿದ್ದ. ಅಲ್ಲದೇ ಆಕೆಯ ಮುಂದೆಯೇ ಇನ್ನೊಂದು ಹುಡುಗಿ ಜೊತೆ ಇರುತ್ತಿದ್ದು, ಇದನ್ನ ಪ್ರಶ್ನಿಸಿದ್ದಕ್ಕೆ ಹೆಂಡತಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ ಎನ್ನಲಾಗಿದೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://vijayaprabha.com/savings-scheme/