Renukaswamy murder case: ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದರಿಂದಲೇ ಆತನ ಕೊಲೆಯಾಗಿರುವ ಅಂಶ ಹೊರಬೀಳುತ್ತಿದೆ. ಪಟ್ಟಣಗೆರೆ ಶೆಡ್‌ಗೆ ಕರೆತಂದಾಗ, ಪವಿತ್ರಾಗೌಡ (pavitra Gowda) ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಅದೇ ಚಪ್ಪಲಿ ಕಸಿದುಕೊಂಡು ದರ್ಶನ್ (Darshan) ಸಹ ಹಲ್ಲೆ ನಡೆಸಿದ್ದಾರೆ.
ಇದೇ ವೇಳೆ ರೇಣುಕಾಸ್ವಾಮಿ ಎದೆಗೆ ಒದ್ದ ದರ್ಶನ್, ನಿನ್ನ ಸಂಬಳ ಎಷ್ಟೋ? ತಿಂಗಳಿಗೆ 20 ಸಾವಿರ ಸಂಬಳವಿರುವ ನೀನು, ನನ್ನ ಪ್ರೇಯಸಿಯನ್ನು ಸಾಕ್ತಿಯಾ? ಅವಳ ದಿನದ ಖರ್ಚು ಎಷ್ಟು ಗೊತ್ತಾ? ಎಂದು ಹೇಳಿ ಹಲ್ಲೆ ನಡೆಸಿದ್ದರು’ ಎಂದು ಮೂಲಗಳು ತಿಳಿಸಿವೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ 65 ಫೋಟೋಗಳು ಪತ್ತೆ
ರೇಣುಕಾಸ್ವಾಮಿ ಕೊಲೆ ಬೆನ್ನಲ್ಲೇ ಆಪ್ತೆ ಪವಿತ್ರಾ ಗೌಡಗೆ ದರ್ಶನ್ ಕರೆ ಮಾಡಿ, ಅಕಸ್ಮಾತ್ ಪೊಲೀಸರು ಏನಾದರೂ ಕೇಳಿದರೆ ಏನೂ ಗೊತ್ತಿಲ್ಲವೆಂದು ಹೇಳಬೇಕಾಗಿ ತಿಳಿಸಿದ ಮತ್ತು ಪ್ರಕರಣದಲ್ಲಿ ತಮ್ಮಬ್ಬಿರ ಹೆಸರು ತಳುಕು ಹಾಕದಂತೆ ಆರೋಪಿಗಳಿಗೆ ತಿಳಿಸಿದ ವಿಚಾರವನ್ನು ತನಿಖಾ ತಂಡ ಪತ್ತೆ ಹಚ್ಚಿದೆ.
ನಟಿ ಪವಿತ್ರಾ ಗೌಡ ಫೋನ್‌ನಲ್ಲಿದ್ದ ಡೇಟಾವನ್ನು ಪೊಲೀಸರು ರಿಟ್ರೀವ್ ಮಾಡಿದ್ದು, ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ 65 ಫೋಟೋಗಳು ಅದರಲ್ಲಿ ಪತ್ತೆಯಾಗಿವೆ ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.
17 ಸ್ಕ್ರೀನ್ ಶಾಟ್, ರೇಣುಕಾಸ್ವಾಮಿ ಕಳಿಸಿದ್ದ 20 ಅಶ್ಲೀಲ ಸಂದೇಶಗಳು ಪವಿತ್ರಾ ಗೌಡ ಫೋನ್‌ನಲ್ಲಿ ಸಿಕ್ಕಿವೆ. ಉಳಿದಂತೆ, ಆರೋಪಿ ವಿನಯ್ ಫೋನ್‌ನಲ್ಲಿ ಲಭಿಸಿದ 10 ಫೋಟೋಗಳು ಹಾಗೂ ಕೊಲೆ ಕುರಿತ 30 ಆಡಿಯೋ ಸಂಭಾಷಣೆಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
https://vijayaprabha.com/housewife-commits-suicide-by-pouring-petrol/