Bad Breath: ಅನೇಕರಿಗೆ ಎಷ್ಟೇ ಕಾಳಜಿ ಮಾಡಿದರು ಬಾಯಿಯ ದುರ್ವಾಸನೆ (Bad Breath) ಹೋಗುವುದೇ ಇಲ್ಲ. ದಿನಕ್ಕೆ 2 ಸಲ ಹಲ್ಲುಜ್ಜಿದರೂ ಬಾಯಿ ಕೆಟ್ಟ ವಾಸನೆ ಬರುತ್ತದೆ. ರಾತ್ರಿ ಮಲಗುವ ಮುನ್ನ ಹಲ್ಲುಜ್ಜಿದರೂ ಬೆಳಗ್ಗೆ ಬಾಯಿ ಕೆಟ್ಟ ವಾಸನೆ ಬರುತ್ತದೆ. ಕಾರಣ ಬಾಯಿಯಲ್ಲಿ ಯಾವಾಗಲೂ ಬ್ಯಾಕ್ಟೀರಿಯಾ ಇರುತ್ತದೆ.
ಇದಕ್ಕೆ ಮನೆಯಲ್ಲೇ ಇದೆ ಪರಿಹಾರ ಇದೆ. ಹೌದು, ಬಾಯಿಯ ದುರ್ವಾಸನೆ ಹೋಗಲಾಡಿಸಬೇಕಾದಾರೆ ಊಟ, ತಿಂಡಿ ಆದ ನಂತರ ಒಂದು ಲೋಟ ನೀರಿಗೆ ನಿಂಬೆರಸ ಬೆರೆಸಿ ಕುಡಿಯಿರಿ. ಇದರಿಂದ ಬಾಯಿಯ ದರ್ವಾಸನೆ ಕಡಿಮೆಯಾಗುತ್ತದೆ.
ಊಟವಾದ ಮೇಲೆ ವೀಳ್ಯದೆಲೆ ಹಾಕಿಕೊಳ್ಳಿ, ಇದು ದುರ್ವಾಸನೆ ಹೋಗಲಾಡಿಸುತ್ತದೆ. ಏಲಕ್ಕಿಯನ್ನು ಅಗಿಯುವುದರಿಂದಲೂ ಬಾಯಿಯ ವಾಸನೆ ಕಡಿಮೆ ಆಗುತ್ತದೆ.
ಹಲ್ಲಿನ ಸಮಸ್ಯೆಗಳಲ್ಲಿ ನೋವನ್ನು ನಿವಾರಿಸಲು ಲವಂಗವನ್ನು ಸಹ ಬಳಸಲಾಗುತ್ತದೆ. ಇದರಲ್ಲಿನ ಯುಜೆನಾಲ್ ಬಾಯಿಯ ದುರ್ವಾಸನೆ ಹೋಗಲಾಡಿಸಲು ತುಂಬಾ ಸಹಕಾರಿ.
ಸೋಂಪು ತಿನ್ನುವುದರಿಂದಲೂ ಬಾಯಿಯ ವಾಸನೆ ಕಡಿಮೆ ಆಗುತ್ತದೆ.
https://vijayaprabha.com/anywhere-property-registration-scheme-implemented-from-2nd-sep/