ಇನ್ಮುಂದೆ ಆಂಧ್ರದ ತಿರುಪತಿಯಲ್ಲಿ ಹಿಂದೂಗಳಿಗೆ ಮಾತ್ರ ಕೆಲಸ: ನೂತನ ಅಧ್ಯಕ್ಷ ನಾಯ್ಡು ಸೂಚನೆ

ಹೈದರಾಬಾದ್‌: ಇತ್ತೀಚೆಗೆ ಲಡ್ಡು ಪ್ರಸಾದದ ವಿವಾದದಿಂದ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದ ತಿಮ್ಮಪ್ಪನ ಸನ್ನಿಧಿಯಲ್ಲಿ ಇನ್ಮುಂದೆ ಹಿಂದೂಗಳು ಮಾತ್ರ ಕೆಲಸ ಮಾಡಲಿದ್ದಾರೆ. ಹೌದು, ಹಿಂದೂಗಳ ಆರಾಧ್ಯ ದೈವ ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಾಲಯದಲ್ಲಿ ಕೆಲಸ ಮಾಡುವ ಎಲ್ಲಾ…

ಹೈದರಾಬಾದ್‌: ಇತ್ತೀಚೆಗೆ ಲಡ್ಡು ಪ್ರಸಾದದ ವಿವಾದದಿಂದ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದ ತಿಮ್ಮಪ್ಪನ ಸನ್ನಿಧಿಯಲ್ಲಿ ಇನ್ಮುಂದೆ ಹಿಂದೂಗಳು ಮಾತ್ರ ಕೆಲಸ ಮಾಡಲಿದ್ದಾರೆ.

ಹೌದು, ಹಿಂದೂಗಳ ಆರಾಧ್ಯ ದೈವ ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಾಲಯದಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿ ಹಿಂದೂಗಳೇ ಆಗಿರಬೇಕು ಎಂದು ಟಿಟಿಡಿಯ ನೂತನ ಅಧ್ಯಕ್ಷ ಬಿ.ಆರ್‌.ನಾಯ್ಡು ಸೂಚಿಸಿದ್ದಾರೆ.

ಈ ಹಿಂದೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಜಗನ್ ಮೋಹನ್ ರೆಡ್ಡಿ ಅವಧಿಯಲ್ಲಿ ತಿರುಪತಿಗೆ ಹಲವು ಹಿಂದೂಯೇತರರ ನೇಮಕ ಮಾಡಿದ ವಿಷಯ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಜೊತೆಗೆ ಜಗನ್‌ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಸಲು ಬಳಸಿದ ತುಪ್ಪದಲ್ಲಿ ದನ ಮತ್ತು ಹಂದಿಯ ಕೊಬ್ಬಿನ ಅಂಶ ಪತ್ತೆಯಾಗಿದೆ ಎಂಬ ವಿಷಯ ಕೂಡಾ ಭಾರೀ ಗದ್ದಲ ಸೃಷ್ಟಿಸಿತ್ತು.

Vijayaprabha Mobile App free

ಈ ಹಿನ್ನೆಲೆಯಲ್ಲಿ ನೂತನ ಟಿಡಿಪಿ ಸರ್ಕಾರ ಟಿಟಿಡಿಗೆ ಬಿ.ಆರ್‌.ನಾಯ್ಡು ಅಧ್ಯಕ್ಷತೆಯ 24 ಸದಸ್ಯರನ್ನು ಗುರುವಾರ ನೇಮಕ ಮಾಡಿತ್ತು. ಅದರ ಬೆನ್ನಲ್ಲೇ ಮಾತನಾಡಿದ ನಾಯ್ಡು, ‘ತಿರುಪತಿಯಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಗಳು ಹಿಂದೂಗಳಾಗಿರಬೇಕು. ಹಿಂದೂ ಸಿಬ್ಬಂದಿ ನೇಮಕ ನನ್ನ ಮೊದಲ ಪ್ರಯತ್ನ. ಇದರಲ್ಲಿ ಅನೇಕ ಸಮಸ್ಯೆಗಳಿವೆ. ಅದನ್ನು ಪರಿಶೀಲಿಸುತ್ತೇವೆ’ ಎಂದರು. ಅಲ್ಲದೇ ‘ಈ ಬಗ್ಗೆ ಆಂಧ್ರಪ್ರದೇಶ ಸರ್ಕಾರದ ಜೊತೆಗೆ ಮಾತುಕತೆಯನ್ನು ನಡೆಸುತ್ತೇವೆ. ಈಗಾಗಲೇ ಕೆಲಸದಲ್ಲಿರುವ ಅನ್ಯಧರ್ಮಿಯ ಸಿಬ್ಬಂದಿಯನ್ನು ಬೇರೆ ಇಲಾಖೆಗೆ ಕಳುಹಿಸಬೇಕೇ, ಅಥವಾ ಸ್ವಯಂ ನಿವೃತ್ತಿ ನೀಡಬೇಕೆಂಬ ಬಗ್ಗೆ ಚರ್ಚಿಸುತ್ತೇವೆ’ ಎಂದು ಹೇಳಿದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.