ರಷ್ಯಾದ ಜತೆಗೆ ವ್ಯವಹರಿಸುವ 4 ಭಾರತೀಯ ಕಂಪನಿಗಳಿಗೆ ಅಮೆರಿಕ ದಿಗ್ಬಂಧನ

ನವದೆಹಲಿ: ರಷ್ಯಾದ ಜತೆಗೆ ಭಾರತ ವ್ಯವಹಾರ ನಡೆಸುತ್ತಿರುವುದಕ್ಕೆ ಸಿಡಿಮಿಡಿಗೊಂಡಿರುವ ಅಮೆರಿಕ ಭಾರತದ ಕಂಪನಿಗಳ ಮೇಲೆ ನಿರ್ಭಂದ ಹೇರಿದೆ. ಉಕ್ರೇನ್‌ ಮೇಲೆ ಸಮರ ನಡೆಸುತ್ತಿರುವ ರಷ್ಯಾ ಜತೆ ವ್ಯವಹಾರಿಕ ಸಂಬಂಧ ಹೊಂದಿರುವ ಭಾರತದ 4 ಕಂಪನಿಗಳಿಗೆ…

ನವದೆಹಲಿ: ರಷ್ಯಾದ ಜತೆಗೆ ಭಾರತ ವ್ಯವಹಾರ ನಡೆಸುತ್ತಿರುವುದಕ್ಕೆ ಸಿಡಿಮಿಡಿಗೊಂಡಿರುವ ಅಮೆರಿಕ ಭಾರತದ ಕಂಪನಿಗಳ ಮೇಲೆ ನಿರ್ಭಂದ ಹೇರಿದೆ.

ಉಕ್ರೇನ್‌ ಮೇಲೆ ಸಮರ ನಡೆಸುತ್ತಿರುವ ರಷ್ಯಾ ಜತೆ ವ್ಯವಹಾರಿಕ ಸಂಬಂಧ ಹೊಂದಿರುವ ಭಾರತದ 4 ಕಂಪನಿಗಳಿಗೆ ಅಮೆರಿಕ ದಿಗ್ಬಂಧನ ಹೇರಿದೆ. ತನ್ಮೂಲಕ ರಷ್ಯಾ-ಉಕ್ರೇನ್‌ ಸಮರದಲ್ಲಿ ಯಾವ ದೇಶದ ಪರವೂ ನಿಲುವು ತಳೆಯದೇ, ಶಾಂತಿ ಮಂತ್ರ ಜಪಿಸುತ್ತಿರುವ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಜತೆ ಮೊದಲಿನಿಂದಲೂ ಉತ್ತಮ ಬಾಂಧವ್ಯ ಹೊಂದಿರುವ ಭಾರತಕ್ಕೆ ಪರೋಕ್ಷವಾಗಿ ಕಠಿಣ ಎಚ್ಚರಿಕೆ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಸ್ಸೆಂಡ್‌ ಏವಿಯೇಷನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಮಾಸ್ಕ್‌ ಟ್ರಾನ್ಸ್‌, ಟಿಎಸ್‌ಎಂಡಿ ಗ್ಲೋಬಲ್‌ ಪ್ರೈವೇಟ್‌ ಲಿಮಿಟೆಡ್‌, ಫ್ಯುಟ್ರೆವೋ ಕಂಪನಿಗಳು ಅಮೆರಿಕದಿಂದ ದಿಗ್ಬಂಧನಕ್ಕೆ ಒಳಗಾಗಿವೆ. ಭಾರತ ಮಾತ್ರವೇ ಅಲ್ಲದೆ ಇನ್ನೂ ಐದು ದೇಶಗಳ ಸುಮಾರು 400 ಕಂಪನಿಗಳಿಗೆ ಅಮೆರಿಕ ದಿಗ್ಬಂಧನ ವಿಧಿಸಿದೆ. ಚೀನಾ, ಮಲೇಷ್ಯಾ, ಥಾಯ್ಲೆಂಡ್‌, ಟರ್ಕಿ ಹಾಗೂ ಯುಎಇ ಆ ದೇಶಗಳಾಗಿವೆ.

Vijayaprabha Mobile App free

ಭಾರತೀಯ ಕಂಪನಿಗಳು ‘ಸಾಮಾನ್ಯ ಆದ್ಯತಾ ಪಟ್ಟಿ’ (ಸಿಎಚ್‌ಪಿಎಲ್‌- ಕಾಮನ್‌ ಹೈಪ್ರಯಾರಿಟಿ ಲಿಸ್ಟ್‌)ಯಲ್ಲಿರುವ ವೈಮಾನಿಕ ಬಿಡಿಭಾಗಗಳು, ಎಲೆಕ್ಟ್ರಾನಿಕ್‌ ವಸ್ತುಗಳನ್ನು ರಷ್ಯಾದ ಕಂಪನಿಗಳಿಗೆ ಸರಬರಾಜು ಮಾಡಿದ ಕಾರಣಕ್ಕೆ ದಿಗ್ಬಂಧನ ಹೇರಲಾಗಿದೆ.

ಅಮೆರಿಕ ಈ ರೀತಿ ಭಾರತೀಯ ಕಂಪನಿಗಳಿಗೆ ದಿಗ್ಬಂಧನ ವಿಧಿಸುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಇಂತಹ ಕ್ರಮಗಳನ್ನು ಕೈಗೊಂಡು ಬಳಿಕ ವಾಪಸ್‌ ಪಡೆದ ನಿದರ್ಶನಗಳು ಇವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.