ಇತ್ತೀಚೆಗೆ ನಕಲಿ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಇದೀಗ ಪೊಲೀಸರ ಹೆಸರಿನಲ್ಲಿ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
ಹೌದು, ಮಹಿಳೆಯರಿಗೆ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಒಂಟಿ ಮಹಿಳೆಯರಿಗೆ ವಾಹನ ಸಿಗದಿದ್ದರೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಕುರಿತು ಖುದ್ದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಸ್ಪಷ್ಟನೆಯಲ್ಲಿ ಏನಿದೆ? ವೈರಲ್ ಆಗುತ್ತಿರುವ ಮೆಸೇಜ್ ನ ಸತ್ಯಾಸತ್ಯತೆ ಏನು…? ಎಂಬುದರ ಕುರಿತು ಇಲ್ಲಿದೆ.
ವೈರಲ್ ಆಗಿರುವ ಮೆಸೇಜ್ ನಲ್ಲಿ ಏನಿದೆ?
ಪೊಲೀಸರು ಹೊಸದೊಂದು ಟ್ರಾವೆಲ್ ಸ್ಕೀಂ ಪ್ರಾರಂಭಿಸಿದ್ದು, ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುತ್ತಾರೆ.
ಜೊತೆಗೆ ಒಂಟಿ ಮಹಿಳೆಯರಿಗೆ ವಾಹನ ಸಿಗದಿದ್ದರೆ ಸಹಾಯವಾಣಿ ಸಂಖ್ಯೆ 1091 ಅಥವಾ 7837018555 ಗೆ ಕರೆ ಮಾಡಿ. ಪೊಲೀಸರು ಮನೆಗೆ ಬಿಟ್ಟು ಬರ್ತಾರೆ ಎಂಬ ಮೆಸೇಜ್ ಸಖತ್ ವೈರಲ್ ಆಗಿತ್ತು. ಜೊತೆಗೆ ಈ ಮೆಸೇಜ್‌ನ್ನು ಎಲ್ಲಾ ಮಹಿಳೆಯರಿಗೆ ಫಾರ್ವರ್ಡ್ ಮಾಡಿ ಎಂದೂ ಸಹ ಆ ಸಂದೇಶದಲ್ಲಿ ಹೇಳಲಾಗಿತ್ತು.
ರಾಜ್ಯ ಪೊಲೀಸ್ ಇಲಾಖೆಯ ಟ್ವೀಟ್ ಏನಿದೆ?;
ಗಮನಿಸಿ !!
ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನಿಯಂತ್ರಣ ಕೊಠಡಿಗೆ ಕರೆ ಮಾಡಿದಲ್ಲಿ, ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಮೆಸೇಜ್ ಹರಿದಾಡುತ್ತಿದ್ದು, ಈ ಮಾಹಿತಿಯು ಸುಳ್ಳಾಗಿದೆ. ತುರ್ತು ಸಹಾಯಕ್ಕಾಗಿ 112 ಗೆ ಕರೆಮಾಡಿ ಎಂದು ರಾಜ್ಯ ಪೊಲೀಸ್ ಇಲಾಖೆಯ ಟ್ವೀಟ್ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿ ಸಂಪೂರ್ಣ ಸುಳ್ಳಾಗಿದೆ.