ನ್ಯೂಯಾರ್ಕ್: ‘ಡೊನಾಲ್ಡ್ ಟ್ರಂಪ್ ಸೇಡು ತೀರಿಸಿಕೊಳ್ಳುವ ಗೀಳು ಹೊಂದಿದ್ದು, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರು ಗೆದ್ದರೆ ಶ್ವೇತಭವನಕ್ಕೆ ದ್ವೇಷಿಗಳ ಪಟ್ಟಿ ತರುತ್ತಾರೆ. ನಾನು ಗೆದ್ದರೆ ಮಾಡಬೇಕಾದ ಕೆಲಸಗಳ ಪಟ್ಟಿ ತರುವೆ’ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಡೆಮಾಕ್ರೆಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಹರಿಹಾಯ್ದರ.
ಲಾಸ್ ವೇಗಸ್‌ನಲ್ಲಿ ಮಾತನಾಡಿದ ಕಮಲಾ, ‘ಟ್ರಂಪ್ ಯಾರು ಎಂಬುದು ನಮಗೆಲ್ಲರಿಗೂ ಗೊತ್ತಿದೆ. ನಿಮ್ಮ ಜೀವನವನ್ನು ಹೇಗೆ ಉತ್ತಮಗೊಳಿಸಬೇಕೆಂದು ಯೋಚಿಸುವ ವ್ಯಕ್ತಿಯಲ್ಲ. ಅವರು ಹೆಚ್ಚು ಅಸ್ಥಿರವಾಗಿರುವ, ಸೇಡು ತೀರಿಸಿಕೊಳ್ಳುವ ಗೀಳು ಹೊಂದಿದ್ದಾರೆ. ಒಂದು ವೇಳೆ ಅವರು ಮತ್ತೆ ಆಯ್ಕೆಯಾದರೆ, ಶ್ವೇತಭವನಕ್ಕೆ ದ್ವೇಷಿಗಳ ಪಟ್ಟಿ ಹಿಡಿದು ತರುತ್ತಾರೆ. ಒಂದು ವೇಳೆ ನಾನು ಗೆದ್ದರೆ ನಿಮ್ಮ ಪರವಾಗಿ ಮಾಡಬೇಕಾದ ಕೆಲಸದ ಪಟ್ಟಿ ತರುವೆ’ ಎಂದರು.
ಇನ್ನು ಈ ರ್‍ಯಾಲಿ ವೇಳೆ ಅಮೆರಿಕದ ಪ್ರಸಿದ್ಧ ಗಾಯಕಿ ಜೆನ್ನಿಫರ್ ಲೋಪೆಜ್ ಅವರು ಕಮಲಾ ಹ್ಯಾರಿಸ್‌ಗೆ ಬೆಂಬಲ ಸೂಚಿಸಿದರು.