Empox infection: ಪಾಕಿಸ್ತಾನದಲ್ಲಿ (Pakistan) ಎಂಪಾಕ್ಸ್ ಸೋಂಕು (Empox infection) ಪತ್ತೆಯಾಗಿರುವುದು ಭೀತಿ ಹೆಚ್ಚಿಸಿದೆ. ಹೀಗಾಗಿ ಭಾರತದಲ್ಲಿ (India) ಹೈ ಅಲರ್ಟ್ ಘೋಷಿಸಲಾಗಿದೆ.
ಹೌದು, ಪಾಕ್ ಆಕ್ರಮಿತ ಕಾಶ್ಮೀರದಲ್ಲೇ 4 ಮಂದಿಗೆ ಸೋಂಕು ದೃಢಪಟ್ಟಿದೆ. ಈ ವೈರಸ್ ಭಾರತಕ್ಕೆ ಕಾಲಿಡುವ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕು ತಗುಲಿದ ನಂತರ 6ರಿಂದ 13 ದಿನಗಳಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ 5ರಿಂದ 21 ದಿನಗಳ ಅವಧಿಯಲ್ಲೂ ಕಾಣಿಸಿಕೊಳ್ಳಬಹುದು. ಭಾರತದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.
ಎಂಪಾಕ್ಸ್ ಹೇಗೆ ಹರಡುತ್ತದೆ?
ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಡಬ್ಲ್ಯುಹೆಚ್ಒ ಘೋಷಿಸಿರುವ ಎಂಪಾಕ್ಸ್, ಮುಖ್ಯವಾಗಿ ಸೋಂಕಿತ ವ್ಯಕ್ತಿಯೊಂದಿಗಿನ ನಿಕಟ ಸಂಪರ್ಕದಿಂದ ಹರಡುತ್ತದೆ.
“ನಿಕಟ ಸಂಪರ್ಕ ಎಂದರೆ ಚರ್ಮದಿಂದ ಚರ್ಮಕ್ಕೆ (ಸ್ಪರ್ಶ ಮತ್ತು ಲೈಂಗಿಕತೆ) ಮತ್ತು ಬಾಯಿಯಿಂದ ಬಾಯಿ ಅಥವಾ ಬಾಯಿಯಿಂದ ಚರ್ಮದ ಸಂಪರ್ಕಗಳಾಗಿದ್ದು, ಎಂಪಾಕ್ಸ್ ಹೊಂದಿರುವ ವ್ಯಕ್ತಿಯ ಮುಖಾಮುಖಿಯಿಂದಲೂ ಸಹ ಹರಡಬಹುದು,” ಎಂದು ಡಬ್ಲ್ಯುಹೆಚ್ಒ ಹೇಳಿದೆ. ಸೋಂಕಿತ ವ್ಯಕ್ತಿ ಬಳಸುವ ವಸ್ತುಗಳು, ಬಟ್ಟೆಗಳ ಸಂಪರ್ಕದಿಂದಲೂ ಹರಡುತ್ತದೆ.
ಎಂಪಾಕ್ಸ್ ಹೊಸ ಕೋವಿಡ್-19 ಅಲ್ಲ: ಡಬ್ಲ್ಯುಹೆಚ್ಒ ಅಧಿಕಾರಿ
ಹರಡುವಿಕೆಯನ್ನು ನಿಯಂತ್ರಿಸಬಹುದಾಗಿರುವುದರಿಂದ ಹೊಸ ಅಥವಾ ಹಳೆಯ ತಳಿ ಯಾವುದೇ ಆದರೂ ಎಂಪಾಕ್ಸ್ ಕೋವಿಡ್-19 ಅಲ್ಲ ಎಂದು ಡಬ್ಲ್ಯುಹೆಚ್ಒ ಯುರೋಪ್‌ನ ಪ್ರಾದೇಶಿಕ ನಿರ್ದೇಶಕ ಹ್ಯಾನ್ಸ್ ಕ್ಲಗ್ ತಿಳಿಸಿದ್ದಾರೆ.
“ಜಾಗತಿಕವಾಗಿ ಎಂಪಾಕ್ಸ್ ನಿಯಂತ್ರಣಕ್ಕೆ ನಾವು ವ್ಯವಸ್ಥೆಯ ಜೊತೆ ಸರಿಯಾಗಿ ಕಾರ್ಯ ನಿರ್ವಹಿಸುತ್ತೇವೆಯೇ? ಅಥವಾ ನಾವು ಇನ್ನೊಂದು ಭಯದ ಸುಳಿಗೆ ಪ್ರವೇಶಿಸುತ್ತೇವೆಯೇ ಎಂಬುದು ನಾವು ನಾವು ಈಗ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ಅವಲಂಬಿಸಿದೆ,” ಎಂದು ಕ್ಲಗ್ ಹೇಳಿದ್ದಾರೆ.
https://vijayaprabha.com/heavy-rain-across-the-state/