Deepika Padukone: ಬಾಲಿವುಡ್ ಬ್ಯೂಟಿಫುಲ್ ಜೋಡಿಗಳಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿಯೂ ಒಂದು. ಸದ್ಯ ನಟಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದು, ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ದೀಪಿಕಾ ಗರ್ಭಿಣಿ ಅಲ್ಲ ಎಂದು ಟೀಕಿಸಿದವರಿಗೆ ತನ್ನ ಬೆತ್ತಲೆ ಹೊಟ್ಟೆಯ ಫೋಟೋ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
ಹೌದು, ಕರಾವಳಿ ಮೂಲದ ದೀಪಿಕಾ, ಬಾಲಿವುಡ್ ನಟ ರಣವೀರ್ ಸಿಂಗ್ ಅವರನ್ನು ಮದುವೆಯಾಗಿದ್ದಾರೆ. ತಾಯಿಯಾಗುತ್ತಿರುವ ಗುಟ್ಟನ್ನು ಅವರು ರಹಸ್ಯವಾಗಿಡದೆ ಮುಕ್ತವಾಗಿ ಹಂಚಿಕೊಂಡಿದ್ದರು. ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದ್ದು, ಇದು ಬೆಂಕಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ದೀಪಿಕಾ ಪಡುಕೋಣೆ ಫ್ಯಾನ್ಸ್‌ಗೆ ಗುಡ್‌ನ್ಯೂಸ್?
ಸದ್ಯ ದೀಪಿಕಾ ಹಾಗೂ ರಣವೀರ್ ತಮ್ಮ ಬದುಕಿನ ಮತ್ತೊಂದು ಅಧ್ಯಾಯಕ್ಕೆ ಕಾಯುತ್ತಿದ್ದು, ಹೊಸ ಚಾಪ್ಟರ್ ಅವರ ಬದುಕಿನಲ್ಲಿ ಇದೇ ತಿಂಗಳು ಬರಲಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ದೀಪಿಕಾ ಸೆಪ್ಟಂಬರ್ 28ರಂದೇ ತಮ್ಮ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ದಿನಾಂಕಕ್ಕೂ ರಣವೀರ್ ಸಿಂಗ್ಗೂ ಒಂದು ಕನೆಕ್ಷನ್ ಇದೆ. ಸೆಪ್ಟಂಬರ್ 28 ರಂದು ರಣವೀರ್ ಸಿಂಗ್ ಅವರ ಬರ್ತ್ಡೇ.
View this post on Instagram