ಖ್ಯಾತ ನಟಿ ಸಮಂತಾ ಪತಿ ಅಕ್ಕಿನೇನಿ ನಾಗಚೈತನ್ಯ ನಡುವೆ ವಿಚ್ಛೇದನವಾಗಿ ವರ್ಷ ಉರುಳುವ ಸನಿಹವಾಗಿದೆ. ಆದ್ರೆ ಇಬ್ಬರ ನಡುವಿನ ಕೋಲ್ಡ್ ವಾರ್ ಹೆಚ್ಚುತ್ತಲೇ ಇದೆ. ಇತ್ತೀಚಿಗೆ ನಾಗಚೈತನ್ಯ ನಟಿ ಸೋಭಿತಾ ಧೂಲಿಪಾಲ ಅವರೊಂದಿಗೆ ಡೇಟಿಂಗ್ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ ಈ ಸುದ್ದಿ ಸುಳ್ಳು ಇದು ಸಮಂತಾ ಪಿಆರ್ ಟೀಂ ಮಾಡಿರುವ ಹುನ್ನಾರ ಅಂತಲೂ ಅಭಿಮಾನಿಗಳು ಆರೋಪಿಸಿದ್ದರು.

ಇದೀಗ ಇದೇ ವಿಚಾರವಾಗಿ ನಟಿ ಸಮಂತಾ ಸಹ ಪ್ರತಿಕ್ರಿಯಿಸಿದ್ದು, ಇಂತಹ ಸುದ್ದಿ ಹರಿಬಿಟ್ಟವರಿಗೆ ಖಡಕ್ ಆಗಿ ಉತ್ತರಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಮಂತಾ, ಹುಡುಗಿಯ ಮೇಲಿನ ವದಂತಿಗಳು – ನಿಜವಾಗಿರಬೇಕು !! ಆದ್ರೆ ಹುಡುಗರ ಮೇಲಿನ ವದಂತಿ ಹುಡುಗಿ ಮಾಡಿಸಿದ್ದು ಎಂದು ಹೇಳಿಬಿಡುತ್ತಾರೆ.. ಬೆಳೆಯಿರಿ ಹುಡುಗರೇ..! ಎಂದಿದ್ದಾರೆ. ನಿಮ್ಮ ಕುಟುಂಬದ ಬಗ್ಗೆ ಗಮನಕೊಡಿ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
Rumours on girl – Must be true !!
Rumours on boy – Planted by girl !!
Grow up guys ..
Parties involved have clearly moved on .. you should move on too !! Concentrate on your work … on your families .. move on!! https://t.co/6dbj3S5TJ6— Samantha (@Samanthaprabhu2) June 21, 2022




