ಬೆಂಗಳೂರು: ಪಿಸ್ತೂಲ್ ತೋರಿಸಿ ಭಯಪಡಿಸಿ ಕಳವು ಮಾಡುತ್ತಿದ್ದ ಮಹಿಳೆಯೂ ಸೇರಿದಂತೆ ಐವರು ವ್ಯಕ್ತಿಗಳ ಪೈಕಿ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ನಡೆದಿದ್ದೇನು?: ಕೊಡಿಗೇಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಸಹಕಾರನಗರದ ಶಾಂತಿವನದಲ್ಲಿ ವಾಸವಾಗಿರುವ ಪಿರ್ಯಾದುದಾರರು ದಿನಾಂಕ:29/02/2024 ರಂದು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರರು ದಿನಾಂಕ:28/02/2024 ರಂದು ಸಂಜೆ 06-00 ಗಂಟೆ ಸಮಯದಲ್ಲಿ ಸಂಸಾರದೊಂದಿಗೆ ಯಶವಂತಪುರದ ಮೆಟ್ರೋ ಕ್ಯಾಷ್ ಅಂಡ್ ಕ್ಯಾರಿಗೆ ಸಾಮಾನುಗಳನ್ನು ಖರೀದಿಸಲು ತೆರೆಳಿದ್ದು, ರಾತ್ರಿ ಸುಮಾರು 09-00 ಗಂಟೆಗೆ ವಾಪಾಸ್ ಬಂದಾಗ ಪಿರ್ಯಾದಿಯವರ ಮನೆಯ ಬಾಗಿಲನ್ನು ಯಾರೋ ಅಪರಿಚಿತರು ಹೊಡೆದು, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅದೇ ರೀತಿ ಕೊಡಿಗೇಹಳ್ಳಿ ಪೊಲೀಸ್ ಠಾಣಾ ಸರಹದ್ದಿನ, ಸಹಕಾರನಗರದ ಇ-ಬ್ಲಾಕ್‌ನಲ್ಲಿ ವಾಸವಿರುವ ಪಿರ್ಯಾದುದಾರರು ವೃತ್ತಿಯಲ್ಲಿ ವೈದ್ಯರಾಗಿರುತ್ತಾರೆ. ದಿನಾಂಕ:24/04/2024 ರಂದು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರ್ಯಾದುದಾರರು ದಿನಾಂಕ:24/02/2024 ರಂದು ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ಕ್ಲಿನಿಕ್‌ನಿಂದ ವಾಪಾಸ್ ಮನೆಗೆ ಬಂದಾಗ, ಮನೆಯ ಮುಂಬಾಗಿಲು ತೆರೆದಿದ್ದು, ಪಿಯಾದುದಾರರಿಗೆ ಅನುಮಾನ ಬಂದು ಹೊರಗಡೆ ಡೋರ್ ಲಾಕ್ ಮಾಡಲು ಪ್ರಯತ್ನಿಸುತ್ತಿದ್ದಾಗ, ಮನೆಯಲ್ಲಿದ್ದ ಅಪರಿಚಿತ ವ್ಯಕ್ತಿಗಳ ಪೈಕಿ ಓರ್ವ ವ್ಯಕ್ತಿಯು ಪಿರ್ಯಾದುದಾರರಿಗೆ ಪಿಸ್ತೂಲನ್ನು ತೋರಿಸಿ, ಬೆದರಿಸಿ, ಪಿರ್ಯಾದುದಾರರನ್ನು ಕೊಠಡಿಯೊಂದಕ್ಕೆ ಎಳೆದುಕೊಂಡು ಹೋಗಿ, ಕೂಡಿ ಹಾಕಿ. ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ಮೇಲಿನ ಎರಡು ಪ್ರಕರಣಗಳ ಆರೋಪಿತರ ಪತ್ತೆಗಾಗಿ ಯಲಹಂಕ ಉಪ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಯವರ ಒಂದು ವಿಶೇಷ ತಂಡವನ್ನು ರಚಿಸಿದ್ದು, ಈ ತಂಡವು ಮುಖ್ಯವಾಗಿ ಆರೋಪಿಗಳು ಪಿಸ್ತೂಲ್ ನ್ನು ತೋರಿಸಿ ಭಯಪಡಿಸಿ ಕಳುವು ಮಾಡುವುದಲ್ಲದೇ ಕನ್ನಕಳವು ಸಹ ಮಾಡುತ್ತಿದ್ದವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿರುತ್ತಾರೆ. ಈ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಳೆಯೂ ಸೇರಿದಂತೆ, ಐವರು ವ್ಯಕ್ತಿಗಳ ಪೈಕಿ ಇಬ್ಬರು ಆರೋಪಿಗಳನ್ನು ವಿಶಾಖಪಟ್ಟಣ ಮತ್ತು ಛತ್ತಿಸ್‌ಗಡ್ ಕೇಂದ್ರ ಕಾರಾಗೃಹದಲ್ಲಿದ್ದವರನ್ನು ಬಾಡಿ ವಾರೆಂಟ್ ಮುಖಾಂತರ ಬೆಂಗಳೂರಿಗೆ ಕರೆತಂದಿದ್ದಾರೆ.
ಈ ಇಬ್ಬರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ, ಕೋಡಿಗೆಹಳ್ಳಿ ಪೊಲೀಸ್ ಠಾಣೆಯ ಎರಡು ಪ್ರಕರಣಗಳ ಬಗ್ಗೆ ಹಾಗೂ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಕಳವು ಮಾಡಿರುವ ಪ್ರಕರಣಗಳ ಬಗ್ಗೆ ತಪ್ಪಪ್ಪಿಕೊಂಡಿರುತ್ತಾರೆ. ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇತರೆ ಮೂವರು ಸಹಚರರ ಬಗ್ಗೆ ತಿಳಿಸಿದ್ದಾರೆ.