ಬೆಂಗಳೂರು: ಜಯಪ್ರಕಾಶ ನಗರದ (ಜೆಪಿ ನಗರ) 7 ಹಂತದ ಕಬಾಬ್ ಮ್ಯಾಜಿಕ್ ಹೋಟೆಲ್‌ನಲ್ಲಿ ಚಿಕನ್ ಗ್ರಿಲ್ ಸೇವಿದ 10 ಮಂದಿ ಅಸ್ವಸ್ಥಗೊಂಡ ಪ್ರಕರಣ ಸಂಬಂಧ ಮಂಗಳವಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪರವಾನಗಿ ಅಮಾನತಿಗೆ ಮುಂದಾಗಿದ್ದಾರೆ.
ಕಳೆದ ಅ.23ರಂದು ಈ ಹೋಟೆಲ್‌ನಲ್ಲಿ ಚಿಕನ್ ಗ್ರಿಲ್ ಸೇವಿಸಿದ ಪೈಕಿ 10 ಮಂದಿ ವಾಂತಿ, ಬೇಧಿಯಾಗಿ ಅಸ್ವಸ್ಥರಾಗಿದ್ದರು. ಅಸ್ವಸ್ಥಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಜೆಪಿನಗರ ಪೊಲೀಸ್ ಠಾಣೆಗೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಮಂಗಳವಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಕಬಾಬ್ ಮ್ಯಾಜಿಕ್ ಹೋಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿ ಆಹಾರದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಲ್ಯಾಬ್‌ಗೆ ಕಳುಹಿಸಿಕೊಟ್ಟಿದ್ದಾರೆ.