Pawan Kalyan: ಖ್ಯಾತ ನಟ ತೀವ್ರ ಅಸ್ವಸ್ಥ! ದಿಢೀರ್ ಏನಾಯ್ತು?

Pawan Kalyan: ತೆಲುಗಿನ ಖ್ಯಾತ ನಟ ಪವರ್ ಸ್ಟಾರ್ ಹಾಗೂ ಆಂದ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೌದು, ಕಳೆದ ಎರಡು ದಿನಗಳಿಂದ ವೈರಲ್ ಜ್ವರದಿಂದ ಬಳಲುತ್ತಿದ್ದು,…

Pawan Kalyan

Pawan Kalyan: ತೆಲುಗಿನ ಖ್ಯಾತ ನಟ ಪವರ್ ಸ್ಟಾರ್ ಹಾಗೂ ಆಂದ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಹೌದು, ಕಳೆದ ಎರಡು ದಿನಗಳಿಂದ ವೈರಲ್ ಜ್ವರದಿಂದ ಬಳಲುತ್ತಿದ್ದು, ಜ್ವರದ ಜತೆಗೆ ತೀವ್ರ ಕೆಮ್ಮಿನಿಂದ ಬಳಲುತ್ತಿದ್ದಾರೆ. ಆದರೂ ಕೂಡ ತೀವ್ರ ಅನಾರೋಗ್ಯದ ನಡುವೆಯೂ ತಮ್ಮ ನಿವಾಸದಲ್ಲಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಕಮಿಷನರೇಟ್ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ.

ಪ್ರವಾಹ ಪರಿಸ್ಥಿತಿ ಅವಲೋಕಿಸಲಾಗಿದ್ದು, ಪ್ರವಾಹದ ನೀರು ಇಳಿಮುಖವಾಗಿರುವ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಚುರುಕುಗೊಳಿಸಿ ಸೂಪರ್ ಕ್ಲೋರಿನೇಷನ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ವಚ್ಛತೆ ಕಾಪಾಡದಿದ್ದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿದೆ ಎಂದರು.ಸೊಳ್ಳೆಗಳ ಹಾವಳಿ ತೀವ್ರವಾಗಿರುವ ಕಾರಣ ನೈರ್ಮಲ್ಯ ನಿರ್ವಹಣೆಯನ್ನು ತೀವ್ರವಾಗಿ ಕೈಗೊಳ್ಳಬೇಕು ಎಂದು ಪವನ್ ಕಲ್ಯಾಣ್ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದರು.

Vijayaprabha Mobile App free

ಅತಿವೃಷ್ಟಿಯಿಂದ ಕುಡಿಯುವ ನೀರು ಕಲುಷಿತವಾಗದಂತೆ ಕ್ರಮಕೈಗೊಳ್ಳಬೇಕು. ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸಿ ನಿರಂತರ ನಿಗಾ ವಹಿಸುವಂತೆ ಸೂಚಿಸಿದರು.ಆ ಬಳಿಕ ಎಲೇರು ಜಲಾಶಯಕ್ಕೆ ಪ್ರವಾಹ ಭೀತಿ ಎದುರಾಗಿರುವ ಬಗ್ಗೆ ವಿವರಗಳು ಕಾಲಕಾಲಕ್ಕೆ ಗೊತ್ತಾಗುತ್ತಿದೆ.

ಸದ್ಯ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ವೈದ್ಯರ ಸೂಚನೆ ಪಡೆಯುತ್ತಿದ್ದಾರೆ. ಮತ್ತೊಂದೆಡೆ ಪವನ್ ಕಲ್ಯಾಣ್ ಕುಟುಂಬಸ್ಥರೂ ವೈರಲ್ ಫೀವರ್ ನಿಂದ ಬಳಲುತ್ತಿದ್ದಾರೆಯಂತೆ.

https://vijayaprabha.com/big-shock-for-illegal-bpl-card-holders/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.