ನಟ ದರ್ಶನ್‌ ಬೆಡ್‌ PHOTO ವೈರಲ್‌, ಭಾರೀ ಸಂಚಲನ; ಇಂದೇ ಬೇರೆ ಜೈಲಿಗೆ ಶಿಫ್ಟ್‌?

Actor Darshan: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಖ್ಯಾತ ರೌಡಿಗಳ ಜೊತೆ ಚಹಾ ಕುಡಿಯುತ್ತಾ, ಸಿಗರೇಟ್‌ ಸೇದುತ್ತಿರುವ ನಟ ದರ್ಶನ್‌ (Darshan) ಫೋಟೋ ವೈರಲ್‌ ಆದ ಬೆನ್ನಲ್ಲೇ ಮತ್ತೊಂದು ಫೋಟೋ (Photo) ಸಂಚಲನ ಸೃಷ್ಟಿಸಿದ್ದು, ಜೈಲಧಿಕಾರಿ…

Actor Darshan

Actor Darshan: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಖ್ಯಾತ ರೌಡಿಗಳ ಜೊತೆ ಚಹಾ ಕುಡಿಯುತ್ತಾ, ಸಿಗರೇಟ್‌ ಸೇದುತ್ತಿರುವ ನಟ ದರ್ಶನ್‌ (Darshan) ಫೋಟೋ ವೈರಲ್‌ ಆದ ಬೆನ್ನಲ್ಲೇ ಮತ್ತೊಂದು ಫೋಟೋ (Photo) ಸಂಚಲನ ಸೃಷ್ಟಿಸಿದ್ದು, ಜೈಲಧಿಕಾರಿ ಸೇರಿ 7 ಅಧಿಕಾರಿಗಳನ್ನು ಗೃಹ ಸಚಿವ ಸಸ್ಪೆಂಡ್‌ (Suspend) ಮಾಡಿದ್ದಾರೆ.

ಹೌದು, VIP ಸೆಲ್‌ನಲ್ಲಿ ಬೆಡ್‌ ಮೇಲೆ ಕುಳಿತುಕೊಂಡು, ಇನ್ನೊಬ್ಬನ ಜೊತೆ ಹರಟೆ ಹೊಡೆಯುತ್ತಾ ದರ್ಶನ್‌ ಧಮ್‌ ಎಳೆಯುತ್ತಿರುವ ಫೋಟೋ ಖಾಸಗಿ ನ್ಯೂಸ್‌ ವಾಹಿನಿಯೊಂದಕ್ಕೆ ಲಭ್ಯವಾಗಿದ್ದು, ಇದೀಗ ವೈರಲ್‌ ಆಗಿದೆ. ಹೀಗಾಗಿ ʻದಾಸʼನಿಗೆ ಸಂಕಷ್ಟ ಎದುರಾಗಿದ್ದು, ಬೇರೆ ಜೈಲಿಗೆ ಶಿಫ್ಟ್‌ ಮಾಡುವುದು ಬಹುತೇಕ ಪಕ್ಕಾ ಆಗಿದೆ.

 

Vijayaprabha Mobile App free

ನಟ ದರ್ಶನ್‌ ಇಂದೇ ಬೇರೆ ಜೈಲಿಗೆ ಶಿಫ್ಟ್‌? Actor Darshan shifted to another jail today

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ವಿಚಾರವಾಗಿ ಜೈಲಧಿಕಾರಿ ಸೇರಿ 7 ಅಧಿಕಾರಿಗಳನ್ನು ಗೃಹ ಸಚಿವ ಸಸ್ಪೆಂಡ್‌ ಮಾಡಿದ ಬೆನ್ನಲ್ಲೇ ಇದೀಗ ದರ್ಶನ್‌ ಅವರನ್ನು ಬೇರೆ ಜೈಲಿಗೆ ಶಿಫ್ಟ್‌ ಮಾಡಲಾಗುತ್ತಿದೆ ಎನ್ನಲಾಗಿದೆ.

ದರ್ಶನ್‌ ಜೊತೆ ಅವರ ಸಹಚರರನ್ನೂ ಬೇರೆ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಹಿರಿಯ ಅಧಿಕಾರಿಗಳು ಸಭೆ ನಡೆಸಲಿದ್ದು, ಇಂದು ಸಂಜೆ ವೇಳೆ ಇನ್ನೊಂದು ಜೈಲಿಗೆ ಸ್ಥಳಾಂತರಿಸಲಿದ್ದಾರೆ ಎಂದು ವರದಿಯಾಗಿದೆ.

ದರ್ಶನ್​ಗೆ ಸಿಗ್ತಿರೋದು ಸಿಗರೇಟ್ ಅಷ್ಟೇ ಅಲ್ಲ?! (Cigarettes are not the only thing that Darshan can get)

Actor Darshan
Darshan is smoking a cigarette and drinking tea

ದರ್ಶನ್​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಎಲ್ಲಾ ಸೌಲಭ್ಯ ಸಿಗುತ್ತಿದೆ ಎನ್ನಲಾಗಿದೆ. ಅವರಿಗೆ ಸಿಗರೇಟ್ ಮಾತ್ರವಲ್ಲದೆ ಶಿವಾಜಿ ಮಿಲ್ಟ್ರಿ ಹೋಟೆಲ್​ನಿಂದ ಬಿರಿಯಾನಿ, ಎಣ್ಣೆ, ಮಸಾಜ್ ವ್ಯವಸ್ಥೆಯನ್ನೂ ಮಾಡಲಾಗಿದೆ ಎನ್ನಲಾಗಿದೆ.

ಸದ್ಯ ಜೈಲಿನಲ್ಲಿ ದರ್ಶನ್​ಗೆ ಸಾಥ್ ಕೊಡುತ್ತಿರುವ ರೌಡಿ ವಿಲ್ಸನ್ ಗಾರ್ಡನ್ ನಾಗನಿಂದ ಬೇಕಾದಂತಹ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆಯಂತೆ. ಜೈಲಿನ ಬ್ಯಾರಕ್​ಗಳಲ್ಲಿ ಮೊಬೈಲ್ಸ್, ವೆಪನ್ಸ್ ಇರುವ ಬಗ್ಗೆ ಮಾಹಿತಿ ಸಿಕ್ಕಿ ಶನಿವಾರ ಸಿಸಿಬಿ ರೇಡ್ ನಡೆಸಿತ್ತು.

https://vijayaprabha.com/job-news-52/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.