BPL card : ರಾಜ್ಯದಲ್ಲಿ 14 ಲಕ್ಷ BPL ಕಾರ್ಡ್ ರದ್ದು​; ನಿಮ್ಮ ಕಾರ್ಡ್ ರದ್ದು ಆಗಿದೆಯೇ ಎಂದು ಚೆಕ್ ಮಾಡೋದು ಹೇಗೆ..?

BPL card : ರಾಜ್ಯದಲ್ಲಿ ಸುಮಾರು 14 ಲಕ್ಷ ಅನರ್ಹ ಪಡಿತರ ಚೀಟಿಗಳನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಗುರುತಿಸಿದೆ ಎಂದು ಸಚಿವ ಕೆಎಚ್ ಮುನಿಯಪ್ಪ ಮಾಹಿತಿ ನೀಡಿದ್ದಾರೆ. ಹೌದು, ಈ…

BPL card

BPL card : ರಾಜ್ಯದಲ್ಲಿ ಸುಮಾರು 14 ಲಕ್ಷ ಅನರ್ಹ ಪಡಿತರ ಚೀಟಿಗಳನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಗುರುತಿಸಿದೆ ಎಂದು ಸಚಿವ ಕೆಎಚ್ ಮುನಿಯಪ್ಪ ಮಾಹಿತಿ ನೀಡಿದ್ದಾರೆ.

ಹೌದು, ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಕೆಎಚ್ ಮುನಿಯಪ್ಪ, ಅಧಿಕಾರಿಗಳು 13.87 ಲಕ್ಷ ಅನರ್ಹ ಕಾರ್ಡ್‌ಗಳನ್ನು ಗುರುತಿಸಿದ್ದು, ಅವುಗಳಲ್ಲಿ 3.64 ಲಕ್ಷ ರದ್ದುಗೊಳಿಸಲಾಗಿದೆ. ಇದರಲ್ಲಿ ಸರ್ಕಾರಿ ನೌಕರರ 2,964 ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿ 4.35 ಕೋಟಿ ಫಲಾನುಭವಿಗಳು 1.51 ಕೋಟಿ ಪಡಿತರ ಕಾರ್ಡ್ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Anna bhagya : ಹಣದ ಬದಲು ‘ದಿನಸಿ ಕಿಟ್’ ನೀಡಲು ಸರ್ಕಾರ ನಿರ್ಧಾರ..!?

Vijayaprabha Mobile App free

BPL card : ಕಾರ್ಡ್ ರದ್ದು ಆಗಿದಿಯೇ ಎಂದು ಚೆಕ್ ಮಾಡೋದು ಹೇಗೆ..?

  • ಮೊದಲು ಆಹಾರ ನಾಗರಿಕ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್ ಸೈಟ್ https://ahara.kar.nic.in/home/home ಭೇಟಿ ಮಾಡಬೇಕು.
  • ನಂತರ ಇದರಲ್ಲಿ ಈ ಸೇವೆಗಳು ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
  • ನಂತರ ಇ ರೇಷನ್ ಕಾರ್ಡ್ (E Ration Card) ನಲ್ಲಿ ತೋರಿಸುವ show cancelled/Suspended list ಮೇಲೆ ಕ್ಲಿಕ್ ಮಾಡಬೇಕು.
  • ನಂತರ ಇಲ್ಲಿ ಕೇಳಿದ ಜಿಲ್ಲೆ, ತಾಲೂಕು, ತಿಂಗಳು ಮತ್ತು ವರ್ಷವನ್ನು ಪೂರ್ಣಗೊಳಿಸಿ ಗೋ(GO) ಬಟನ್ ಮೇಲೆ ಕ್ಲಿಕ್ ಮಾಡಿದರೆ ರದ್ದು ಮಾಡಲಾಗಿರುವ ಅನರ್ಹ ಪಡಿತರ ಚೀಟಿ ವಿವರ ತೋರಿಸುತ್ತದೆ.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.