ಭಾರತದಲ್ಲಿ ವಿಮಾನಗಳಿಗೆ ಬೆದರಿಕೆ ಹಾಕುತ್ತಿದ್ದವ ವಶ: ಬಂಧಿತ ‘ಟೆರರಿಸಂ’ ಬುಕ್ ಕರ್ತೃ

ಮುಂಬೈ: ದೇಶದಲ್ಲಿ ವಿಮಾನಗಳಿಗೆ ಬೆದರಿಕೆ ಹಾಕುತ್ತಿದ್ದ ಕಿಡಿಗೇಡಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಈತ ‘ಟೆರರಿಸಂ’ ಎಂಬ ಪುಸ್ತಕ ಬರೆದಿದ್ದ ಎಎನ್ನುವುದು ಬೆಳಕಿಗೆ ಬಂದಿದೆ. ಹೌದು, ಕಳೆದ 2 ವಾರಗಳ ಅವಧಿಯಲ್ಲಿ ದೇಶದ ನೂರಾರು ವಿಮಾನಗಳಿಗೆ…

ಮುಂಬೈ: ದೇಶದಲ್ಲಿ ವಿಮಾನಗಳಿಗೆ ಬೆದರಿಕೆ ಹಾಕುತ್ತಿದ್ದ ಕಿಡಿಗೇಡಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಈತ ‘ಟೆರರಿಸಂ’ ಎಂಬ ಪುಸ್ತಕ ಬರೆದಿದ್ದ ಎಎನ್ನುವುದು ಬೆಳಕಿಗೆ ಬಂದಿದೆ.

ಹೌದು, ಕಳೆದ 2 ವಾರಗಳ ಅವಧಿಯಲ್ಲಿ ದೇಶದ ನೂರಾರು ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ ಒಡ್ಡಿ, ಲಕ್ಷಾಂತರ ವಿಮಾನ ಪ್ರಯಾಣಿಕರನ್ನು ಆತಂಕಕ್ಕೆ ದೂಡಿದ್ದ ಹಾಗೂ ವಿಮಾನಯಾನ ಕಂಪನಿಗಳಿಗೆ ನೂರಾರು ಕೋಟಿ ರುಪಾಯಿ ನಷ್ಟ ಉಂಟು ಮಾಡಿದ್ದ ಮತ್ತು ವಿಮಾನಯಾನ ವಲಯವನ್ನೇ ಏರುಪೇರು ಮಾಡಿದ್ದ ಯುವಕನನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಮಹಾರಾಷ್ಟ್ರದ ಗೊಂಡಿಯಾ ಮೂಲದ ಜಗದೀಶ್‌ ಉಯಿಕೆ (35) ಬಂಧಿತ. ‘ಟೆರರಿಸಂ’ ಎಂಬ ಪುಸ್ತಕದ ಲೇಖಕನಾಗಿರುವ ಈತ ವಿಮಾನಯಾನ ವಲಯದಲ್ಲಿ ಅಕ್ಷರಶಃ ಭಯೋತ್ಪಾದನೆ ಸೃಷ್ಟಿಸಿದ್ದ. 2021ರಲ್ಲಿ ಬೇರೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಬಿಡುಗಡೆಯಾದ ನಂತರವೂ ಕುಚೇಷ್ಟೆ ಮುಂದುವರಿಸಿದ್ದ.

Vijayaprabha Mobile App free

ವಿಮಾನಯಾನ ಕಂಪನಿಗಳು ಹಾಗೂ ಸರ್ಕಾರದ ವಿವಿಧ ಸಂಸ್ಥೆಗಳಿಗೆ ಹುಸಿ ಬಾಂಬ್‌ ಬೆದರಿಕೆಯ ಇ-ಮೇಲ್‌ ಬಂದು ಆತಂಕ ಹುಟ್ಟಿಸುತ್ತಿದ್ದವು. ಆ ಇ-ಮೇಲ್‌ಗಳ ಬೆನ್ನತ್ತಿ ಹೋದಾಗ ಪೊಲೀಸರಿಗೆ ಅದರ ಹಿಂದೆ ಜಗದೀಶ್‌ ಉಯಿಕೆ ಪಾತ್ರ ಇರುವುದು ಗೊತ್ತಾಗಿದೆ. ಪೊಲೀಸರು ತನ್ನ ಬೆನ್ನು ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಆತ ತಲೆಮರೆಸಿಕೊಂಡಿದ್ಧಾನೆ.

ವಿಮಾನಯಾನ ಕಂಪನಿಗಳು ಮಾತ್ರವೇ ಅಲ್ಲದೆ ಪ್ರಧಾನಮಂತ್ರಿಗಳ ಕಚೇರಿ, ರೈಲ್ವೆ ಸಚಿವ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪಮುಖ್ಯಮಂತ್ರಿಗಳು, ರೈಲ್ವೆ ಪೊಲೀಸ್‌ ಘಟಕಕ್ಕೂ ಈತ ಬೆದರಿಕೆ ಇ-ಮೇಲ್‌ಗಳನ್ನು ರವಾನಿಸಿದ್ದ ಎನ್ನಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.