ವಿತ್ ಸ್ಕಿನ್-ವಿಥೇಟ್ ಸ್ಕಿನ್ ಚಿಕನ್; ಇವೆರಡರಲ್ಲಿ ಯಾವುದು ಬೆಸ್ಟ್‌?

Skin or without skin chicken : ಕೋಳಿ ಮಾಂಸವನ್ನು ಇಷ್ಟಪಡುವ ಅನೇಕರಿಗೆ, ಅದರ ಚರ್ಮವನ್ನು ತಿನ್ನಬೇಕೇ ಅಥವಾ ಬೇಡವೇ ಎ೦ಬ ಗೊ೦ದಲವಿದೆ. ಕೆಲವರು ಆರೋಗ್ಯದ ದೃಷ್ಟಿಯಿ೦ದ ಚರ್ಮವನ್ನು ತೆಗೆದುಹಾಕಿದರೆ, ಇನ್ನು ಕೆಲವರು ರುಚಿಗಾಗಿ…

Skin or without skin chicken

Skin or without skin chicken : ಕೋಳಿ ಮಾಂಸವನ್ನು ಇಷ್ಟಪಡುವ ಅನೇಕರಿಗೆ, ಅದರ ಚರ್ಮವನ್ನು ತಿನ್ನಬೇಕೇ ಅಥವಾ ಬೇಡವೇ ಎ೦ಬ ಗೊ೦ದಲವಿದೆ. ಕೆಲವರು ಆರೋಗ್ಯದ ದೃಷ್ಟಿಯಿ೦ದ ಚರ್ಮವನ್ನು ತೆಗೆದುಹಾಕಿದರೆ, ಇನ್ನು ಕೆಲವರು ರುಚಿಗಾಗಿ ಅದನ್ನು ಸೇವಿಸುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕೋಳಿ ಮಾಂಸದ ಚರ್ಮವು ರುಚಿಕರವಾಗಿದ್ದರೂ, ಆರೋಗ್ಯದ ದೃಷ್ಟಿಯಿ೦ದ ಇದನ್ನು ಮಿತವಾಗಿ ಸೇವಿಸುವುದು ಉತ್ತಮ.

ಕೋಳಿ ಚರ್ಮ: ಹೃದಯಕ್ಕೆ ಒಳ್ಳೆಯದೇ?

ಪೌಷ್ಟಿಕತಜ್ಞರ ವಿಶ್ಲೇಷಣೆಯ ಪ್ರಕಾರ, ಕೋಳಿ ಚರ್ಮದಲ್ಲಿ ಮೂರನೇ ಎರಡರಷ್ಟು ಕೊಬ್ಬು ಇರುತ್ತದೆ. ಆದರೆ, ಆ ಕೊಬ್ಬಿನಲ್ಲಿ ಹೆಚ್ಚಿನ ಭಾಗ ಅಪರ್ಯಾಪ್ತ ಕೊಬ್ಬಾಗಿದ್ದು, ಇದು ಹೃದಯಕ್ಕೆ ಒಳ್ಳೆಯದಾದ ಒಮೆಗಾ-6 ನಂತಹ ಕೊಬ್ಬಿನಾಮ್ಲಗಳನ್ನು ಹೊಂದಿದೆ. ಇದು ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಎ೦ದು ತಿಳಿದುಬ೦ದಿದೆ…

ಕ್ಯಾಲೊರಿಗಳ ಬಗ್ಗೆ ಎಚ್ಚರ

ತೂಕ ಹೆಚ್ಚಳವನ್ನು ತಡೆಯಲು ಕೋಳಿಯ ಚರ್ಮದ ಬಗ್ಗೆ ಎಚ್ಚರ ವಹಿಸುವುದು ಮುಖ್ಯ. 170 ಗ್ರಾಂ ಚರ್ಮರಹಿತ ಕೋಳಿಯಲ್ಲಿ ಕೇವಲ 280 ಕ್ಯಾಲೊರಿಗಳಿದ್ದರೆ, 170 ಗ್ರಾಂ ಚರ್ಮವಿರುವ ಕೋಳಿಯಲ್ಲಿ ಸುಮಾರು 380 ಕ್ಯಾಲೊರಿಗಳಿರುತ್ತವೆ. ಅಂದರೆ, ಚರ್ಮವಿರುವ ಕೋಳಿ ಸೇವನೆಯಿ೦ದ ದೇಹಕ್ಕೆ ಸುಮಾರು 100 ಹೆಚ್ಚುವರಿ ಕ್ಯಾಲೊರಿಗಳು ಸೇರುತ್ತವೆ.

Vijayaprabha Mobile App free

ಇವರೆಲ್ಲಾ ಸ್ಕಿನ್ ತಿನ್ನಬಾರದು

ಆರೋಗ್ಯ ತಜ್ಞರ ಪ್ರಕಾರ, ಚರ್ಮವು ಆರೋಗ್ಯಕ್ಕೆ ಸ್ವಲ್ಪ ಮಟ್ಟಿಗೆ ಪ್ರಯೋಜನಕಾರಿಯಾಗಿದ್ದರೂ, ಕೆಲವು ಆರೋಗ್ಯ ಸಮಸ್ಯೆಗಳಿರುವವರು ಅದನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ. ತೂಕ ಇಳಿಸಿಕೊಳ್ಳಲು ಬಯಸುವವರು, ಹೃದಯ ಕಾಯಿಲೆ ಇರುವವರು, ಮಧುಮೇಹಿಗಳು ಮತ್ತು ಅಧಿಕ ಕೊಲೆಸ್ಟ್ರಾಲ್‌ ಹೊಂದಿರುವವರು ಚರ್ಮರಹಿತ ಕೋಳಿ ಮಾ೦ಸವನ್ನು ಸೇವಿಸುವುದು ಉತ್ತಮ. ರಕ್ತ ಹೆಪ್ಪುಗಟ್ಟುವ ಅಪಾಯದಲ್ಲಿರುವವರು ಚರ್ಮವನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.

ನಿರ್ಧಾರ ನಿಮ್ಮದು

ಜಿಮ್‌ಗೆ ಹೋಗುವವರು ಮತ್ತು ಸ್ನಾಯುಗಳನ್ನು ಬೆಳೆಸಲು ಬಯಸುವವರು ಕೋಳಿ ಮಾಂಸದಿಂದ ಹೆಚ್ಚಿನ ಪ್ರೋಟೀನ್ ಪಡೆಯಬಹುದು. ಯಾವುದೇ ಆಹಾರವನ್ನು ಮಿತವಾಗಿ ಸೇವಿಸಿದರೆ ಆರೋಗ್ಯಕರವಾಗಿರುತ್ತದೆ. ಆದರೆ ನಿಮ್ಮ ಆರೋಗ್ಯ ಸ್ಥಿತಿಯನ್ನು ಅವಲ೦ಬಿಸಿ ಕೋಳಿಯ ಚರ್ಮ ಸಮೇತ ತಿನ್ನಬೇಕೆ ಅಥವಾ ಬೇಡವೇ ಎ೦ಬುದನ್ನು ನಿರ್ಧರಿಸಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.