ಎದೆ ಹಾಲಿನ ಕೊರತೆ ಉಂಟಾದಾಗ
1. ಹೆರಿಗೆ ನಂತರ, ಒಂದು ಟೀ ಚಮಚ ಲವಂಗದ ಕಷಾಯಕ್ಕೆ ಸ್ವಲ್ಪ ಹಿಂಗು ಸೇರಿಸಿ ದಿನಕ್ಕೆ ಮೂರಾವರ್ತಿಯಂತೆ ಸೇವಿಸುತ್ತಿದ್ದರೆ ಎದೆ ಹಾಲಿನ ಉತ್ಪತ್ತಿ ಹೆಚ್ಚುವುದು.
2. ಬೇಯಿಸಿದ ಹಲಸಂದೆಯನ್ನು ಮಿತವಾಗಿ ಸೇವಿಸುವುದರಿಂದ ಎದೆ ಹಾಲಿನ ಉತ್ಪತ್ತಿ ಹೆಚ್ಚುವುದು.
3. ಸಬ್ಬಸಿಗೆ ಸೊಪ್ಪಿನ ಸಾರು, ಪಲ್ಯ ಕ್ರಮವಾಗಿ ಸೇವಿಸುತ್ತಿದ್ದರೆ ಎದೆ ಹಾಲಿನ ಉತ್ಪತ್ತಿ ಹೆಚ್ಚುವುದು.
4. ಹಾಲು ತುಂಬಿದ ರಾಗಿ ತೆನೆಗಳನ್ನು ಕೆಂಡದ ಮೇಲೆ ಸುಟ್ಟು ಉಜ್ಜಿದಲ್ಲಿ ಹಸಿರು ಕಾಳು ಉದುರುವುದು. ಈ ಕಾಳನ್ನು ಬೆಲ್ಲ ಕೊಬ್ಬರಿ ಸೇರಿಸಿ ಸೇವಿಸುತ್ತಿದ್ದರೆ ಹಾಲಿನ ಉತ್ಪತ್ತಿ ಹೆಚ್ಚುವುದು.
5. ಮುಸುಕಿನ ಜೋಳದ ತೆನೆಯ ಹಾಲು ತುಂಬಿಕೊಂಡಿರುವ ಎಳೆಯ ಕಾಳುಗಳನ್ನು ಬಿಡಿಸಿ ತಿನ್ನುವುದರಿಂದ ಎದೆ ಹಾಲು ಕೂಡ ಹೆಚ್ಚಾಗುವುದು.
ಇದನ್ನು ಓದಿ: ಬಾಯಿ, ಕಣ್ಣು, ಕಿವಿ ಮತ್ತು ಮೂಗಿನ ತೊಂದರೆಗಳಿಗೆ ಮನೆ ಔಷಧಿ