Vitamin D deficiency : ಮೂಳೆಯ ಆರೋಗ್ಯ, ರೋಗನಿರೋಧಕ ಶಕ್ತಿ, ಹೃದಯದ ರಕ್ತನಾಳದ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲಿ ವಿಟಮಿನ್ ಡಿ (Vitamin D) ಮುಖ್ಯ ಪಾತ್ರ ವಹಿಸುತ್ತದೆ.
ವಿಟಮಿನ್ ಡಿ ಜೀವಸತ್ವವು ಮೂಳೆಗಳ ಆರೋಗ್ಯಕ್ಕೆ ಮತ್ತು ರೋಗನಿರೋಧಕ ಶಕ್ತಿಗೆ ಬಹಳ ಅವಶ್ಯಕವಾಗಿದ್ದು, ವಿಟಮಿನ್ ಡಿ ಕೊರತೆಯಿಂದ (Vitamin D deficiency) ಬಳಲುತ್ತಿರುವ ಜನರ ಮೂಳೆ ಸಾಂದ್ರತೆಯು ಕಡಿಮೆಯಾಗುತ್ತಾ ಹೋಗಲಿದ್ದು, ಆಹಾರದಲ್ಲಿ ಮತ್ತು ಸೂರ್ಯನ ಬೆಳಕಿನ ಮೂಲಕ ಸಾಕಷ್ಟು ವಿಟಮಿನ್ ಡಿ ಪಡೆಯದಿರುವುದು, ದೇಹವು ವಿಟಮಿನ್ ಡಿ ಅನ್ನು ಸರಿಯಾಗಿ ಹೀರಿಕೊಳ್ಳದಿರುವುದು ವಿಟಮಿನ್ ಡಿ ಕೊರತೆಗೆ ಕಾರಣ.
ಇದನ್ನೂ ಓದಿ: Poppy Seeds | ಸಮೃದ್ಧ ಪೋಷಕಾಂಶಗಳನ್ನು ಹೊಂದಿರುವ ಗಸಗಸೆಯ ಆರೋಗ್ಯ ಪ್ರಯೋಜನಗಳು
ವಿಟಮಿನ್ ಡಿ ಕೊರತೆ ಯಾರಿಗೆ ಹೆಚ್ಚು ಕಾಡುತ್ತೆ? (Most at risk for vitamin D deficiency)
ವಿಟಮಿನ್ ಡಿ ಕೊರತೆ ಇದ್ದರೆ ಮೂಳೆಗಳು ವಯಸ್ಸಾದಂತೆ ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಇದು ಒಳ್ಳೆಯ ಸಂಕೇತವಲ್ಲ. ಕಚೇರಿಗೆ ಹೋಗುವ ಹೆಚ್ಚು ಜನರಲ್ಲಿ ವಿಟಮಿನ್ ಡಿ ಕೊರತೆ ಕಾಣಿಸಿಕೊಳ್ಳಲಿದ್ದು, ವಾಸ್ತವವಾಗಿ, ಕಚೇರಿಗೆ ಹೋಗುವ ಜನರಿಗೆ ಬಿಸಿಲಿನಲ್ಲಿ ನೆನೆಯಲು ಸಮಯ ಸಿಗುವುದಿಲ್ಲ. ಅವರು ಹೆಚ್ಚಾಗಿ ಕಂಪ್ಯೂಟರ್ ಮುಂದೆ ಕೆಲಸ ಮಾಡುತ್ತಾರೆ.
55 ವರ್ಷಗಳ ನಂತರ ದೇಹದಲ್ಲಿ ಅನೇಕ ಜೀವಸತ್ವಗಳ ಕೊರತೆ ಇದ್ದರೂ ವಿಟಮಿನ್ ಡಿ ಕೊರತೆ ಹೆಚ್ಚು ಕಾಣಿಸಲಿದ್ದು, ಯಾವಾಗಲೂ ನಾನ್ ವೆಜ್ ತಿನ್ನುವ ಜನರು ವಿಟಮಿನ್ ಡಿ ಕೊರತೆಯನ್ನು ಹೊಂದಿರುತ್ತಾರೆ.
ಇದನ್ನೂ ಓದಿ: Hibiscus Flower | ದಾಸವಾಳ ಹೂವಿನ ಆರೋಗ್ಯ ಪ್ರಯೋಜನಗಳು
ವಿಟಮಿನ್ ಡಿ ಕೊರತೆಯು ಈ ರೋಗಗಳಿಗೆ ಕಾರಣವಾಗಬಹುದು (Vitamin D deficiency is the cause of these diseases)
ವಿಟಮಿನ್ ಡಿ ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೂಳೆಗಳನ್ನು ಸುಧಾರಿಸುತ್ತದೆ. ಜತೆಗೆ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ.
ಹೃದ್ರೋಗ, ಅಧಿಕ ರಕ್ತದೊತ್ತಡ, ಮಧುಮೇಹ, ರೋಗ ನಿರೋಧಕ ಶಕ್ತಿಯ ಕೊರತೆ, ಬೇಗ ವಯಸ್ಸಾಗುವಿಕೆಯಿಂದ ವಿಟಮಿನ್ ಡಿ ಅಂಶ ರಕ್ಷಿಸುತ್ತದೆ. ಈ ವಿಟಮಿನ್ ಕೊರತೆಯಿಂದ ಸ್ನಾಯು ಸೆಳೆತ, ಬೆನ್ನು ನೋವು, ಆಯಾಸ, ಖಿನ್ನತೆ, ನಿದ್ರೆ ಮತ್ತು ಅಸ್ವಸ್ಥತೆಯ ಸಮಸ್ಯೆ ಕಾಡಬಹುದು. ವಿಟಮಿನ್ ಡಿ ಕೊರತೆಯಿಂದ ಅಧಿಕ ತೂಕ, ಒತ್ತಡ ಕೂಡಾ ಉಂಟಾಗುತ್ತದೆ.
ಇದನ್ನೂ ಓದಿ: ಪಕ್ಕದಲ್ಲಿ ಫೋನ್ ಇಟ್ಟು ಮಲಗಿದರೆ ಕ್ಯಾನ್ಸರ್ ಅಪಾಯ ಹೆಚ್ಚಳ
ವಿಟಮಿನ್ ಡಿ ಪಡೆಯುವುದು ಹೇಗೆ? How to get vitamin D?
ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು, ವಿಟಮಿನ್‌ಗಳು ಕೊರತೆಯಾದರೆ ಹಲವು ತೊಂದರೆಗಳಾಗುತ್ತವೆ. ಈ ರೀತಿ ಕೊರತೆ ಉಂಟಾಗುವ ವಿಟಮಿನ್‌ಗಳಲ್ಲಿ ವಿಟಮಿನ್ ಡಿ ಕೂಡಾ ಒಂದು. ಸೂರ್ಯನ ಬೆಳಕಿನ ಮೂಲಕ ವಿಟಮಿನ್ ಡಿ ಪಡೆಯಬಹುದಾಗಿದ್ದು, ದಪ್ಪ ಚರ್ಮ ಹೊಂದಿರುವ ಜನರು ಸೂರ್ಯನ ಬೆಳಕಿನಿಂದ ಸಾಕಷ್ಟು ವಿಟಮಿನ್ ಡಿ ಪಡೆಯುವುದಿಲ್ಲ.
ನಾವು ಸೇವಿಸುವ ಆಹಾರದ ಮೂಲಕವೂ ವಿಟಮಿನ್ ಡಿ ಪಡೆಯಬಹುದಾಗಿದ್ದು, ಸಾಲ್ಮನ್, ಮೆಕೆರಲ್ ಮತ್ತು ಟ್ಯೂನಾದಂಥ ಮೀನುಗಳಲ್ಲಿ ಡಿ ವಿಟಮಿನ್ ದಾಸ್ತಾನೇ ಇದೆ. ಇವುಗಳನ್ನು ಸೇವಿಸಿ ವಿಟಮಿನ್ ಡಿ ಪಡೆಯಬಹುದು.
ಇದನ್ನೂ ಓದಿ: Drinking water | ಈ ಹಣ್ಣುಗಳನ್ನು ತಿಂದ ಬಳಿಕ ನೀರು ಕುಡಿದರೆ ಆರೋಗ್ಯ ಹಾನಿ
ವಿಟಮಿನ್ ಡಿ ಕೊರತೆ ಹೃದ್ರೋಗಕ್ಕೆ ದಾರಿ!
ಸೂರ್ಯನ ಬಿಸಿಲಿನಿಂದ ಅತ್ಯಂತ ಸುಲಭವಾಗಿ ವಿಟಮಿನ್ ಡಿ ಲಭಿಸುತ್ತದೆ. ಸೂರ್ಯನ ಎಳೆ ಬಿಸಿಲನ್ನು ಹೀರಿಕೊಂಡ ದೇಹ ಡಿ ಜೀವಸತ್ವವನ್ನು ಉತ್ಪಾದಿಸುತ್ತದೆ. ಅಲ್ಲದೆ ಕೆಲವು ಆಹಾರಗಳ ಮೂಲಕವೂ ಡಿ ವಿಟಮಿನ್ ದೊರೆಯುತ್ತದೆ. ಆದರೆ ಕೆಲವೊಮ್ಮೆ ಈ ಜೀವಸತ್ವದ ಕೊರತೆ ಎದುರಾದರೆ ಅದರಿಂದ ಹಲವಾರು ಆರೋಗ್ಯ ತೊಂದರೆಗಳು ಕಾಡುತ್ತವೆ.
ವಿಟಮಿನ್ ಡಿ ಕೊರತೆಯ ಪರಿಣಾಮದಿಂದಾಗಿ ಹೃದ್ರೋಗ, ಕ್ಯಾನ್ಸರ್, ಅಧಿಕ ರಕ್ತದೊತ್ತಡ, ವಿವಿಧ ಸೋಂಕು ಸಮಸ್ಯೆಗಳಿಗೂ ಕಾರಣವಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಕೃಪೆ – Zee Kannada News