ಎಳ್ಳು ತಿನ್ನಿ ವರ್ಷಪೂರ್ತಿ ಆರೋಗ್ಯವಾಗಿರಿ; ಎಳ್ಳಿನ ಸೇವನೆಯಿಂದ ಆರೋಗ್ಯಕ್ಕಾಗುವ ಉಪಯೋಗಗಳು

ಎಳ್ಳು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಸಿಗುವ ಅದ್ಬುತ ಪ್ರಯೋಜನಗಳು: 1. ಮೂತ್ರ ದೋಷ : ರಾತ್ರಿ ಮಲಗುವಾಗ ಶುದ್ಧವಾದ ಎಳ್ಳೆಣ್ಣೆ ಒಂದು ತೊಲ ಕುಡಿದು ಮಲಗಿದರೆ ಹೆಚ್ಚು ಮೂತ್ರ ಆಗುವುದಿಲ್ಲ. ಬುದ್ಧಿಶಕ್ತಿ ಬೆಳೆಯುತ್ತದೆ. ಹಸಿವು…

sesame vijayaprabha

ಎಳ್ಳು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಸಿಗುವ ಅದ್ಬುತ ಪ್ರಯೋಜನಗಳು:

1. ಮೂತ್ರ ದೋಷ : ರಾತ್ರಿ ಮಲಗುವಾಗ ಶುದ್ಧವಾದ ಎಳ್ಳೆಣ್ಣೆ ಒಂದು ತೊಲ ಕುಡಿದು ಮಲಗಿದರೆ ಹೆಚ್ಚು ಮೂತ್ರ ಆಗುವುದಿಲ್ಲ. ಬುದ್ಧಿಶಕ್ತಿ ಬೆಳೆಯುತ್ತದೆ. ಹಸಿವು ಆಗುತ್ತದೆ. ಕೊಬ್ಬು ನಿವಾರಣೆ ಹೊಂದುತ್ತದೆ.

2. ಶರೀರ ಕಾಂತಿ : ಎಳ್ಳೆಣ್ಣೆ ಹಚ್ಚಿಕೊಂಡು ಅಭ್ಯಂಜನ ಮಾಡಿದರೆ ಶರೀರಕ್ಕೆ ತೇಜಸ್ಸು ಬರುತ್ತದೆ.

Vijayaprabha Mobile App free

3. ಮಲ ಶೋಧೆ : 1 ತೊಲ ಎಳ್ಳನ್ನು ಚೆನ್ನಾಗಿ ಅಗಿದು ತಿಂದು ಮಲಗಿದರೆ ಬೆಳಿಗ್ಗೆ ಚೆನ್ನಾಗಿ ಮಲ (clean ಆಗುತ್ತದೆ.) ಶೋಧೆಯಾಗುತ್ತದೆ.

4. ಕೆಮ್ಮಿನ ಭಾಧೆ : ಎಳ್ಳು ಸಕ್ಕರೆ ಹಾಕಿ ಕಷಾಯ ಮಾಡಿ ಕುಡಿದರೆ ಕೆಮ್ಮಿನ ಬಾದೆ ನಿವಾರಣೆಯಾಗುತ್ತದೆ.

5. ಮೂತ್ರ ದೋಷ : ಮೂತ್ರ ಕಡಿಮೆಯಾದರೆ ಅಥವಾ ಕೆಂಪಾದರೆ ಅಥವಾ ಹನಿ ಹನಿ ಆಗುತ್ತಿದ್ದರೆ, ವೇದನೆಯಾಗುತ್ತಿದ್ದರೆ, ದಿನಾಲೂ ಒಂದು ತೊಲ ಎಳ್ಳು ಬೆಳಿಗ್ಗೆ ತಿನ್ನಬೇಕು.1 ಚಮಚ ಎಳ್ಳು, 1 ಚಮಚ ಸೌತೆ ಬೀಜವನ್ನು ಅರೆದು, ಹಾಲು ತುಪ್ಪದೊಡನೆ ಸೇವಿಸಿದರೆ, ಎಲ್ಲಾ ರೀತಿಯ ಕಟ್ಟು ಮೂತ್ರ ಗುಣವಾಗುತ್ತದೆ.

6. ಮೂಲ ವ್ಯಾಧಿ: ಮೂಲ ವ್ಯಾಧಿಯಾಗಿ ರಕ್ತ ಸ್ರಾವವಾಗುತ್ತಿದ್ದರೆ, ಎಳ್ಳನ್ನು ನೀರಿನಲ್ಲಿ ನೆನೆಸಿ, ಅರೆದು ಅದಕ್ಕೆ ಬೆಣ್ಣೆ ಹಾಕಿ ಗುದದ್ವಾರಕ್ಕೆ ಹಚ್ಚಿಕೊಂಡರೆ ಕಡಿಮೆಯಾಗುತ್ತದೆ. 2-3 ಚಮಚ ಎಳ್ಳನ್ನು ನುಣ್ಣಗೆ ಅರೆದು, ಬೆಣ್ಣೆಯೊಡನೆ ಸೇವಿಸಿದರೆ, ರಕ್ತಮೂಲವ್ಯಾಧಿ ಗುಣವಾಗುತ್ತೆ. ಇದನ್ನು ಹಲವು ದಿನಗಳವರೆಗೆ ಮಾಡಬೇಕು.

7. ಮೂಳೆ ಮುರಿತ : ಎಲುಬಿಗೆ ಪೆಟ್ಟು ಬಿದ್ದಿದ್ದರೆ ಎಳ್ಳು ಮತ್ತು ಜೇಷ್ಠಮಧು ಎರಡನ್ನು ನುಣ್ಣಗೆ ಪುಡಿಮಾಡಿ ಅರೆದು ಲೇಪ ಮಾಡಿ ಹಚ್ಚಬೇಕು.

8. ತಲೆನೋವಿಗೆ : ತಲೆನೋವಿಗೆ ಎಳ್ಳಿನ ಎಲೆಯನ್ನು ನೀರಿನಲ್ಲಿ ಅರೆದು ಲೇಪ ಮಾಡಿ ತಲೆಗೆ ಹಚ್ಚಬೇಕು.

9. ಮುಟ್ಟಿಗೆ : ಬೇಗ ರಜ ಆಗಬೇಕಾದರೆ ಎಳ್ಳನ್ನು ತೊಳೆದು ಹುರಿದು ಉಂಡೆ ಮಾಡಿ ತಿನ್ನಬೇಕು. ಅಥವಾ ಎಳ್ಳು ಹುರಿದು ಪುಡಿಮಾಡಿ ಚೆನ್ನಾಗಿ ಬೆಲ್ಲ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ತಿನ್ನಬೇಕು.

10.ಸುಟ್ಟ ಗಾಯಕ್ಕೆ ಎಳ್ಳೆಣ್ಣೆ ಹಚ್ಚಿದರೆ ಬೇಗ ಗುಣವಾಗುತ್ತದೆ. ಕರಿ ಎಳ್ಳು, ಬೇವಿನ ಎಲೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಕೊಬ್ಬರಿ ಎಣ್ಣೆಯಲ್ಲಿ ಚೆನ್ನಾಗಿ ಹುರಿದು, ಸ್ವಲ್ಪ ಕರ್ಪೂರ ಅರಿಸಿನ ಸೇರಿಸಿ ಅರೆದು, ಮುಲಾಮಿನ ತರಹ ಮಾಡಿ ಚಾಕು, ಕತ್ತಿಗಳಿಂದಾದ ಗಾಯ. ಎಲ್ಲಾ ವಿಧದ ಹುಣ್ಣು, ಗುಳ್ಳಿ ಮತ್ತು ಕುರುಗಳಿಗೆ ಹಚ್ಚಿದರೆ ಗುಣವಾಗುತ್ತದೆ.

ಇದನ್ನು ಓದಿ: ಮುಖದ ಮೇಲಿನ ಗುಳ್ಳೆಗಳಿಗೆ ಉತ್ತಮ ಪರಿಹಾರ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.