Terrible dream : ಈ ಸಮಸ್ಯೆಗಳಿದ್ದಲ್ಲಿ ರಾತ್ರಿ ಭಯಾನಕ ಕನಸು ಬೀಳುತ್ತವೆ

Terrible dream : ರಾತ್ರಿ ನಿದ್ರೆಯಲ್ಲಿ (Night sleep) ಭಯಾನಕ ಕನಸುಗಳು (Terrible Dream) ಬಿದ್ದು ನಿಮ್ಮನ್ನು ಕಾಡುತ್ತಿದ್ದರೆ ಹಗಲಿನಲ್ಲಿ ಮನಸ್ಸಿನ ಮೇಲೆ ಬೀಳುವ ಒತ್ತಡಗಳು ಕಾರಣವಾಗಿರಬಹುದು. ಇದರಿಂದ ನಿದ್ದೆ ಅಪೂರ್ಣ ಎನಿಸಿ, ಸುಸ್ತಾಗಿ,…

Terrible dream

Terrible dream : ರಾತ್ರಿ ನಿದ್ರೆಯಲ್ಲಿ (Night sleep) ಭಯಾನಕ ಕನಸುಗಳು (Terrible Dream) ಬಿದ್ದು ನಿಮ್ಮನ್ನು ಕಾಡುತ್ತಿದ್ದರೆ ಹಗಲಿನಲ್ಲಿ ಮನಸ್ಸಿನ ಮೇಲೆ ಬೀಳುವ ಒತ್ತಡಗಳು ಕಾರಣವಾಗಿರಬಹುದು. ಇದರಿಂದ ನಿದ್ದೆ ಅಪೂರ್ಣ ಎನಿಸಿ, ಸುಸ್ತಾಗಿ, ಸರಿಯಾಗಿ ಯೋಚಿಸಲಾಗದೆ ದಿನಪೂರಾ ಹಾಳು ಎಂಬ ಸ್ಥಿತಿಗೆ ಬರಬಹುದು.

Terrible dream : ರಾತ್ರಿ ನಿದ್ರೆಯಲ್ಲಿ ಭಯಾನಕ ಕನಸು ಬೀಳಲು ಕಾರಣ

  • ಒತ್ತಡ
  • ಔಷಧಗಳು
  • ನಿದ್ದೆ ಸಂಬಂಧೀ ಸಮಸ್ಯೆಗಳು
  • ಜೀವನಶೈಲಿ
  • ಹಳೆಯ ಮಾನಸಿಕ ಸಮಸ್ಯೆಗಳು

ಇದನ್ನೂ ಓದಿ: Alzheimer disease : ಆಲ್‌ಝಮರ್ ಕಾಯಿಲೆ ಹಂತಹಂತವಾಗಿ ವ್ಯಕ್ತಿಯನ್ನು ಹೇಗೆಲ್ಲಾ ಕಾಡುತ್ತೆ ಗೊತ್ತಾ..?

1. ಒತ್ತಡ – Stress

ಹಗಲಿನಲ್ಲಿ ಒತ್ತಡ ಹೆಚ್ಚಾದರೆ ರಾತ್ರಿಯಲ್ಲಿ ತೀವ್ರಭಾವ ಕೆರಳಿಸುವ ಸ್ವಪ್ನಗಳು ಬೀಳಬಹುದು. ಹಾಗಾಗಿ ಧ್ಯಾನ, ಸಂಗೀತ, ಪ್ರಾಣಾಯಾಮ, ಯೋಗದ ಮುಖಾಂತರ ಒತ್ತಡವನ್ನು ಕಡಿಮೆ ಮಾಡಲೇಬೇಕು.

Vijayaprabha Mobile App free

2. ಔಷಧಗಳು – Medicines

ನಿದ್ದೆಯನ್ನು ವ್ಯತ್ಯಾಸ ಮಾಡುವ ಕೆಲವು ಔಷಧಗಳಿಂದ ವಿಚಿತ್ರ ಕನಸುಗಳು ಬೀಳುತ್ತವೆ. ಖಿನ್ನತೆ ನಿವಾರಕ ಔಷಧಗಳು ನಮ್ಮ ಕನಸುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.

3. ನಿದ್ದೆ ಸಂಬಂಧೀ ಸಮಸ್ಯೆಗಳು – Sleep related problems

ಕೆಲವೊ೦ದು ನಿದ್ದೆ-ಸ೦ಬ೦ಧೀ ಸಮಸ್ಯೆಗಳು ಇರುವವರಿಗೆ ಭಯಾನಕವಾದ ಕನಸುಗಳು ಬೀಳುತ್ತವೆ. ರೆಸ್ಟ್‌ಲೆಸ್ ಲೆಗ್ ಸಮಸ್ಯೆ, ನಾರ್ಕೊಲೆಪ್ಪಿ ಮುಂತಾದವು ನಿದ್ದೆಯನ್ನು ಕನಸುಗಳ ಮೂಲಕ ಹಾಳುಮಾಡುತ್ತವೆ.

ಇದನ್ನೂ ಓದಿ: ದಿನಕ್ಕೊಂದು ಖರ್ಜೂರ ಸೇವಿಸುವುದರಿಂದ ಆಗುವ ಪ್ರಯೋಜನಗಳು..!

4. ಜೀವನಶೈಲಿ – Lifestyle

ಕೆಲವೊ೦ದು ದಿನನಿತ್ಯದ ಜೀವನಶೈಲಿಯಿಂದ ಭೀಕರವಾದ ಕನಸು ಬೀಳುತ್ತವೆ. ಅತಿಯಾದ ಆಲ್ನೋಹಾಲ್‌ ಸೇವನೆ, ಮಾದಕವಸ್ತುಗಳ ವ್ಯಸನ ಮುಂತಾದವು ನಿದ್ದೆಯನ್ನು ಇನ್ನಿಲ್ಲದಂತೆ ಹಾಳು ಮಾಡುತ್ತವೆ.

5. ಹಳೆಯ ಮಾನಸಿಕ ಸಮಸ್ಯೆಗಳು – Chronic mental problems

ರಾತ್ರಿ ನಿದ್ರೆಗೆ ಜಾರಿದಾಗ ಸುಪ್ತ ಮನಸ್ಸು ಜಾಗೃತವಾಗಿಯೇ ಇರುವುದರಿಂದ ಹಳೆಯ ನೋವು, ಮನಸ್ಸಿಗಾದ ಗಾಯವನ್ನೆಲ್ಲ ಕೆದಕಿ ಕೆಲವೊಮ್ಮೆ ಅಸಂಬದ್ಧ ಕನಸುಗಳು ಬೀಳುತ್ತವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.