Cancer : ಮಕ್ಕಳಿಗೆ ಕ್ಯಾನ್ಸ‌ರ್ ಬರದಂತೆ ತಡೆಯಲು ಪೋಷಕರು ಏನು ಮಾಡಬೇಕು?

Cancer : ಭ್ರೂಣದ ಬೆಳವಣಿಗೆಯ ಮೊದಲ ತಿಂಗಳುಗಳಲ್ಲಿ ಗರ್ಭಿಣಿ ಮಹಿಳೆಯು ವಿಕಿರಣಕ್ಕೆ ಒಳಗಾಗಿದ್ದರೆ, ಮಗುವಿಗೆ ರಕ್ತ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಕೆಲವು ಅಧ್ಯಯನಗಳು ಭ್ರೂಣದ ಎಕ್ಸರೆ ಪರೀಕ್ಷೆಗಳು ಅಥವಾ ಸಿಟಿ ಸ್ಕ್ಯಾನ್‌ಗಳಂತಹ ಕಡಿಮೆ…

cancer

Cancer : ಭ್ರೂಣದ ಬೆಳವಣಿಗೆಯ ಮೊದಲ ತಿಂಗಳುಗಳಲ್ಲಿ ಗರ್ಭಿಣಿ ಮಹಿಳೆಯು ವಿಕಿರಣಕ್ಕೆ ಒಳಗಾಗಿದ್ದರೆ, ಮಗುವಿಗೆ ರಕ್ತ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಕೆಲವು ಅಧ್ಯಯನಗಳು ಭ್ರೂಣದ ಎಕ್ಸರೆ ಪರೀಕ್ಷೆಗಳು ಅಥವಾ ಸಿಟಿ ಸ್ಕ್ಯಾನ್‌ಗಳಂತಹ ಕಡಿಮೆ ಮಟ್ಟದ ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ಕ್ಯಾನ್ಸ‌ರ್ ಅಪಾಯದಲ್ಲಿ ಸ್ವಲ್ಪ ಹೆಚ್ಚಳ ಕಂಡುಬ೦ದಿದೆ ಎ೦ದಿದೆ.

Cancer : ಕ್ಯಾನ್ಸ‌ರ್ ತಡೆಯಲು ಪೋಷಕರು ಏನು ಮಾಡಬೇಕು?

  1. ಗರ್ಭಾವಸ್ಥೆಯಲ್ಲಿ ಆಳ್ಕೊಹಾಲ್ ತಪ್ಪಿಸಿ
  2. ಬಾಲ್ಯದಲ್ಲಿ ಬೊಜ್ಜು ಬರದಂತೆ ತಡೆಯಿರಿ
  3. ದೈಹಿಕ ಚಟುವಟಿಕೆ’
  4. ಆರೋಗ್ಯಕರ ಜೀವನಶೈಲಿ
  5. ಸೂರ್ಯನಿಂದ ರಕ್ಷಣೆ
  6. ನಿಯಮಿತ ಆರೋಗ್ಯ ತಪಾಸಣೆ

ಇದನ್ನೂ ಓದಿ: Rabies : ರೇಬೀಸ್ ಕಾಯಿಲೆ ಬರದಂತೆ ತಡೆಗಟ್ಟುವುದು ಹೇಗೆ?

1. ಗರ್ಭಾವಸ್ಥೆಯಲ್ಲಿ ಆಳ್ಕೊಹಾಲ್ ತಪ್ಪಿಸಿ

  • ಗರ್ಭಾವಸ್ಥೆಯಲ್ಲಿ ಅತಿಯಾದ ಆಳ್ಕೊಹಾಲ್ ಸೇವಿಸುವುದರಿಂದ ಇದು ಮಕ್ಕಳಲ್ಲಿ ರಕ್ತಕ್ಯಾನ್ಸರ್ ಅಪಾಯವನ್ನು ಹೆಚ್ಚುತ್ತದೆ.
  • ಗರ್ಭಾವಸ್ಥೆಯಲ್ಲಿ ಆಳ್ಕೊಹಾಲ್ ಕುಡಿಯುವುದರಿಂದ ಮಕ್ಕಳಲ್ಲಿ ತೀವ್ರವಾದ ಮೈಲೋಯ್ಡ್ ಲ್ಯುಕೇಮಿಯಾ ರೋಗದ 56 ಪ್ರತಿಶತದಷ್ಟು ಅಪಾಯ ಕಂಡುಬರುವ ಸಾಧ್ಯತೆ ಇದೆ.

2. ಬಾಲ್ಯದಲ್ಲಿ ಬೊಜ್ಜು ಬರದಂತೆ ತಡೆಯಿರಿ

ಮಕ್ಕಳಿಗೆ ಆರೋಗ್ಯಕರ , ಅಧಿಕ ಪೌಷ್ಠಿಕಾಂಶಗಳುಳ್ಳ ಆಹಾರ ನೀಡಲು ಆದ್ಯತೆ ನೀಡಿ. ಜಂಕ್ ಫುಡ್ ಹೆಚ್ಚಾಗಿ ನೀಡಬೇಡಿ. ಈ ಮೂಲಕ ನಿಮ್ಮ ಮಕ್ಕಳ ತೂಕವನ್ನು ನಿಭಾಯಿಸಬಹುದು. ಅಧಿಕ ಬೊಜ್ಜು ಕೂಡಾ ಕ್ಯಾನ್ಸರ್ ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತದೆ.

Vijayaprabha Mobile App free

3. ದೈಹಿಕ ಚಟುವಟಿಕೆ

ಮೊಬೈಲ್ ಹಾಗೂ ವೀಡಿಯೋ ಗೇಮ್‌ಗಳ ಬದಲು ಮಕ್ಕಳನ್ನು ಹೊರಗೆ ಆಟವಾಡಲು ಬಿಡಿ. ದೈಹಿಕ ಚಟುವಟಿಕೆ ಹಾಗೂ . ವ್ಯಾಯಾಮದಿಂದ ದೇಹವನ್ನು ಸರಿಯಾಗಿ ನಿಯಂತ್ರಣದಲ್ಲಿಡಬಹುದು ಹಾಗೂ ಆರೋಗ್ಯಕರವಾಗಿರಬಹುದು. ದೈಹಿಕ ಚಟುವಟಿಕೆಯಿಂದ ಕ್ಯಾನ್ಸರ್ (Cancer) ಸೇರಿದಂತೆ ಹಲವು ರೋಗಗಳು ಬರುವ ಅಪಾಯ ತಗ್ಗುತ್ತದೆ.

ಇದನ್ನೂ ಓದಿ: Mental health : ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಚಟುವಟಿಕೆಗಳು ಸಹಕಾರಿ

4. ಆರೋಗ್ಯಕರ ಜೀವನಶೈಲಿ

ನೀವು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಮಕ್ಕಳು ನಿಮ್ಮನ್ನು ನೋಡಿ ಕಲಿಯುತ್ತಾರೆ. ಬೇಗ ಏಳುವುದು, ಸಮಯಕ್ಕೆ ತಕ್ಕಂತೆ ನಿದ್ದೆ ಮಾಡುವುದು, ಧೂಮಪಾನ ಮಾಡದಿರುವುದು, ಕುಡಿಯುವುದನ್ನು ತ್ಯಜಿಸುವುದು ಮುಂತಾದವುಗಳನ್ನು ನೀವು ಮಾಡಿದರೆ ಅದನ್ನು ನೋಡಿ ನಿಮ್ಮ ಮಕ್ಕಳು ಕಲಿಯುತ್ತಾರೆ.

5. ಸೂರ್ಯನಿಂದ ರಕ್ಷಣೆ

  • ಅಸುರಕ್ಷಿತವಾಗಿ ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಕ್ಯಾನ್ಸರ್ ಬರಬಹುದು.
  • ಹೀಗಾಗಿ ಸೂರ್ಯನ ಹಾನಿಕಾರಕ ಕಿರಣಗಳಿಗೆ ಮಕ್ಕಳು ಒಡ್ಡಿಕೊಳ್ಳದಂತೆ ಜಾಗೃತಿ ವಹಿಸಿ.
  • ಮಕ್ಕಳ ಚರ್ಮದ ತ್ವಚೆ ಮೃದುವಾಗಿರುತ್ತೆ ಹಾಗೂ ದುರ್ಬಲವಾಗಿರುತ್ತೆ.
  • ಹಾಗಾಗಿ ಬಿಸಿಲಿಗೆ ಹೋಗುವಾಗ ಮೈ ಮುಚ್ಚುವ ಉಡುಪು, ಸನ್ ಸ್ಟೀನ್‌ಗಳನ್ನು ಅಗತ್ಯವಾಗಿ ಬಳಸಿ.

6. ನಿಯಮಿತ ಆರೋಗ್ಯ ತಪಾಸಣೆ

ರೇಡಿಯೇಷನ್ ಮುಂತಾದ ಪರಿಸರದ ಅ೦ಶಗಳಿಂದ ಬಾಲ್ಯದಲ್ಲಿ ಕ್ಯಾನ್ಸ‌ರ್ ಬರುವ ಸಾಧ್ಯತೆ ಇದೆ. ಈ ರೀತಿಯ ಕ್ಯಾನ್ಸರ್ ತಡೆಯುವುದಕ್ಕೆ ಸಾಧ್ಯವಿಲ್ಲ. ಆದರೆ ನಿಮ್ಮ ಮಕ್ಕಳನ್ನು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸುವುದರಿಂದ ಈ ರೀತಿಯ ಕ್ಯಾನ್ಸ‌ರ್ ಅನ್ನು ವೇಗವಾಗಿ ಪತ್ತೆ ಹಚ್ಚಿ ಗುಣಪಡಿಸಬಹುದಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.