ಮಕ್ಕಳಲ್ಲಿ ಕಂಡುಬರುವ ಓಮಿಕ್ರಾನ್ ಸೋಂಕಿನ ಪ್ರಮುಖ ಲಕ್ಷಣಗಳು; ಓಮಿಕ್ರಾನ್ ನಿಂದ ಮಕ್ಕಳ ರಕ್ಷಣೆ ಹೇಗೆ..?

ದೇಶಾದ್ಯಂತ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮಕ್ಕಳ ಮೇಲೆ ಹೆಚ್ಚು ಸಾಂಕ್ರಾಮಿಕ ರೂಪಾಂತರಿಯ ಪ್ರಭಾವದ ಬಗ್ಗೆ ಪೋಷಕರು ಚಿಂತಿತರಾಗಿದ್ದಾರೆ. ವಯಸ್ಕರಂತೆಯೇ, ಮಕ್ಕಳಲ್ಲಿಯೂ ಕೂಡ ವೈರಸ್ ನ ವಿವಿಧ ರೋಗಲಕ್ಷಣಗಳನ್ನು ಕಂಡುಬರುತ್ತವೆ. ಅವುಗಳಲ್ಲಿ ಕೆಲವು ಎಲ್ಲಾ…

children vijayaprabha news

ದೇಶಾದ್ಯಂತ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮಕ್ಕಳ ಮೇಲೆ ಹೆಚ್ಚು ಸಾಂಕ್ರಾಮಿಕ ರೂಪಾಂತರಿಯ ಪ್ರಭಾವದ ಬಗ್ಗೆ ಪೋಷಕರು ಚಿಂತಿತರಾಗಿದ್ದಾರೆ. ವಯಸ್ಕರಂತೆಯೇ, ಮಕ್ಕಳಲ್ಲಿಯೂ ಕೂಡ ವೈರಸ್ ನ ವಿವಿಧ ರೋಗಲಕ್ಷಣಗಳನ್ನು ಕಂಡುಬರುತ್ತವೆ. ಅವುಗಳಲ್ಲಿ ಕೆಲವು ಎಲ್ಲಾ ವಯಸ್ಸಿನ ಗುಂಪುಗಳಲ್ಲಿ ಸಾಮಾನ್ಯವಾಗಿವೆ.

ಮಕ್ಕಳು SARs-COV-2 ವೈರಸ್‌ಗೆ ಉತ್ತಮ ಮತ್ತು ಹೆಚ್ಚು ದೃಢವಾದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ತೋರಿಸಿದ್ದರೂ ಅವರು ನೋಂಕಿಗೆ ತುತ್ತಾಗಬಹುದು ಮತ್ತು ಅವರಲ್ಲಿ ಸೌಮ್ಯ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.

ಮಕ್ಕಳಲ್ಲಿ ಕೊವಿಡ್ ರೂಪಾಂತರಿಯ ಸಾಮಾನ್ಯ ಲಕ್ಷಣಗಳು

Vijayaprabha Mobile App free
  • ತಲೆನೋವು
  • ಗಂಟಲು ಕೆರೆತ
  • ಮೂಗು ಸೋರುವಿಕೆ
  • ಆಯಾಸ
  • ಸೀನುವುದು

ವಯಸ್ಕರಲ್ಲಿ ಕಂಡುಬರುವ ರೋಗಲಕ್ಷಣಗಳು ಮಕ್ಕಳಿಗಿಂತ ಭಿನ್ನವಾಗಿರುತ್ತವೆ. ವಯಸ್ಕರಲ್ಲಿ, ಮೂಗು ಸೋರುವಿಕೆ ಮೊದಲ ಲಕ್ಷಣವಾದರೆ, ನಂತರ ತಲೆನೋವು, ಆಯಾಸ ಮತ್ತು ಸೀನುವಿಕೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಮಕ್ಕಳಲ್ಲಿ ಕೊವಿಡ್ ರೂಪಾಂತರಿಯ ಅಪರೂಪದ ಲಕ್ಷಣಗಳು:-

“ಉಸಿರಾಟಕ್ಕೆ ಸಂಬಂಧಿಸಿದ ರೋಗಲಕ್ಷಣಗಳ ಹೊರತಾಗಿ ಓಮಿಕ್ರಾನ್ ರೂಪಾಂತರಿಯು ದೇಹದ ಇತರ ಅಂಗಗಳ ಮೇಲೂ ಪರಿಣಾಮ ಬೀರಬಹುದು. ಇದು ಅತಿಸಾರ ಮತ್ತು ದದ್ದುಗಳಂತಹ ಕೆಲವು ಅಸಾಮಾನ್ಯ ಲಕ್ಷಣಗಳಿಗೆ ಕಾರಣವಾಗಬಹುದು.”

ಮಕ್ಕಳಲ್ಲಿ ಕ್ರೂಪ್ ಕೆಮ್ಮು ಕಾಣಿಸಿಕೊಳ್ಳಬಹುದು. ಇದು ಸಾಮಾನ್ಯ ಕೆಮ್ಮಿನಂತೆ ಅಲ್ಲ. ಕ್ರೂಪ್ ಕೆಮ್ಮಿನ ಧ್ವನಿ ಬೇರೆಯಿರುತ್ತದೆ.

ಲಸಿಕೆ ಪಡೆದ ಮಕ್ಕಳಲ್ಲಿ ಕಂಡುಬರುವ ರೋಗಲಕ್ಷಣಗಳು:-

ಓಮಿಕ್ರಾನ್ ನಿಂದ ತುತ್ತಾದ ಲಸಿಕೆ ಪಡೆದ ಮಕ್ಕಳಲ್ಲಿ ಶೀತದಂತಹ ರೋಗಲಕ್ಷಣಗಳು ಕಂಡುಬಂದಿದ್ದು, ಅದು ಹೆಚ್ಚು ಕಾಲದವರೆಗೆ ಇರುವುದಿಲ್ಲ ಅಥವಾ ಯಾವುದೇ ತೀವ್ರ ರೋಗಲಕ್ಷಣಗಳಿಗೆ ಕಾರಣವಾಗುವುದಿಲ್ಲ ತಜ್ಞರು ಹೇಳಿದ್ದಾರೆ.

ಲಸಿಕೆಯು ಕೊರೋನಾ ವೈರಸ್ ಸೋಂಕನ್ನು ತಡೆಯಲು ಸಾಧ್ಯವಿಲ್ಲ. ಆದರೆ, ಅದರ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ಲಸಿಕೆ ಸಾಕಷ್ಟು ಪರಿಣಾಮಕಾರಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಶೀತದಂತಹ ರೋಗಲಕ್ಷಣಗಳಿಗೆ ಚಿಕಿತ್ಸೆ:-

“ಮಗುವಿಗೆ ಸಾಮಾನ್ಯವಾಗಿ ಬಾಯಾರಿಕೆಯಾಗದಿರುವ ಸಾಧ್ಯತೆಯಿರುತ್ತದೆ. ಆದರೆ, ಮಗುವಿಗೆ ಸಾಕಷ್ಟು ದ್ರವ ಸೇವಿಸುವಂತೆ ಹೇಳಿ.

ಜನರಲ್ಲಿ ಸಾಮಾನ್ಯ ಜ್ವರ, ಕೊರೋನಾ ಮತ್ತು ಹೊಸ ರೂಪಾಂತರಿಗಳ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಮಗುವಿಗೆ ಶೀತ, ಕೆಮ್ಮು, ಮೂಗು ಸೋರುವಿಕೆಯು 1 ರಿಂದ 2 ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಬಾಮ್ ಹಚ್ಚುವುದು:- ವಿಕ್ಸ್, ಬಾಮ್ ಬಳಕೆಗೆ ವೈದ್ಯರು ಕೂಡ ಸಲಹೆ ನೀಡುತ್ತಾರೆ. ಇದು ಪರ್ಯಾಯ ಜನಪ್ರಿಯ ಚಿಕಿತ್ಸೆಯಾಗಿದೆ. ಎಕ್ಸ್ ಬಾಮ್ ಎದೆ ಮತ್ತು ಬೆನ್ನಿಗೆ ಹಚ್ಚಿದರೆ ತಾತ್ಕಾಲಿಕ ಪರಿಹಾರವನ್ನು ನೀಡುತ್ತದೆ. ಆದರೆ, ಅದನ್ನು ನೇರವಾಗಿ ಮೂಗಿನ ಹೊಳ್ಳೆಗಳಿಗೆ ಹಚ್ಚಬಾರದು.

ಮಕ್ಕಳ ರಕ್ಷಣೆ:- ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ಮಕ್ಕಳೊಂದಿಗೆ ಪೋಷಕರು ಕೂಡ ಸರಿಯಾಗಿ ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು ಮತ್ತು ಎಲ್ಲಾ ಕೊವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು.

ಜನಸಂದಣಿ ಸ್ಥಳಗಳಿಂದ ಸಾಧ್ಯವಾದಷ್ಟು ದೂರವಿರಿ. ನೀವು ಮತ್ತು ನಿಮ್ಮ ಮಕ್ಕಳು ಮನೆಯೊಳಗೆ ಇರುವುದು ಉತ್ತಮ, ನಿಮ್ಮ ಮಗುವಿಗೆ ಯಾವುದೇ ರೋಗಲಕ್ಷಣಗಳು ಕಂಡುಬಂದರೆ ತುರ್ತು ಸಂದರ್ಭದಲ್ಲಿ ಮಾತ್ರ ಹೊರಗಡೆ ಹೋಗಿ.

ಮಕ್ಕಳಲ್ಲಿ ಶೀತ ಅಥವಾ ಜ್ವರಕ್ಕೆ ಅತ್ಯಂತ ಪರಿಣಾಮಕಾರಿ ಆಹಾರಗಳು:-

  • ಆಹಾರಗಳಲ್ಲಿ ಅರಿಶಿನ, ಅಜವೈನ್ ಮತ್ತು ಕರಿಬೇವನ್ನು ಬಳಸಿ
  • ತುಪ್ಪದೊಂದಿಗೆ ದಾಲ್ ಖಚಡಿ
  • ಬಾಳೆಹಣ್ಣು-ವಾಲ್ನಟ್ ಮಿಲ್ಕ್ ಶೇಕ್ (ಐಸ್ ಬೇಡ)
  • ಅಕ್ಕಿ ಅಥವಾ ರಾಗಿ ಅಥವಾ ಸಬ್ಬಕ್ಕಿ ಗಂಜಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.