1. ಕಾಲಿನ ಆಣಿಗೆ ಮದರಂಗಿಯ ಬೇರು ಹಾಗೂ ಚಕ್ಕೆಯನ್ನು ನುಣ್ಣಗೆ ಅರೆದು ಕಟ್ಟುತ್ತಿದ್ದರೆ ಆಣಿ ಗುಣಮುಖವಾಗುವುದು.
2. ಪಾರಿವಾಳದ ಹಿಕ್ಕೆಯನ್ನು ಪುಡಿ ಮಾಡಿ, ಸ್ವಲ್ಪ ಕೆಂಡವನ್ನು ಒಂದು ತಟ್ಟೆಯಲ್ಲಿಟ್ಟುಕೊಂಡು, ಆ ಪುಡಿಯನ್ನು ಅದಕ್ಕೆ ಹಾಕಿ ತಕ್ಷಣ ಒಂದು ಬಟ್ಟೆ ಕರಟವನ್ನು ಅದಕ್ಕೆ ಮುಚ್ಚಬೇಕು.
ಅದರಿಂದ ಬರುವ ಹೊಗೆಯನ್ನು ಆಣಿಗೆ ಹಿಡಿದರೆ ಆಣಿ ಕರಗಿ ಹೋಗುತ್ತದೆ.
3. ಅರ್ಧ ತೊಲ ಕರ್ಪೂರ, ಒಂದು ತೊಲ ಕರ್ಪೂರತೈಲ, ಕಾಲು ತೋಲ ತಂಬಾಕಿನ ಪುಡಿ, ಹತ್ತು ತೊಲ ಕೊಬ್ಬರಿ ಎಣ್ಣೆ, ಇವುಗಳನ್ನು ಚೆನ್ನಾಗಿ ಮಿಶ್ರಮಾಡಿ. ಈ ಮಿಶ್ರಣವನ್ನು ಹುಣ್ಣುಗಳಿಗೆ ಹಚ್ಚಿದರೆ ಗುಣವಾಗುವುದು.
4. ರಾತ್ರಿ ಮಲಗುವಾಗ ಉಪ್ಪು ನೀರಿನ ಬಟ್ಟೆ ಕಟ್ಟಿ ಮೇಲೆ ಒಣ ಬಟ್ಟೆ ಕಟ್ಟಿಕೊಂಡು ಮಲಗಬೇಕು. ಹೀಗೆ 1 ವಾರದಿಂದ 2 ವಾರ ಮಾಡಿದರೆ ಆಣಿ ಮೆತ್ತಗಾಗಿ ಒಳಗಿನ ಕಲ್ಮಶ ಹೊರಬಂದು ಗುಣವಾಗುತ್ತದೆ.
ಇದನ್ನು ಓದಿ: ಬಾಯಿ, ಕಣ್ಣು, ಕಿವಿ ಮತ್ತು ಮೂಗಿನ ತೊಂದರೆಗಳಿಗೆ ಮನೆ ಔಷಧಿ