ಸಕ್ಕರೆ ಕಾಯಿಲೆ ಅಥವಾ ಸಿಹಿ ಮೂತ್ರಕ್ಕೆ ಮನೆ ಔಷದಿ

ಮಧುಮೇಹಕ್ಕೆ (ಸಕ್ಕರೆ ಕಾಯಿಲೆ ಅಥವಾ ಸಿಹಿ ಮೂತ್ರ) ಮನೆ ಔಷಧಿ: 1. 4 ತೊಲ ಅತ್ತಿ ಚಕ್ಕೆಯನ್ನು, 30 ತೊಲ ನೀರಿನಲ್ಲಿ ಹಾಕಿ ಕುದಿಸಿ, 8 ಅಂಶ ಮಾಡಬೇಕು, ಈ ಕಷಾಯವನ್ನು ಸಿಹಿಮೂತ್ರರೋಗಿಗಳು ಸೇವಿಸಿದರೆ…

ಮಧುಮೇಹಕ್ಕೆ (ಸಕ್ಕರೆ ಕಾಯಿಲೆ ಅಥವಾ ಸಿಹಿ ಮೂತ್ರ) ಮನೆ ಔಷಧಿ:

1. 4 ತೊಲ ಅತ್ತಿ ಚಕ್ಕೆಯನ್ನು, 30 ತೊಲ ನೀರಿನಲ್ಲಿ ಹಾಕಿ ಕುದಿಸಿ, 8 ಅಂಶ ಮಾಡಬೇಕು, ಈ ಕಷಾಯವನ್ನು ಸಿಹಿಮೂತ್ರರೋಗಿಗಳು ಸೇವಿಸಿದರೆ ಸಿಹಿಮೂತ್ರದ ಬಾಧೆ ನಿವಾರಣೆಯಾಗುತ್ತದೆ. ಈ ಕಷಾಯದಿಂದ ಹುಣ್ಣು (ಗ್ಯಾಂಗ್ರಿನ್) ತೊಳೆದರೆ ಮಾಯುತ್ತದೆ. ಈ ಚಕ್ಕೆಯನ್ನು ನುಣ್ಣಗೆ ಪುಡಿಮಾಡಿ ಮಧುಮೇಹ ರೋಗಿಗಳು ಸೇವಿಸಿದರೆ ರೋಗ ನಿವಾರಣೆಯಾಗುತ್ತದೆ.

2. ಹಾಗಲ ಬಳ್ಳಿ ಸಮೂಲ ತಂದು ಒಣಗಿಸಿ ಪುಡಿ ಮಾಡಿಕೊಂಡು, ರಾತ್ರಿ ಮತ್ತು ಬೆಳಿಗ್ಗೆ ಲಿಂಬೇ ರಸದಲ್ಲಿ ಸೇವಿಸಬೇಕು.

Vijayaprabha Mobile App free

3.10 ಗ್ರಾಂ ತುಂಬೇ ಸೊಪ್ಪಿಗೆ, 2-3 ಕರಿ ಮೆಣಸಿನಕಾಳು ಹಾಕಿ. ನೀರಿನಲ್ಲಿ ತೇಯ್ದು (ಅರೆದು) 21 ದಿನ ಸೇವಿಸಬೇಕು.

4. ಕಹಿ ಬೇವಿನ ಚಿಗುರೆಲೆಗಳನ್ನು ಚೆನ್ನಾಗಿ ಅರೆದು, ಕಡಲೇ ಕಾಳಿನ ಗಾತ್ರದ ಉಂಡೆಗಳನ್ನು ಮಾಡಿ ಒಣಗಿಸಿಟ್ಟುಕೊಳ್ಳಬೇಕು. ಪ್ರತಿ ದಿನ ಬೆಳಿಗ್ಗೆ ಹಸಿದ ಹೊಟ್ಟೆಗೆ 1-2 ಮಾತ್ರೆಗಳನ್ನು ಸೇವಿಸಬೇಕು.

5. ಒಂದು ಬಲವಾದ ಹಿಡಿ (ಮುಷ್ಟಿ) ಕರಿ ಬೇವಿನ ಸೊಪ್ಪುಗಳನ್ನು 2-3 ದಿನ ನೆರಳಲ್ಲಿ ಒಣಗಿಸಿ ಪುಡಿ ಮಾಡಿ, ಅದಕ್ಕೆ ಸ್ವಲ್ಪ ಓಮದ ಪುಡಿ ಸೇರಿಸಿ, ಗಾಜಿನ ಪಾತ್ರೆ ಅಥವಾ ಜಾಡಿಯಲ್ಲಿ ಸಂಗ್ರಹಿಸಿಟ್ಟಿಕೊಂಡು ಟೀ ಚಮಚದಷ್ಟು ಮಿಶ್ರಣವನ್ನು ಬಿಸಿ ಹಾಲಿಗೆ ಹಾಕಿ. ಪ್ರತಿ ದಿನ ರಾತ್ರಿ ಮಲಗುವಾಗ, 1 ತಿಂಗಳ ತನಕ ಸೇವಿಸಬೇಕು.

6. ಒಣಕರ್ಜೂರ 5 ಸೇರು ತಂದು, ಅದರ ಬೀಜ ತೆಗೆದು, ಬಿಸಿನೀರಿನಲ್ಲಿ ತೊಳೆದು ಕುಟ್ಟ, 8 ಸೇರು ನೀರಿನಲ್ಲಿ ಹಾಕಿ ಬತ್ತಿಸಿ, 4 ಸೀರಿಗಿಳಿಸಿ ಹಿಸುಕಿ ಸೋಸಿ, ತಿರುಗಿ ಒಲೆಯಮೇಲಿಟ್ಟು ಕುದಿಸಿ, ಎಳೆಯ ಪಾಕದಲ್ಲಿ ಇಳಿಸಿಟ್ಟುಕೊಡು, 1 ರಿಂದ 2 ತಿಂಗಳು ನಿತ್ಯ ಬೆಳಿಗ್ಗೆ ರಾತ್ರಿ 2 ಚಮಚದಂತೆ ಹಾಲಿನಲ್ಲಿ ಸೇವಿಸುವುದು. ಇದನ್ನು ಸೊರಗಿದ ಮಕ್ಕಳಿಗೂ ಕೊಡಬಹುದು.

7. ನಂಜಬಟ್ಟಲು ಎಲೆ ಮತ್ತು ಅಕ್ಕಿಯನ್ನು ಸೇರಿಸಿ ಅರೆದು ಕಡುಬುಮಾಡಿ ತಿನ್ನುವುದು.

8. ಹೊಂಗೆ ಹೂವಿನ ಒಣಗಿದ ಚೂರ್ಣ ಅಥವಾ ಹೊಂಗೆ ಹೂವು 3 ತೋಲ ಅರೆದು ಒಂದು ಲೋಟ ಕುದಿಯುತ್ತಿರುವ ನೀರಿನಲ್ಲಿ ಹಾಕಿ, 1/4 ಘಂಟೆ ಇಟ್ಟಿದ್ದು, ಹಿಸುಕಿ ಸೋಸಿ, ನಿತ್ಯ ಬೆಳಿಗ್ಗೆ ರಾತ್ರಿ ಕುಡಿಯುವುದು.

9. ಹೊಂಗೆಯ ಒಣಗಿದ ಹೂವು, ನೇರಳೆ ಬೀಜ ಮತ್ತು ಹಾಗಲಕಾಯಿಗಳನ್ನು ಸಮಭಾಗ ಚೂರ್ಣಿಸಿ ನಿತ್ಯ ಬೆಳಿಗ್ಗೆ ರಾತ್ರಿ 1/2 ತೊಲದಂತೆ ಸೇವಿಸಿ ಬಿಸಿನೀರು ಕುಡಿಯುವುದು.

10. ಹಾಗಲಕಾಯಿ ಚಟ್ಟಿಪುಡಿ : ಹೆಸರುಬೇಳೆ, ಸೈಂದ್ರ ಲವಣ, ಕರಿಬೇವು, ಹಾಗಲಕಾಯಿಗಳ ಸಮಭಾಗ ತೆಗೆದುಕೊಂಡು, ಕಾಳುಮೆಣಸು ಶುಂಠಿಗಳ ಚೂರ್ಣ ಮಾಡಿ, ಹೆಸರುಬೇಳೆ ಹಾಗಲಕಾಯಿಯನ್ನು ಕೆಂಪಗೆ ಹುರಿದುಕೊಂಡು, ಎಲ್ಲವನ್ನು ಸೇರಿಸಿ ಕುಟ್ಟಿಕೊಳ್ಳುವುದು. ಇದು ಮಧುಮೇಹಿಗಳಿಗೆ ಒಳ್ಳೆಯದು.

11. ಪ್ರತಿ ದಿನ ರಾತ್ರಿ ಮಲಗುವ ಮುಂಚೆ 5-6 ಕರಿಬೇವಿನ ಎಲೆ ಅಗಿದು ತಿಂದರೆ ಮಧುಮೇಹ ಹತೋಟಿಯಲ್ಲಿರುತ್ತದೆ.

12.ದಿನಾ ಬೆಳಿಗ್ಗೆ ರಾತ್ರಿ 2 -2 ಚಮಚ ಬೇವಿನ ಎಲೆರಸ ಕುಡಿಯಬೇಕು. ಬರೀ ಬಿಸಿ ನೀರನ್ನು ಕುಡಿಯಬೇಕು. ದಿನಾ ಬೆವರು ಬರುವಷ್ಟು ವೇಗವಾಗಿ ಚಕ್ರಂಬಣ (ವಾಕ್) ಮಾಡಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.