ಚಿಕ್ಕ ಸೊಸೆಯೊಂದಿಗೆ ಮಾವನ ಅಕ್ರಮ ಸಂಬಂಧ; ಗಂಟಲು ಸೀಳಿದ ಪತ್ನಿ, ದೊಡ್ಡ ಸೊಸೆ

ಲಖನೌ : ಮಗಳಂತೆ ನೋಡಿಕೊಳ್ಳಬೇಕಾಗಿದ್ದ ಸೊಸೆಯೊಂದಿಗೆ ಒಬ್ಬ ವ್ಯಕ್ತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಇದರಿಂದ ಪತ್ನಿ ಮತ್ತು ದೊಡ್ಡ ಸೊಸೆ ಕೋಪಕ್ಕೆ ಗುರಿಯಾಗಿದ್ದ. ಎಷ್ಟು ಹೇಳಿದರೂ ಅವನ ನಡವಳಿಕೆಯು ಬದಲಾಗದ ಕಾರಣ ಅವರಿಬ್ಬರು ಒಟ್ಟಿಗೆ…

Crime vijayaprabha news

ಲಖನೌ : ಮಗಳಂತೆ ನೋಡಿಕೊಳ್ಳಬೇಕಾಗಿದ್ದ ಸೊಸೆಯೊಂದಿಗೆ ಒಬ್ಬ ವ್ಯಕ್ತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಇದರಿಂದ ಪತ್ನಿ ಮತ್ತು ದೊಡ್ಡ ಸೊಸೆ ಕೋಪಕ್ಕೆ ಗುರಿಯಾಗಿದ್ದ. ಎಷ್ಟು ಹೇಳಿದರೂ ಅವನ ನಡವಳಿಕೆಯು ಬದಲಾಗದ ಕಾರಣ ಅವರಿಬ್ಬರು ಒಟ್ಟಿಗೆ ಸೇರಿ ಅವನನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಭಡೋಯ್ ಜಿಲ್ಲೆಯ ಕೊಯಿರಾನಾ ಬಳಿ ನಡೆದಿದೆ.

ಪೊಲೀಸರ ಪ್ರಕಾರ, 55 ವರ್ಷದ ವ್ಯಕ್ತಿಗೆ ನಾಲ್ಕು ಗಂಡು ಮಕ್ಕಳಿದ್ದಾರೆ. ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ನಾಲ್ವರು ಮುಂಬೈಗೆ ವಲಸೆ ಹೋಗಿದ್ದರು. ಅವರಲ್ಲಿ ಇಬ್ಬರು ಗಂಡು ಮಕ್ಕಳಿಗೆ ವಿವಾಹವಾಗಿದ್ದಾರೆ. ಆ ಇಬ್ಬರು ಸೊಸೆಯಂದಿರು ಅತ್ತೆ ಮಾವನ ಜೊತೆ ತಮ್ಮ ಮನೆಯಲ್ಲಿಯೇ ಇರುತ್ತಾರೆ.

ಕುಟುಂಬದ ಯಜಮಾನನಾಗಿದ್ದ 55 ವರ್ಷದ ಆ ವ್ಯಕ್ತಿ, ತನ್ನ ಮಗನು ದೂರದಲ್ಲಿದ್ದ ಪರಿಸ್ಥಿತಿಯನ್ನು ತನಗೆ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಂಡು ತನ್ನ ಚಿಕ್ಕ ಸೊಸೆಯೊಂದಿಗೆ ವಿವಾಹೇತರ ಸಂಬಂಧವನ್ನು ಇಟ್ಟುಕೊಂಡಿದ್ದಾನೆ. ಒಂದು ದಿನ ಅವರ ಪತ್ನಿ ಮತ್ತು ದೊಡ್ಡ ಸೊಸೆ ರೆಡ್ ಹ್ಯಾಂಡ್ ಆಗಿ ಹಿಡಿದು ಆತನೊಂದಿಗೆ ಜಗಳವಾಡಿದ್ದಾರೆ.

Vijayaprabha Mobile App free

ಎಷ್ಟು ಹೇಳಿದರೂ ಅವರಿಬ್ಬರು ತಮ್ಮ ನಡವಳಿಕೆಯನ್ನು ಬದಲಿಸದ ಕಾರಣ ಅವನ ಪತ್ನಿ ಮತ್ತು ದೊಡ್ಡ ಸೊಸೆ ಸೇರಿ ಕಿರಿಯ ಸೊಸೆಯನ್ನು ಕೆಲವು ದಿನಗಳ ಹಿಂದೆ ತವರು ಮನೆಗೆ ಕಳುಹಿದ್ದರು. ಈ ಬೆಳವಣಿಗೆಯಿಂದ ಅವನು ಕೋಪಗೊಂಡು ಒಂದು ದಿನ ಅವರು ದೊಡ್ಡ ಸೊಸೆಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದು, ಅವಳ ಕಣ್ಣು ತೀವ್ರವಾಗಿ ಗಾಯವಾಗಿತ್ತು. ನಂತರ ತನ್ನ ಪತ್ನಿ ಮತ್ತು ದೊಡ್ಡ ಸೊಸೆಯನ್ನು ಕಾಲಿನಿಂದ ಒದ್ದು ಮನೆಯಿಂದ ಹೊರಹಾಕುತ್ತಾನೆ. ಇದರಿಂದ ಅವರಿಬ್ಬರೂ ಅದೇ ಕಾಲೋನಿಯಲ್ಲಿ ತಮ್ಮ ನಿವಾಸದಿಂದ ಸ್ವಲ್ಪ ದೂರದಲ್ಲಿ ಮತ್ತೊಂದು ಮನೆಯಲ್ಲಿ ವಾಸಿಸುತ್ತಿದ್ದರು.

ನಾಲ್ಕು ದಿನಗಳ ಹಿಂದೆ ಅವನು ತನ್ನ ಚಿಕ್ಕ ಸೊಸೆಯನ್ನು ಮರಳಿ ಮನೆಗೆ ಕರೆತಂದು ಅಕ್ರಮ ಸಂಬಂಧ ನಡೆಸಿದ್ದಾನೆ. ಈ ವಿಷಯ ತಿಳಿದ ಪತ್ನಿ ಮತ್ತು ದೊಡ್ಡ ಸೊಸೆ ಕೋಪಗೊಂಡು, ಹೇಗಾದರೂ ಅವನನ್ನು ಕೊನೆಗೊಳಿಸಲು ನಿರ್ಧರಿಸಿ ಮನೆಗೆ ಹೋಗಿದ್ದಾರೆ. ಶನಿವಾರ (ಡಿಸೆಂಬರ್ 12) ರಾತ್ರಿ, ತನ್ನ ಚಿಕ್ಕ ಸೊಸೆಯೊಂದಿಗೆ ಏಕಾಂತದಲ್ಲಿದ್ದ ಮಾವನ ಮೇಲೆ ದಾಳಿ ನಡೆಸಿ ಚಾಕುವಿನಿಂದ ಅವನ ಗಂಟಲು ಸೀಳಿದ್ದಾರೆ. ಈ ಹಠಾತ್ ಬೆಳವಣಿಗೆಯಿಂದ ಆಘಾತಕ್ಕೊಳಗಾದ ಚಿಕ್ಕ ಸೊಸೆ ಸ್ಥಳದಿಂದ ಓಡಿಹೋಗಿ ಪೊಲೀಸರನ್ನು ಆಶ್ರಯಿಸಿ, ದಾಳಿಯ ವಿಷಯದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದಾಗ ಆರೋಪಿ ರಕ್ತದ ಮಡಿಲಲ್ಲಿ ಮಲಗಿದ್ದು,ಅವನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವನು ಸತ್ತಿರುವ ವಿಷಯ ಸ್ಪಷ್ಟಪಡಿದರು. ಈ ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಭಡೋಯಿ ಎಸ್‌ಪಿ ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.