ಸುಖಕರವಾದ ಜೀವನ ನಿಮ್ಮದಾಗಬೇಕಾದರೆ ಆರೋಗ್ಯಕರ ನಿದ್ದೆ ನಿಮ್ಮದಾಗಿರಬೇಕು. ಏಕೆಂದರೆ ನಿದ್ದೆ ಹೆಚ್ಚಾದರೂ ಕಷ್ಟ, ಕಮ್ಮಿಯಾದರೂ ತೊಂದರೆ ತಪ್ಪಿದ್ದಲ್ಲ. ಹೌದು, ಹೆಚ್ಚು ನಿದ್ರೆ ಮಾಡುವ ಜನರಿಗೆ ಹೃದ್ರೋಗ ಮತ್ತು ಖಿನ್ನತೆಯಂತಹ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು.
ಇನ್ನು, ನಿದ್ರಾಹೀನತೆಯಿಂದ ರಕ್ತದ ಒತ್ತಡ, ಮಾನಸಿಕ ಖಿನ್ನತೆ, ಬೊಜ್ಜು ಮತ್ತಿತರ ಸಮಸ್ಯೆ ಕಾಣಿಸಿಕೊಳ್ಳಬಹುದಾಗಿದ್ದು, ನಿಮ್ಮ ಆರೋಗ್ಯದ ದೃಷ್ಠಿಯಿಂದ ನೀವು ಪ್ರತಿನಿತ್ಯ 6ರಿಂದ 8ಗಂಟೆ ರಾತ್ರಿ ನಿದ್ದೆ ಮಾಡುವುದು ಉತ್ತಮ.
ನಿದ್ರಾಹೀನತೆಗೆ ಕಾರಣಗಳು:
* ವಿಪರೀತ ಆಲೋಚನೆ, ಕೆಲಸದ ಒತ್ತಡ, ಆರ್ಥಿಕ ತೊಂದರೆಗಳು,ಕೋಪ, ಕಿರಿಕಿರಿ, ಮಾನಸಿಕ ಆತಂಕ ನಿದ್ರಾಹೀನತೆಗೆ ಕಾರಣ
* ಚಹಾ ಮತ್ತು ಕಾಫಿಯಲ್ಲಿನ ಕೆಫೀನ್ ಪರಿಣಾಮ ನಿದ್ರಾಹೀನತೆಗೆ ಕಾರಣವಾಗಿದೆ
* ಸಣ್ಣ ವಿಷಯಗಳ ಬಗೆಗಿನ ಭಯ, ಜೀವನದಲ್ಲಿ ಒಂಟಿತನವನ್ನು ನಿಭಾಯಿಸುವುದು, ಸರಿಯಾದ ವೈವಾಹಿಕ ಜೀವನದ ಕೊರತೆ
* ಹಗಲಿನಲ್ಲಿ ಮಲಗುವುದು, ರಾತ್ರಿಯಲ್ಲಿ ಅತಿಯಾದ ಫೋನ್ ಬಳಕೆ ಕೂಡ ನಿದ್ರಾಹೀನತೆಗೆ ಮುಖ್ಯ ಕಾರಣವಾಗಿದೆ.