heart attack: ಹೃದಯಾಘಾತದಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿವೆ. ಕೋವಿಡ್ ಸೋಂಕಿನಿಂದ ನಂತರ ಹೃದಯಾಘಾತದ ಸಂಖ್ಯೆ ಹೆಚ್ಚಾಗಿದೆ ಇದು ಆತಂಕದ ಸಂಗತಿ ಎಂದು ಹೃದ್ರೋಗ ತಜ್ಞರು ತಿಳಿಸಿದ್ದಾರೆ. ಒತ್ತಡದ ಬದುಕು ಸಹಜವಾಗಿಬಿಟ್ಟಿದೆ. ಯಾವುದೇ ಬಿಪಿ ಶುಗರ್ ಖಾಯಿಲೆ ಇಲ್ಲದೇ ಹೃದಯಾಘಾತಕ್ಕೆ ತುತ್ತಾಗೊ ಸಂಖ್ಯೆ ಇಲ್ಲಿ ವಿಕಾಸವಾಗುತ್ತಿದೆ.
![heart attack](https://vijayaprabha.com/wp-content/uploads/2023/08/heart-attack.jpg)
ಭಾರತದಲ್ಲಾಗುವ ಶೇ. 35 ಹೃದಯಾಘಾತಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಆಗಿರುತ್ವೆ. 60 ವರ್ಷ ಬದುಕುವ ಕನಸು ಕಾಣುವುದೂ ಮಾಡರ್ನ್ ಜನರಿಗೆ ಸಹ್ಯವಾಗದಂತ ಪರಿಸ್ಥಿತಿ ಇದು ಅಂತಾರೆ ಹೃದ್ರೋಗ ತಜ್ಞರು. ಇತ್ತೀಚೆಗೆ 35ರ ಹಾಸು ಪಾಸಿನ ಮಹಿಳೆಯರಲ್ಲಿ ಹೃದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಆತಂಕದ ಬೆಳವಣಿಗೆ. ಒತ್ತಡ ಸೇರಿದಂತೆ ಇನ್ನಿತರೆ ಕಾರಣಕ್ಕೆ ಹೃದಯಾಘಾತ ಹೆಚ್ಚಾಗುತ್ತಿದೆ ಎಂದಿದ್ದಾರೆ.
ಇದನ್ನು ಓದಿ: ಲೋ ಬಿಪಿ ಲಕ್ಷಣಗಳೇನು? BP ಲೋ ಆದಾಗ ತಕ್ಷಣ ಏನು ಮಾಡಬೇಕು?
ಹೃದಯಾಘಾತ ಮತ್ತು ಹೃದಯ ಸ್ತಂಭನಕ್ಕಿರುವ ವ್ಯತ್ಯಾಸವೇನು?
ಹೃದಯ ಸ್ತಂಭನ ಮತ್ತು ಹೃದಯಾಘಾತ ಒಂದೇ ಅಲ್ಲ. ಹೃದಯಾಘಾತ ಎಂದರೆ ಹೃದಯಕ್ಕೆ ರಕ್ತದ ಹರಿವು ನಿಲ್ಲುವುದು. ಹೃದಯ ಸ್ತಂಭನ ಎಂದರೆ ಹೃದಯ ಬಡಿತ ಸಂಪೂರ್ಣ ನಿಂತು ಹೋಗುವುದು. ಹೃದ್ರೋಗ ತಜ್ಞರ ಪ್ರಕಾರ ಹೃದಯ ಸ್ತಂಭನಕ್ಕೆ ಬಹಳ ಮುಖ್ಯ ಕಾರಣ ಹಾರ್ಟ್ ಅಟ್ಯಾಕ್.
ಇನ್ನು ಹೆಡ್ ಇಂಜ್ಯೂರಿ, ಶ್ವಾಸಕೋಶ ಸೋಂಕು, ನ್ಯುಮೋನಿಯಾದಿಂದ ಬಳಲುವ ಹಲವರು ಹೃದಯ ಸ್ತಂಭನದಿಂದಲೇ ಸಾವನ್ನಪ್ಪುತ್ತಾರೆ. ಆದರೆ, ಹಾರ್ಟ್ ಅಟ್ಯಾಕ್ ಆದವರಿಗೆ ಎಲ್ಲರಿಗೂ ಕಾರ್ಡಿಯಾಕ್ ಅರೆಸ್ಟ್ ಆಗುವುದಿಲ್ಲ.
ಇದು HEART ATTACK ಸೂಚನೆ
ತಜ್ಞರ ಪ್ರಕಾರ ಹೃದಯಾಘಾತದ ಸಮಯದಲ್ಲಿ ಮನುಷ್ಯನಿಗೆ ಅದರ ಸೂಚನೆಗಳು ಸಿಗುತ್ತವೆ. ಪುರುಷರಿಗೆ ಎಡಗೈ ನೋವು, ಉಸಿರಾಟದ ತೊಂದರೆ, ಎದೆನೋವು/ಉರಿ, ನಡುಕದ ಜೊತೆಗೆ ಬೆವರು, ಎದೆ ಮೇಲೆ 1-2kg ಭಾರವಿರುವ ಅನುಭವ ಉಂಟಾಗಬಹುದು.
ಅದೇ ರೀತಿ ಮಹಿಳೆಯರಿಗೆ ಎದೆಭಾರ, ಆರಾಮದಾಯಕ ಕೆಲಸ ಮಾಡುವಾಗಲೂ ಸುಸ್ತು, ತಲೆಸುತ್ತು, ವಾಂತಿ, ಬಲ/ ಎರಡೂ ಕೈಗಳು ನೋವು, ಭುಜ, ಸೊಂಟ/ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಆರೋಗ್ಯದ ಹಿತದೃಷ್ಟಿಯಿಂದ ಈ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಕಾಣುವುದು ಉತ್ತಮ.
ಇದನ್ನು ಓದಿ: ಮೋದಿ ಸರ್ಕಾರದ ಬಂಪರ್.. ಖಾತೆಗೆ 25 ಸಾವಿರ ರೂ., ಇವರಿಗೆ ಮಾತ್ರ!
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |