Hibiscus Flower | ದಾಸವಾಳ ಹೂವಿನ ಆರೋಗ್ಯ ಪ್ರಯೋಜನಗಳು

Hibiscus Flower | ದಾಸವಾಳದಲ್ಲಿ (Hibiscus Flower) ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಅನೇಕ ಪ್ರಯೋಜನಗಳನ್ನು ನೀಡುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇದು ತೂಕ ನಷ್ಟವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಬ್ಯಾಕ್ಟೀರಿಯಾ ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು…

Hibiscus Flower

Hibiscus Flower | ದಾಸವಾಳದಲ್ಲಿ (Hibiscus Flower) ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಅನೇಕ ಪ್ರಯೋಜನಗಳನ್ನು ನೀಡುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇದು ತೂಕ ನಷ್ಟವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಬ್ಯಾಕ್ಟೀರಿಯಾ ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯ ಮತ್ತು ಯಕೃತ್ತಿನ ಆರೋಗ್ಯವನ್ನು ಬೆಂಬಲಿಸುತ್ತದೆ.

ದಾಸವಾಳ ಹೂವಿನ ಆರೋಗ್ಯ ಪ್ರಯೋಜನಗಳು ( Health Benefits of Hibiscus Flower)

  1. ಕೂದಲಿನ ಆರೋಗ್ಯ
  2. ರಕ್ತದೊತ್ತಡ ನಿಯಂತ್ರಣ
  3. ಸಕ್ಕರೆ ಮಟ್ಟ ನಿಯಂತ್ರಣ
  4. ಹೃದಯದ ಆರೋಗ್ಯ
  5. ರೋಗ ನಿರೋಧಕ ಶಕ್ತಿ

ಇದನ್ನೂ ಓದಿ: ಪಕ್ಕದಲ್ಲಿ ಫೋನ್ ಇಟ್ಟು ಮಲಗಿದರೆ ಕ್ಯಾನ್ಸರ್ ಅಪಾಯ ಹೆಚ್ಚಳ

1. ಕೂದಲಿನ ಆರೋಗ್ಯ

ದಾಸವಾಳದ ಎಲೆಗಳನ್ನು ಜಜ್ಜಿಕೊಂಡು ಅದನ್ನು ಕೂದಲು ತೊಳೆಯಲು ಬಳಕೆ ಮಾಡಿದರೆ ಕೂದಲಿನ ಬೆಳವಣಿಗೆಗೆ ಸಹಕಾರಿ ಮತ್ತು ಕೂದಲನ್ನು ಬಲಪಡಿಸುವುದಲ್ಲದೆ, ದಾಸವಾಳದ ಶಾಂಪೂವನ್ನು ಕೂದಲಿಗೆ ಬಳಸಿದರೆ ಅದು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು.

Vijayaprabha Mobile App free

2. ರಕ್ತದೊತ್ತಡ ನಿಯಂತ್ರಣ

ದಾಸವಾಳದಿಂದ ತಯಾರಿಸಿದಂತಹ ಪದಾರ್ಥಗಳ ಬಳಕೆಯಿಂದ 12 ದಿನಗಳಲ್ಲಿ ಸಿಸ್ಟೋಲಿಕ್ ರಕ್ತದೊತ್ತಡವು 11.2 ಶೇ.ದಷ್ಟು ಕಡಿಮೆ ಆಗಿದೆ ಮತ್ತು ಡಯಾಸ್ಟೋಲಿಕ್ ಒತ್ತಡವು ಶೇ.10.7ರಷ್ಟು ಕಡಿಮೆ ಆಗಿದೆ ಎ೦ದು ಅಧ್ಯಯನಗಳಿಂದ ತಿಳಿದುಬಂದಿದೆ. ಹಾಗಾಗಿ ಇದು ರಕ್ತದೊತ್ತಡ ನಿಯಂತ್ರಣದಲ್ಲಿ ಅತ್ಯಂತ ಸಹಕಾರಿಯಾಗಿದೆ.

3. ಸಕ್ಕರೆ ಮಟ್ಟ ನಿಯಂತ್ರಣ

ರಕ್ತದಲ್ಲಿನ ಸಕ್ಕರೆ ಮಟ್ಟವು ಅತಿಯಾದಾಗ ದ ನರ, ಕಣ್ಣುಗಳು ಮತ್ತು ಕಿಡ್ನಿ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೃದಯ ಸ೦ಬ೦ಧಿ ಕಾಯಿಲೆಗಳು ಬರಬಹುದು. ದಾಸವಾಳದ ಹೂವಿನ ರಸವನ್ನು ಬಳಕೆ ಮಾಡುವುದರಿಂದ ರಕ್ತದಲ್ಲಿನ ಗ್ಲುಕೋಸ್ ಮಟ್ಟವು ಕಡಿಮೆ ಆಗುತ್ತದೆ ಎ೦ದು ಅಧ್ಯಯನಗಳು ತಿಳಿಸಿವೆ.

ಇದನ್ನೂ ಓದಿ: Drinking water | ಈ ಹಣ್ಣುಗಳನ್ನು ತಿಂದ ಬಳಿಕ ನೀರು ಕುಡಿದರೆ ಆರೋಗ್ಯ ಹಾನಿ

4. ಹೃದಯದ ಆರೋಗ್ಯ

ಕೊಲೆಸ್ಟ್ರಾಲ್‌ ಮಟ್ಟವು ಅಧಿಕವಾದಾಗ ರಕ್ತನಾಳಗಳು ಬ್ಲಾಕ್ ಆಗುವುದು ಮತ್ತು ಹೃದಯದ ಕಾಯಿಲೆಗಳು ಹೆಚ್ಚಾಗಲು ಕಾರಣವಾಗುತ್ತದೆ. ಆದರೆ ಇದು ಒಳ್ಳೆಯ ಕೊಲೆಸ್ಟ್ರಾಲ್‌ ಮಟ್ಟವನ್ನು ಹೆಚ್ಚಿಸುವುದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯ ಕಾಪಾಡುತ್ತದೆ.

5. ರೋಗ ನಿರೋಧಕ ಶಕ್ತಿ

ವಿವಿಧ ರೀತಿಯ ಕಾಯಿಲೆಗಳ ವಿರುದ್ಧ ಹೋರಾಡಲು ಪ್ರತಿರೋಧಕ ಶಕ್ತಿ ಅತೀ ಅಗತ್ಯವಾಗಿದ್ದು, ದಾಸವಾಳದ ಹೂವಿನ ರಸವು ಸೋಂಕಿನ ವಿರುದ್ಧ ಹೋರಾಡುವ ಅಂಶಗಳನ್ನು ಹೆಚ್ಚಿಸುವುದು. ದಿನಕ್ಕೆ ಒ೦ದು ಕಪ್ ದಾಸವಾಳದ ಚಹಾ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಆರೋಗ್ಯ ಸುಧಾರಿಸುತ್ತದೆ.

ಇದನ್ನೂ ಓದಿ: Urinary Tract Infection | ಮಹಿಳೆಯರಲ್ಲಿ ಪದೇ ಪದೇ ಮೂತ್ರನಾಳ ಸೋಂಕು ಉಂಟಾಗಲು ಕಾರಣವೇನು? ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.