Green chilies : ಹಸಿಮೆಣಸಿನಕಾಯಿ ಇರುವ ಆಹಾರವನ್ನು ಸೇವಿಸಿ ಮೂರು ಗಂಟೆ ಬಳಿಕ ಚಯಾಪಚಯ ಕ್ರಿಯೆಯು ಶೇ.50 ರಷ್ಟು ವೇಗಗೊಳ್ಳುವುದಲ್ಲದೆ, ಇದು ಕ್ಯಾಲೋರಿ ಮುಕ್ತವಾಗಿದ್ದು, ಆರೋಗ್ಯವನ್ನು ಸಮತೋಲನದಲ್ಲಿಡುತ್ತದೆ. ಹಸಿಮೆಣಸಿನ ಕಾಯಿಯ ಅದ್ಭುತ ಪ್ರಯೋಜನಗಳು ಇಲ್ಲಿವೆ
ಇದನ್ನೂ ಓದಿ: walnuts Health Benefits | ಪೌಷ್ಟಿಕಾಂಶಗಳ ಆಗರವಾಗಿರುವ ವಾಲ್‌ನಟ್ಸ್ ಅರೋಗ್ಯ ಪ್ರಯೋಜನಗಳು
Green chilies : ಹಸಿಮೆಣಸಿನ ಕಾಯಿಯ ಅದ್ಭುತ ಪ್ರಯೋಜನಗಳು
- ಕ್ಯಾನ್ಸರ್ ನಿಂದ ರಕ್ಷಣೆ
- ರಕ್ತನಾಳಗಳ ರಕ್ಷಣೆ
- ಮಿದುಳು ಚುರುಕು
- ಸೋಂಕು ನಿವಾರಣೆ
- ಚರ್ಮದ ಆರೋಗ್ಯ
1. ಕ್ಯಾನ್ಸರ್ ನಿಂದ ರಕ್ಷಣೆ
ಹಸಿ ಮೆಣಸಿನಕಾಯಿಯಲ್ಲಿ ಆಂಟಿಆಕ್ಸಿಡೆಂಟ್‌ಗಳಿದ್ದು, ನೈಸರ್ಗಿಕ ಸ್ಕ್ಯಾವೆಂಜಗ್ಗಳಾಗಿ ಕಾರ್ಯನಿರ್ವಹಿಸುವ ಮೂಲಕ ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುವುದಲ್ಲದೆ, ಪ್ರಾಸ್ಟೇಟ್ ಸಮಸ್ಯೆಗಳಿಂದಲೂ ರಕ್ಷಣೆ ನೀಡುತ್ತದೆ
2.ರಕ್ತನಾಳಗಳ ರಕ್ಷಣೆ
ರಕ್ತದಲ್ಲಿ ಇರುವ ಕೊಲೆಸ್ಟ್ರಾಲ್ & ಟ್ರೈಗ್ಲಿಸರೈಡ್ ಮಟ್ಟವನ್ನು ಸಮತೋಲನದಲ್ಲಿಡುವುದು. ರಕ್ತದಲ್ಲಿ ಪ್ಲೇಟ್‌ಲೆಟ್‌ಗಳನ್ನು ಒಟ್ಟುಗೂಡಿಸಿ ಅಪಧಮನಿಯ ಆರೋಗ್ಯವನ್ನು ಉತ್ತಮಗೊಳಿಸುವುದು.
ಇದನ್ನೂ ಓದಿ: Mosquito bites | ಸೊಳ್ಳೆ ಕಡಿತದಿಂದ ಪಾರಾಗಲು ಇಲ್ಲಿದೆ ಮನೆಮದ್ದು
3. ಮಿದುಳು ಚುರುಕು
ಹಸಿ ಮೆಣಸಿನ ಕಾಯಿ ಖಾರದ ರುಚಿಯನ್ನು ಹೊಂದಿದ್ದರೂ ಮೆದುಳಿನಲ್ಲಿ ಇರುವ ಹೈಪೋಥಾಲಮಸ್‌ನ ಕೇಂದ್ರವನ್ನು ತಂಪಾಗಿರಿಸಲು ಉತ್ತೇಜಿಸುವುದಲ್ಲದೆ, ಮಿದುಳು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ಮಿದುಳನ್ನು ಚುರುಕಾಗಿಡಲು ಹಾಗೂ ಉತ್ತಮ ಆರೋಗ್ಯಕ್ಕೆ ಪ್ರೇರೇಪಿಸುವುದು.
4. ಸೋಂಕು ನಿವಾರಣೆ
ಹಸಿ ಮೆಣಸಿನ ಕಾಯಿಯಲ್ಲಿ ಇರುವ ಕ್ಯಾಪೈಸಿನ್ ಮೂಗು ಮತ್ತು ಸೈನಸ್ ಲೋಳೆಗಳ ಮೇಲೆ ಉತ್ತೇಜಕ ಪರಿಣಾಮ ಬೀರುವುದು. ಲೋಳೆಯ ಸ್ರವಿಕೆಯು ತೆಳುವಾಗುವುದು. ನೆಗಡಿ ಮತ್ತು ಸೈನಸ್ ಚಗಳನ್ನು ಎದುರಿಸಲು ಉತ್ತೇಜಿಸುವುದು.
5. ಚರ್ಮದ ಆರೋಗ್ಯ
ಹಸಿಮೆಣಸಿನ ಕಾಯಿ ಸಮೃದ್ಧವಾದ ವಿಟಮಿನ್ ಸಿ ಅನ್ನು ಒಳಗೊಂಡಿದೆ. ಇದು ಆರೋಗ್ಯಕರವಾದ ದೃಷ್ಟಿ, ಚರ್ಮದ ಆರೋಗ್ಯ & ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಮೆಣಸಿನ ಕಾಯಿಯನ್ನು ಆದಷ್ಟು ತಂಪಾದ ಸ್ಥಳದಲ್ಲಿ ಇಡಬೇಕು.
ಇದನ್ನೂ ಓದಿ: kamakasthuri seeds | ಕಾಮಕಸ್ತೂರಿ ಬೀಜಗಳ ಆರೋಗ್ಯ ಪ್ರಯೋಜನಗಳು