Chief Minister of Karnataka: ಮುಡಾ ಹಗರಣಕ್ಕೆ(Muda Scam) ಸಂಬಂಧಿಸಿದಂತೆ ರಾಜ್ಯದಲ್ಲಿ ಮುಖ್ಯಮಂತ್ರಿ (Chief Minister) ಬದಲಾವಣೆಯ ಕೂಗು ಜೋರಾಗಿರುವ ನಡುವೆ ಕೆಲವು ಕಾಂಗ್ರೆಸ್ ಹಿರಿಯ ನಾಯಕರು ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಹೌದು, ಸಿಎಂ ರೇಸ್ನಲ್ಲಿ ಒಬ್ಬರಾದ ಮೇಲೆ ಒಬ್ಬರಿದ್ದಾರೆ. ಆರ್.ವಿ.ದೇಶಪಾಂಡೆ (RV Deshpande) ಆಯಿತು, ಡಿ.ಕೆ.ಶಿವಕುಮಾರ್ (DK Shivakumar), ಪರಮೇಶ್ವರ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ (Satish Jarakiholi) ಸಿಎಂ ರೇಸ್‌ನಲ್ಲಿದ್ದಾರೆ. ಆದರೆ ಮುದ್ದಿನ 4 ವರ್ಷ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಸಿದ್ದರಾಮಯ್ಯ (Siddaramaiah) ವಿಶ್ವಾಸದಲ್ಲಿದ್ದಾರೆ.
ಸಿಎಂ ಆಗಲು ಸಾಹುಕಾರ್ಗಿದೆ ಸುವರ್ಣಾವಕಾಶ: ಏನು ಗೊತ್ತೇ?
ಮುಡಾ ಪ್ರಕರಣ ಹಿನ್ನೆಲೆ, ಮುಂದಿನ CM ನಾನೇ ನಾನೇ ಅಂತ ಕಾಂಗ್ರೆಸ್ನಲ್ಲಿ ಕೂಗಾಟ ಶುರುವಾಗಿದೆ. ಬೆಳಗಾವಿಗೇ Next CM ಪೋಸ್ಟ್ ಅನ್ನೋ ಅದೊಂದು ಜಾಹೀರಾತು ಅಚ್ಚಾಗಿದೆ. ಈಗ ಸದ್ಯ ಸತೀಶ್ ಸಿಎಂ ಆಗುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಅನ್ನೋ ಜಾಹೀರಾತು ಸಾಕಷ್ಟು ಚರ್ಚೆಗೆ ಗ್ರಾಸವಾಗಿರೋದಷ್ಟೇ ಅಲ್ಲ. ಹಲವರ ತಲೆಗೆ ಹುಳ ಕೂಡ ಬಿಟ್ಟಿದೆ. ಅಷ್ಟಕ್ಕೂ, ಸಿದ್ದರಾಮಯ್ಯನವರಿಗೇ ನಮ್ಮ ಬೆಂಬಲ ಅಂತಿದ್ದ ನಾಯಕರು, ಈಗ ತಮ್ಮ ಹಂಬಲ ವ್ಯಕ್ತಪಡಿಸ್ತಿದ್ದಾರೆ.
ಮುಂದಿನ ಸಿಎಂ ಸತೀಶ ಜಾರಕಿಹೊಳಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್
ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಆಗಲಿ ಎಂದು ಸತೀಶ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸತೀಶ ಅವರು ಇತ್ತೀಚೆಗೆ ದೆಹಲಿಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಅದಕ್ಕೂ ಮೊದಲು ಗೃಹ ಸಚಿವ ಜಿ. ಪರಮೇಶ್ವರ ಜೊತೆ ಗೌಪ್ಯವಾಗಿ ಚರ್ಚೆ ನಡೆಸಿದ್ದರು.
https://vijayaprabha.com/job-news-70/