ವಿಪರೀತ ಕೆಲಸ ಮಾಡಿದ್ರೆ ಸತ್ತೇ ಹೋಗ್ತಾರಾ..? ಹೆಚ್ಚು ಕೆಲಸ ಮಾಡಿದ್ರೆ ಪಾರ್ಶ್ವವಾಯು ಪೀಡಿತರಾಗುತ್ತಾರಾ..? ಇಲ್ಲಿದೆ ವರದಿ

ಕೊರೋನಾ ಕಾರಣದಿಂದ ಎಲ್ಲೆಡೆ ಲಾಕ್ ಡೌನ್ ಘೋಷಣೆ ಮಾಡಿದ್ದು, ಈಗ ಮನೆಯಲ್ಲೇ ಕುಳಿತು ಮಾಡುವ ಕೆಲಸವು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಅನೇಕರು ಮನೆಯಿಂದ ಹೆಚ್ಚಿನ ಸಮಯವನ್ನು ಕೆಲಸದಲ್ಲಿ ಕಳೆಯುತ್ತಿರುತ್ತಾರೆ. ಆದರೆ ಈ ಕುರಿತು WHO…

ಕೊರೋನಾ ಕಾರಣದಿಂದ ಎಲ್ಲೆಡೆ ಲಾಕ್ ಡೌನ್ ಘೋಷಣೆ ಮಾಡಿದ್ದು, ಈಗ ಮನೆಯಲ್ಲೇ ಕುಳಿತು ಮಾಡುವ ಕೆಲಸವು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಅನೇಕರು ಮನೆಯಿಂದ ಹೆಚ್ಚಿನ ಸಮಯವನ್ನು ಕೆಲಸದಲ್ಲಿ ಕಳೆಯುತ್ತಿರುತ್ತಾರೆ.

ಆದರೆ ಈ ಕುರಿತು WHO ನಡೆಸಿದ ಅಧ್ಯಯನದ ಪ್ರಕಾರ, ಅತಿಯಾದ ಕೆಲಸದ ಒತ್ತಡ ಮತ್ತು ದೀರ್ಘ ಕೆಲಸದ ಸಮಯದಿಂದಾಗಿ 194 ದೇಶಗಳಲ್ಲಿ ಸಾವಿನ ಪ್ರಮಾಣ ಶೇ.29ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.

ಹೌದು, ವರದಿಗಳು ಸೂಚಿಸಿದಂತೆ, ವಾರಕ್ಕೆ 40 ಗಂಟೆಗಳು ಸೂಕ್ತವಾದ ಕೆಲಸದ ಸಮಯ ಎಂದು ತಿಳಿಸಿದೆ. ವಾರದಲ್ಲಿ 55 ಗಂಟೆ ಮತ್ತು ಅದಕ್ಕಿಂತ ಹೆಚ್ಚಿನ ಸಮಯ ಕೆಲಸ ಮಾಡುವುದರಿಂದ ಪಾರ್ಶ್ವವಾಯು ಬರುವ ಸಾಧ್ಯತೆ ಶೇಕಡಾ 35% ರಷ್ಟು ಹೆಚ್ಚಾಗುತ್ತದೆ ಎಂದು ಅದ್ಯಯನಗಳು ಸೂಚಿಸಿದ್ದು, ಕೆಲಸ ಮಾಡುವುದರಿಂದ ಮಾನಸಿಕ, ಹೃದಯ ಸಂಬಂಧಿ ಸಮಸ್ಯೆಗಳು ಕಂಡುಬರುತ್ತದೆ ಎಂದು ತಿಳಿಸಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.