ಮದುವೆ ಮಂಟಪದಲ್ಲೇ ವಧುವಿನ ಕಾಲಿಗೆ ಬಿದ್ದ ವರ: ಕಾರಣ ಏನು ಗೊತ್ತೇ? ಇಲ್ಲಿದೆ ನೋಡಿ

ಲಖನೌ : ಉತ್ತರ ಪ್ರದೇಶದ ಲಖನೌ ನಲ್ಲಿ ನಡೆದ ಮದುವೆಯಲ್ಲಿ ವರನೇ ವಧುವಿನ ಕಾಲಿಗೆ ಬಿದ್ದಿರುವುದನ್ನು ಕಂಡು ಮದುವೆಗೆ ಬಂದಿದ್ದ ಜನರು ಆಶ್ಚರ್ಯಗೊಂಡಿದ್ದಾರೆ. ಆದರೆ, ನಂತರ ವಧುವಿನ ಕಾಲಿಗೆ ಬಿದ್ದಿರುವುದಕ್ಕೆ ವರ ಕಾರಣವನ್ನು ಕೊಟ್ಟಿದ್ದನ್ನು…

ಲಖನೌ : ಉತ್ತರ ಪ್ರದೇಶದ ಲಖನೌ ನಲ್ಲಿ ನಡೆದ ಮದುವೆಯಲ್ಲಿ ವರನೇ ವಧುವಿನ ಕಾಲಿಗೆ ಬಿದ್ದಿರುವುದನ್ನು ಕಂಡು ಮದುವೆಗೆ ಬಂದಿದ್ದ ಜನರು ಆಶ್ಚರ್ಯಗೊಂಡಿದ್ದಾರೆ. ಆದರೆ, ನಂತರ ವಧುವಿನ ಕಾಲಿಗೆ ಬಿದ್ದಿರುವುದಕ್ಕೆ ವರ ಕಾರಣವನ್ನು ಕೊಟ್ಟಿದ್ದನ್ನು ಕೇಳಿ, ಮದುವೆಗೆ ಬಂದಿದ್ದ ಜನರು ಎಲ್ಲರೂ ಚಪ್ಪಾಳೆ ತಟ್ಟಿರುವುದು ಮಾತ್ರವಲ್ಲದೆ ಸಾಕಷ್ಟು ಮೆಚ್ಚುಗೆ ಮಾತು ವ್ಯಕ್ತವಾಗಿದೆ.

ಅಷ್ಟಕ್ಕೂ, ತಾನು ತನ್ನ ಪತ್ನಿಯ ಕಾಲಿಗೆ ಬೀಳಲು ಕಾರಣವೇನು ಎಂಬುದಕ್ಕೆ ವರ ಕೊಟ್ಟ ಕಾರಣ ಹೀಗಿದೆ.,

ಇದು ನನ್ನ ಮನೆಯ ಸಂಪ್ರದಾಯವಾಗಿದ್ದು, ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದನ್ನು ನಾನು ಮುಂದುವರೆಸುತ್ತಿದ್ದೇನೆ ಅಷ್ಟೇ ಎಂದು ಹೇಳಿದ್ದು, ಗೃಹಲಕ್ಷ್ಮಿಯಾಗಿರುವ ಪತ್ನಿಯ ಕಾಲಿಗೆ ಬಿದ್ದರೆ ಅಚ್ಚರಿ ಪಡಬೇಕಿಲ್ಲ. ಏಕೆಂದರೆ

Vijayaprabha Mobile App free

* ಈಕೆ ನಮ್ಮ ಮನೆಯ ವಂಶಾವಳಿಯನ್ನು ಮುಂದುವರೆಸುವ ದೇವತೆಯಾಗಿದ್ದು, ಹೆಣ್ಣು ಪ್ರತಿಯೊಂದು ಮನೆಯ ಭಾಗ್ಯಲಕ್ಷ್ಮಿ, ಅವಳು ನನಗೆ ತಂದೆಯಾಗುವ ಭಾಗ್ಯ ಕಲ್ಪಿಸುತ್ತಾಳೆ.

* ವೃದ್ಧರಾಗಿರುವ ನನ್ನ ತಂದೆ-ತಾಯಂದಿರನ್ನು ಕೊನೆಯವರೆಗೂ ಪೋಷಣೆ ಮಾಡುತ್ತಾಳಲ್ಲದೆ, ತಾನು ಹುಟ್ಟಿದ ಮನೆಯನ್ನು ಬಿಟ್ಟುಬಂದು ಆಕೆಯ ಹೆತ್ತವರನ್ನು ತೊರೆದು ನಮ್ಮ ಮನೆ ಬೆಳಗಲು ಬರುವ ಭಾಗ್ಯದೇವತೆಯಾಗಿದ್ದಾಳೆ.

* ಪ್ರೀತಿಪಾತ್ರರೊಂದಿಗಿನ ಸಂಬಂಧವನ್ನು ಕಡಿದುಕೊಂಡು ಹೊಸ ಸಂಬಂಧ ಬೆಸೆಯುವುದಲ್ಲದೆ, ಹೆರಿಗೆಯ ಸಮಯದಲ್ಲಿ ನನ್ನ ಮಗುವಿಗಾಗಿ ಎಲ್ಲಾ ನೋವನ್ನು ನುಂಗಿ ಸಾವನ್ನು ಜಯಿಸಿ ಜನ್ಮ ನೀಡುತ್ತಾಳೆ. ಅದಕ್ಕೇ ತಾನೇ ಹೆರಿಗೆ ಎನ್ನುವುದು ಮಹಿಳೆಗೆ ಪುನರ್ಜನ್ಮ ಎನ್ನುವುದು?

* ಸೊಸೆ ಗಂಡನ ಮನೆಯ ಬೇರಾಗಿದ್ದು, ಈಕೆಯ ನಡವಳಿಕೆಯ ಆಧಾರದ ಮೇಲೆಯೇ ಸಮಾಜ ನನ್ನನ್ನು ಗುರುತು ಹಿಡಿಯುತ್ತದೆ.
ಅವಳು ಇಷ್ಟೆಲ್ಲಾ ಮಾಡುವ ದೇವತೆಯಾಗಿರುವಾಗ ಸ್ವಲ್ಪ ಗೌರವ ಕೊಟ್ಟರೆ ತಪ್ಪೇನಿದೆ, ಹೆಣ್ಣಾದವಳೇ ಏಕೆ ಯಾವಾಗಲು ತಗ್ಗಿಬಗ್ಗಿ ನಡೆಯಬೇಕು ಎಂಬ ಸಂಪ್ರದಾಯವೇಕೆ? ಆಕೆ ನನಗಾಗಿ ಇಷ್ಟೆಲ್ಲಾ ಮಾಡುತ್ತಿರುವಾಗ ಈ ಗೌರವ ಅತ್ಯಲ್ಪ ಎಂದು ವರ ಹೇಳಿದ್ದಾನೆ.

ಇದನ್ನು ಕೇಳಿದ ಮದುವೆಗೆ ಬಂದ ಜನರು ಆನಂದಬಾಷ್ಪ ಹರಿಸಿ ಎಲ್ಲರಿಗೂ ನಿನ್ನಂಥ ಪತಿಯೇ ಸಿಗಲಪ್ಪ ಎಂದು ಬಾಯ್ತುಂಬ ಹರಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.