Sugar consumption | ಸಕ್ಕರೆ ಸೇವನೆಯಿಂದ ದೇಹದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಗೊತ್ತಾ? ಇಲ್ಲಿದೆ ನೋಡಿ

Sugar consumption : ಹೆಚ್ಚು ಸಕ್ಕರೆ ಸೇವನೆಯು ಬೊಜ್ಜು, ಮಧುಮೇಹದ ಅಪಾಯ, ಫ್ಯಾಟಿ ಲಿವ‌ರ್ ಸಮಸ್ಯೆ , ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೌದು, ಹೆಚ್ಚು ಸಕ್ಕರೆ ತಿನ್ನುವುದು ಮೊಡವೆ, ತೂಕ ಹೆಚ್ಚಾಗುವುದು…

Effects of sugar consumption on body

Sugar consumption : ಹೆಚ್ಚು ಸಕ್ಕರೆ ಸೇವನೆಯು ಬೊಜ್ಜು, ಮಧುಮೇಹದ ಅಪಾಯ, ಫ್ಯಾಟಿ ಲಿವ‌ರ್ ಸಮಸ್ಯೆ , ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಹೌದು, ಹೆಚ್ಚು ಸಕ್ಕರೆ ತಿನ್ನುವುದು ಮೊಡವೆ, ತೂಕ ಹೆಚ್ಚಾಗುವುದು ಮತ್ತು ದಣಿವಿಗೆ ಕಾರಣವಾಗಬಹುದು. ದೀರ್ಘಾವಧಿಯಲ್ಲಿ, ಹೆಚ್ಚು ಸಕ್ಕರೆಯು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ, ಉದಾಹರಣೆಗೆ ಟೈಪ್ 2 ಮಧುಮೇಹ ಮತ್ತು ಹೃದ್ರೋಗ.

Effects of sugar consumption on body
Effects of sugar consumption on body

ಸಕ್ಕರೆ ಸೇವನೆಯಿಂದ ದೇಹದ ಮೇಲೆ ಆಗುವ ಪರಿಣಾಮಗಳು (Effects of sugar consumption)

  1. ಸಕ್ಕರೆ ಸೇವನೆ ಮಾಡುವುದರಿ೦ದ ಬೊಜ್ಜು ಬರುತ್ತದೆ
  2. ಸಕ್ಕರೆ ಸೇವನೆಯಿಂದ ಮಧುಮೇಹದ ಅಪಾಯ
  3. ಸಕ್ಕರೆ ಸೇವನೆಯಿಂದ ಆಲಸ್ಯ ಹೆಚ್ಚಳ
  4. ಸಕ್ಕರೆ ಸೇವನೆಯಿಂದ ವಯಸ್ಸಾದಂತೆ ಕಾಣುವುದು
  5. ಸಕ್ಕರೆ ಸೇವನೆಯಿಂದ ರೋಗ ನಿರೋಧಕ ಶಕ್ತಿ ಕುಂದುತ್ತದೆ
  6. ಸಕ್ಕರೆ ಸೇವನೆಯಿಂದ ಫ್ಯಾಟಿ ಲಿವ‌ರ್ ಸಮಸ್ಯೆ
  7. ಸಕ್ಕರೆ ಸೇವನೆಯಿಂದ ಹೃದಯಾಘಾತದ ಅಪಾಯ ಹೆಚ್ಚು

ಇದನ್ನೂ ಓದಿ: Sapota Fruit | ದಿನಕ್ಕೊಂದು ಸಪೋಟಾ ತಪ್ಪದೆ ತಿನ್ನಬೇಕು. ಯಾಕೆ ಗೊತ್ತಾ?

Vijayaprabha Mobile App free

1. ಸಕ್ಕರೆ ಸೇವನೆ ಮಾಡುವುದರಿ೦ದ ಬೊಜ್ಜು ಬರುತ್ತದೆ (Sugar consumption causes obesity)

ಸಕ್ಕರೆ ಸೇವನೆ ಮಾಡುವುದರಿ೦ದ ಜೀವಕೋಶಗಳಲ್ಲಿ ಕೊಬ್ಬನ್ನು ಸಂಗ್ರಹಿಸುವ ಲಿಪೊಪ್ರೋಟೀನ್ ಲಿಪೇಸ್‌ ಉತ್ಪಾದನೆ ಹೆಚ್ಚಾಗಿ, ಬೊಜ್ಜು ಬರುತ್ತದೆ. ಹೃದಯದ ಆರೋಗ್ಯದಿಂದ ಹಿಡಿದು ದೇಹದ ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ಈ ಸ್ಕೂಲಕಾಯತೆ ಕಾರಣವಾಗಿದೆ.

2. ಸಕ್ಕರೆ ಸೇವನೆಯಿಂದ ಮಧುಮೇಹದ ಅಪಾಯ (Increases the risk of diabetes)

ಸಕ್ಕರೆ ಅಂಶದಿಂದ ದೇಹದಲ್ಲಿ & ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ. ಅತಿ ಹೆಚ್ಚು ಸಕ್ಕರೆ ಪದಾರ್ಥಗಳನ್ನು ತಿಂದರೆ, ಸರಿಯಾದ ಪ್ರಮಾಣದ ಗೂಕೋಸ್ ಮೆದುಳಿಗೆ ತಲುಪದೇ, ಸರಿಯಾಗಿ ಕೆಲಸ ಮಾಡುವುದಿಲ್ಲ. ಇದು ಮೆಮೊರಿ ನಷ್ಟಕ್ಕೆ ಕಾರಣವಾಗಬಹುದು.

3. ಸಕ್ಕರೆ ಸೇವನೆಯಿಂದ ಆಲಸ್ಯ ಹೆಚ್ಚಳ (Increases lethargy)

ಸಿಹಿ ಪದಾರ್ಥಗಳನ್ನು ತಿಂದಾಗ ಕೆಲ ಕ್ಷಣದವರೆಗೆ ನಮ್ಮ ದೇಹ ಉಲ್ಲಾಸಮಯವಾಗಿರುತ್ತದೆ. ಬಳಿಕ ದೇಹದಲ್ಲಿ ಆಲಸ್ಯ ಶುರುವಾಗುತ್ತದೆ. ಇದರಿಂದಾಗಿ ದೇಹದಲ್ಲಿ ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: Kidney Beans | ಕಿಡ್ನಿ ಬೀನ್ಸ್ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು

4. ಸಕ್ಕರೆ ಸೇವನೆಯಿಂದ ವಯಸ್ಸಾದಂತೆ ಕಾಣುವುದು (Sugar consumption makes you look older)

ಹೆಚ್ಚು ಸಕ್ಕರೆ ತಿನ್ನುವುದರಿಂದ, ಅವಧಿಗೆ ಮುನ್ನವೇ ಚರ್ಮವು ವಯಸ್ಸಾದಂತೆ ಕಾಣುತ್ತದೆ. ಅಲ್ಲದೇ ದೇಹದಲ್ಲಿ ಇನ್ನೂಮೆಟರಿ ಪರಿಣಾಮ ಉಂಟಾಗಿ, ಚರ್ಮದ ದದ್ದು, ಸುಕ್ಕುಗಳ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

5. ಸಕ್ಕರೆ ಸೇವನೆಯಿಂದ ರೋಗ ನಿರೋಧಕ ಶಕ್ತಿ ಕುಂದುತ್ತದೆ (Sugar consumption weakens the immune system)

ಸಿಹಿತಿನಿಸುಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ಸೇರಿದಾಗ ರೋಗನಿರೋಧಕ ಶಕ್ತಿ ಕುಂದಿ ದೇಹ ದುರ್ಬಲಗೊಳ್ಳಲು ಆರಂಭವಾಗುತ್ತದೆ.

6. ಸಕ್ಕರೆ ಸೇವನೆಯಿಂದ ಫ್ಯಾಟಿ ಲಿವ‌ರ್ ಸಮಸ್ಯೆ (Sugar consumption causes fatty liver)

ಹೆಚ್ಚು ಸಕ್ಕರೆ ತಿನ್ನುವುದರಿಂದ, ನಮ್ಮ ಯಕೃತ್ತು ಅಥವಾ ಪಿತ್ತಜನಕಾಂಗ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದರಿಂದ ದೇಹದಲ್ಲಿ ಲಿಪಿಡ್ ಗಳ ರಚನೆಯು ಹೆಚ್ಚಾಗಿ, ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ ಬರುವ ಅಪಾಯ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: Bananas | ಬಾಳೆಹಣ್ಣು ಸೇವನೆಯಿಂದಾಗುವ ಅದ್ಭುತ ಪ್ರಯೋಜನಗಳು

7. ಸಕ್ಕರೆ ಸೇವನೆಯಿಂದ ಹೃದಯಾಘಾತದ ಅಪಾಯ ಹೆಚ್ಚು (Increases the risk of heart attack)

ಅತಿ ಹೆಚ್ಚು ಸಿಹಿ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದ ಸಕ್ಕರೆಯಂಶ ಸೇರಿಕೊಂಡು ಹೃದಯದ ಆರೋಗ್ಯ ಕ್ಷೀಣಿಸುತ್ತದೆ. ಸಿಹಿ ತಿನಿಸುಗಳಿಂದ ರಕ್ತದೊತ್ತಡ & ಕೊಲೆಸ್ಟ್ರಾಲ್ ಹೆಚ್ಚಾಗಿ ಹೃದಯಾಘಾತ ಸಂಭವಿಸುತ್ತದೆ.

English Summary : High sugar consumption increases the risk of obesity, diabetes risk, fatty liver disease, and chronic diseases like heart disease. Let’s learn about the effects of sugar consumption on the body

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply