ಅನೇಕ ರೋಗಗಳಿಗೆ ಮನೆಮದ್ದಾದ ಕಾಳು ಮೆಣಸಿನ ಬಗ್ಗೆ ಗೊತ್ತೇ? ಇಲ್ಲಿದೆ ಮಾಹಿತಿ

ಕಾಳು ಮೆಣಸಿನ ಉಪಯೋಗಗಳು:- 1) ಒಂದು ಚಮಚ ಕಾದ ತುಪ್ಪಕ್ಕೆ ಕಾಳು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಕುದಿಸಿ. ಇದರಲ್ಲಿ ಅನ್ನ ಕಲಸಿಕೊಂಡು ತಿಂದರೆ ಅಜೀರ್ಣದಿಂದ ಹೊಟ್ಟೆ ಉಬ್ಬರವಾಗಿದ್ದರೆ ಕಡಿಮೆಯಾಗುವುದು. 2) ಮೊಸರು…

ಕಾಳು ಮೆಣಸಿನ ಉಪಯೋಗಗಳು:-

1) ಒಂದು ಚಮಚ ಕಾದ ತುಪ್ಪಕ್ಕೆ ಕಾಳು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಕುದಿಸಿ. ಇದರಲ್ಲಿ ಅನ್ನ ಕಲಸಿಕೊಂಡು ತಿಂದರೆ ಅಜೀರ್ಣದಿಂದ ಹೊಟ್ಟೆ ಉಬ್ಬರವಾಗಿದ್ದರೆ ಕಡಿಮೆಯಾಗುವುದು.

2) ಮೊಸರು ಅನ್ನಕ್ಕೆ ಬೆಲ್ಲ ಮತ್ತು ಕಾಳು ಮೆಣಸಿನ ಪುಡಿಯನ್ನು ಹಾಕಿಕೊಂಡು ಊಟ ಮಾಡಿದರೆ ಮೂತ್ರದ್ವಾರ ಮತ್ತು ಗುದದ್ವಾರದಲ್ಲಾಗುವ ಉರಿ ಕಡಿಮೆಯಾಗುವುದು.

Vijayaprabha Mobile App free

3) ಒಂದು ಬಟ್ಟಲು ಹಾಲಿಗೆ ಒಂದು ಚಿಟಿಕೆ ಅರಿಶಿನ ಪುಡಿ ಮತ್ತು ಎರಡು ಚಿಟಿಕೆ ಕಾಳು ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ರಾತ್ರಿ ಊಟ ಮಾಡಿದ ಮೇಲೆ ಕುಡಿದರೆ ನೆಗಡಿ ಮತ್ತು ಕೆಮ್ಮು ಗುಣವಾಗುವುದು.

4) ನುಗ್ಗೆ ಸೊಪ್ಪಿನ ರಸಕ್ಕೆ ಒಂದೆರಡು ಕಾಳುಮೆಣಸನ್ನು ಅರೆದು ಅದನ್ನು ಚೆನ್ನಾಗಿ ಹಣೆ ಮತ್ತು ಕಪೋಲಗಳಿಗೆ ಹಚ್ಚಿಕೊಂಡರೆ ತಲೆನೋವು ಗುಣವಾಗುವುದು.

5) ಚೆನ್ನಾಗಿ ಮಾಗಿದ ರಸಬಾಳೆ ಹಣ್ಣಿನೊಂದಿಗೆ ಅರ್ಧ ಟೀ ಚಮಚ ಕಾಳು ಮೆಣಸಿನ ಪುಡಿ ಸೇರಿಸಿ ಮೂರು ಬಾರಿ ಸೇವಿಸಿದರೆ ನೆಗಡಿ ಮತ್ತು ಕೆಮ್ಮು ನಿವಾರಣೆಯಾಗುವುದು.

6) ಹಳೇ ಹುಣಸೆ ಹಣ್ಣು, ಪುದೀನ, ಮೆಣಸು, ಹುರಿದು ಏಲಕ್ಕಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣಗೆ ಅರೆದು ಉಪ್ಪು ಹಾಕಿ ತಿಂದರೆ ಹೊಟ್ಟೆ ನೋವು ಕಡಿಮೆಯಾಗುವುದು.

7) ಮೆಣಸನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚಿಕೊಂಡರೆ ಕೆಟ್ಟ ನೀರು ಹೋಗಿ ಹಲ್ಲು ನೋವು ಕಡಿಮೆಯಾಗುವುದು.

8) ಒಂದು ವಿಳೆದೆಲೆ ನಾಲ್ಕು ಕಾಳುಮೆಣಸು ಮತ್ತು ಎರಡು ಹರಳು ಉಪ್ಪು ಹಾಕಿಕೊಂಡು ಚೆನ್ನಾಗಿ ಅಗಿದು ತಿಂದರೆ ಕಫ ಹೋಗುವುದು.

9) ಮೆಣಸನ್ನು ನೀರಿನಲ್ಲಿ ತೇದು ಮೊಡವೆ ಗಳಿಗೆ ಹಚ್ಚಿದರೆ ಮೊಡವೆ ನಿವಾರಣೆಯಾಗುವುದು.

10) ಮೆಣಸನ್ನು ಹುರಿದು ನುಣ್ಣಗೆ ಪುಡಿ ಮಾಡಿ ಕಾಲು ಚಮಚದಷ್ಟು ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ ದಿನಕ್ಕೆ 2-3 ಬಾರಿ ಸೇವಿಸಿದರೆ ನೆಗಡಿ, ಕೆಮ್ಮು ಮತ್ತು ಗೂರಲು ರೋಗಗಳು ಕಡಿಮೆಯಾಗುವುದು.

ಇದನ್ನು ಓದಿ: ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ರಾಮಬಾಣವಾದ ಶುಂಠಿಯ ಅದ್ಭುತ ಪ್ರಯೋಜನಗಳು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.