6 ರಿಂದ 20 ಅಡಿ ಗಿಡಗಳವರೆಗೆ ಬೆಳೆಯುವ ಪುಟ್ಟ ಮರವಾದ ಈ ಲಕ್ಕಿ – ಗಿಡವು ಸಾಮಾನ್ಯವಾಗಿ ಎಲ್ಲ ಪ್ರದೇಶಗಳಲ್ಲಿ ಬೆಳೆಯುತ್ತದೆ. ಉದ್ಯಾನವನಗಳಲ್ಲಿ, ನದಿಯ ದಂಡೆಗಳಲ್ಲಿ, ಹಳ್ಳಿಯ ಸುತ್ತ ಮುತ್ತಲಲ್ಲಿ ಹೇರಳವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ಬೀಜದಿಂದ ಈ ಗಿಡವನ್ನು ಬೆಳೆಸಬಹುದು. ಕಾಂಪೌಂಡ್‌ಗಳಲ್ಲಿ ಬೆಳೆಸಲು ಉತ್ತಮವಾದ ಬೇಲಿ ಮತ್ತು ಅರೆ ನೆರಳಿನ ಗಿಡವಾಗಿದೆ.
ಈ ಗಿಡದಲ್ಲಿ 3 ಎಲೆಯ ಮತ್ತು 5 ಎಲೆಯ ಭೇದಗಳು ಕಂಡು ಬರುತ್ತವೆ. ಎಲೆಯ ಮೇಲೆ ಬಿಳುಪಾದ ಕೂದಲುಗಳಿಂದ ಕೂಡಿದ ಪದರವಿರುತ್ತದೆ. ಹೂಗಳು ಬಿಳಿಯ ಮತ್ತು ನೀಲಿ ಬಣ್ಣದಿಂದಿದ್ದು, ನೀಲಿಯದ್ದು ಔಷಧ ಗುಣಗಳಿಂದ ಕೂಡಿರುತ್ತದೆ. ಎಲೆಗಳು ಮತ್ತು ಬೀಜಗಳು
ಶೋಧ ಅಥವಾ ಊತವನ್ನು ನಾಶಮಾಡುವ ಗುಣ ಹೊಂದಿರುತ್ತವೆ. ಅಲ್ಲದೆ, ಜ್ವರ ನಾಶಕ, ಮೂತ್ರ ವರ್ಧಕ ಕ್ರಿಮಿನಾಶಕ ಗುಣವನ್ನು ಹೊಂದಿರುತ್ತದೆ. ಅಂತೆಯೇ ಸಂಧಿರೋಗಗಳಲ್ಲಿ ಉಪಯುಕ್ತ.
ಲಕ್ಕಿ ಗಿಡ (ಎಕ್ಕೆ ಗಿಡ) ಉಪಯೋಗಗಳು
1. ಹಸಿ ಎಲೆಯನ್ನು ಕಿತ್ತು ತಂದು, ನೀರಿನಲ್ಲಿ ಚೆನ್ನಾಗಿ ತೊಳೆದು ಅರೆದು ಹಿಂಡಿ ಬರುವ ರಸವನ್ನು 1 ರಿಂದ 4 ಚಮಚೆಯಷ್ಟು ಬರಿ ಹೊಟ್ಟೆಯಲ್ಲಿ ಸೇವಿಸಲು ಗ್ರಂಥಿ, ಊತಗಳು, ಗಂಟಲಿನ ಊತವು ಕಡಿಮೆಯಾಗುತ್ತದೆ.
2. ಸುಮಾರು 60 ಗ್ರಾಂನಷ್ಟು ಎಲೆಗಳನ್ನು ಕಾಲು ಲೀಟರ್ ನೀರಿನಲ್ಲಿ ಸುಮಾರು 10 ರಿಂದ 20 ನಿಮಿಷಗಳವರೆಗೆ ಮಂದ ಉರಿಯಲ್ಲಿ ಕಾಯಿಸಿ ಬರುವ ಕಷಾಯವನ್ನು 2 ನಿಮಿಷಗಳವರೆಗೆ ಬಾಯಿ ಮುಕ್ಕಳಿಸಲು ಬಾಯಿ ಹುಣ್ಣು ವಾಸಿಯಾಗುತ್ತದೆ.
3, ಎಲೆಗಳನ್ನು ಸಣ್ಣದಾಗಿ ತುಂಡರಿಸಿ ಸಮಪ್ರಮಾಣದ ಹುಣಸೆ ಎಲೆಗಳೊಂದಿಗೆ ಹಾಗೂ ನಿಂಬೆಹಣ್ಣಿನ ಹೋಳುಗಳೊಂದಿಗೆ ಒಂದು ಬಟ್ಟೆಯಲ್ಲಿ ಉಂಡೆ ಕಟ್ಟಿ ಈ ಉಂಡೆಗಳನ್ನು ಯಾವುದಾದರೂ ಔಷಧಿಯ ಎಣ್ಣೆಯೊಂದಿಗೆ ಬೆಚ್ಚಗೆ ಮಾಡಿ ಊತವಿರುವ ಮಂಡಿಗಳ ಮೇಲೆ ಅಥವಾ ಮಾಂಸಖಂಡಗಳ ಮೇಲೆ ಬಿಸಿ ತಾಕಲು ನೋವು ಊತ ಕಡಿಮೆಯಾಗುತ್ತದೆ.
4. ನಿರ್ಗುಂಡೀ ತೈಲ ಎಲೆಗಳನ್ನು ಅರೆದು ಬರುವ ರಸಕ್ಕೆ ಸಮ ಪ್ರಮಾಣ ಎಳ್ಳೆಣ್ಣೆಯನ್ನು ಹಾಕಿ ನೀರು `ಆರುವವರೆಗೆ ಕಾಯಿಸಿ ಬರುವ ಎಣ್ಣೆಯನ್ನು ಎಲ್ಲಾ ರೀತಿಯ ಹುಣ್ಣುಗಳಲ್ಲಿ, ಕಜ್ಜಿ ತುರುಕೆಗಳಲ್ಲಿ ಯಶಸ್ವಿಯಾಗಿ ಹಚ್ಚಬಹುದು.
ಇದನ್ನು ಓದಿ: ಆರೋಗ್ಯಕ್ಕೆ ವರದಾನವಾಗಿರುವ ಕರಿಬೇವಿನ ಮಹತ್ವ ಮತ್ತು ಅದರ ಉಪಯೋಗ