Bad breath | ಬಾಯಿಯ ದುರ್ವಾಸನೆ ಕಾರಣಗಳು ಮತ್ತು ಪರಿಹಾರಗಳು

Bad breath : ಬಾಯಿಯ ದುರ್ವಾಸನೆಯನ್ನು ವೈದ್ಯಕೀಯ ಭಾಷೆಯಲ್ಲಿ ‘ಹೆಲಿಟೋಸಿಸ್’ ಎನ್ನಲಾಗುತ್ತದೆ. ಭಾರತೀಯರಲ್ಲಿ ಶೇ.75 ರಷ್ಟು ಜನರಿಗೆ ಈ ಸಮಸ್ಯೆ ಇದ್ದು, ಎಷ್ಟು ಚೆನ್ನಾಗಿ ಹಲ್ಲು ಉಜ್ಜಿದರೂ ಬಾಯಲ್ಲಿ ವಾಸನೆ ಬಹಳಷ್ಟು ಜನರಿಗೆ ಬರುತ್ತಿರುತ್ತದೆ.…

Bad breath

Bad breath : ಬಾಯಿಯ ದುರ್ವಾಸನೆಯನ್ನು ವೈದ್ಯಕೀಯ ಭಾಷೆಯಲ್ಲಿ ‘ಹೆಲಿಟೋಸಿಸ್’ ಎನ್ನಲಾಗುತ್ತದೆ. ಭಾರತೀಯರಲ್ಲಿ ಶೇ.75 ರಷ್ಟು ಜನರಿಗೆ ಈ ಸಮಸ್ಯೆ ಇದ್ದು, ಎಷ್ಟು ಚೆನ್ನಾಗಿ ಹಲ್ಲು ಉಜ್ಜಿದರೂ ಬಾಯಲ್ಲಿ ವಾಸನೆ ಬಹಳಷ್ಟು ಜನರಿಗೆ ಬರುತ್ತಿರುತ್ತದೆ. ಇದಕ್ಕೆ ಕಾರಣವೇನು, ಪರಿಹಾರಗಳು ಯಾವುವು ಎ೦ದು ತಿಳಿದುಕೊಳ್ಳಿ.

Bad breath : ದುರ್ವಾಸನೆಗೆ ಕಾರಣಗಳೇನು?

  • ಸರಿಯಾದ ಸಮಯಕ್ಕೆ ಬ್ರಷ್‌ ಮಾಡದಿರುವುದು.
  • 8-10 ಗಂಟೆಗಳ ಕಾಲ ಉಪವಾಸ ಇರುವುದು.
  • ಲಾಲಾರಸದ ಸ್ರವಿಸುವಿಕೆ ಕಡಿಮೆ ಇರುವುದು.
  • ಸತತವಾಗಿ ಮಾತನಾಡುವುದು.
  • 3-4 ಗಂಟೆಗಳವರೆಗೂ ನೀರು ಸೇವಿಸದಿರುವುದು.
  • ಧೂಮಪಾನ, ಮದ್ಯಪಾನ, ಪಾನ್ ಗುಟ್ಕಾ, ತಂಬಾಕು ಸೇವನೆ.
  • ಹುಳುಕು ಹಲ್ಲುಗಳು.
  • ವಸಡಿನಲ್ಲಿ ರಕ್ತಸ್ರಾವ.
  • ಗ್ಯಾಸ್ಟಿಕ್ ಸಮಸ್ಯೆ, ಕರುಳಿನ ಸೋಂಕು ಇತ್ಯಾದಿ

ಇದನ್ನೂ ಓದಿ: White Acacia Flower | ಬಿಳಿ ಎಕ್ಕದ ಹೂವಿನ ಆರೋಗ್ಯ ಪ್ರಯೋಜನಗಳು

Bad breath : ವಾಸನೆ ತಡೆಯುವುದು ಹೇಗೆ?

  • ನಿಯಮಿತವಾಗಿ ದಂತ ವೈದ್ಯರಿಂದ ಕ್ರಮಬದ್ಧವಾಗಿ ಹಲ್ಲಿನ ಸ್ವಚ್ಛತೆ ಮಾಡಿಸಿಕೊಳ್ಳುವುದು.
  • ದಿನಕ್ಕೆರಡು ಬಾರಿ ಹಲ್ಲು, ನಾಲಿಗೆ ಸ್ವಚ್ಛತೆ
  • ದ೦ತ ದಾರದಿಂದ ಹಲ್ಲಿನ ಸ್ವಚ್ಛತೆ.
  • ಜೊಲ್ಲು ರಸದ ಕೊರತೆಗೆ ಚಿಕಿತ್ಸೆ
  • ಕಾಫಿ, ಟೀ, ಸೇವನೆ ನಂತರ ಬಾಯನ್ನು ನೀರಿನಿಂದ ಮುಕ್ಕಳಿಸಬೇಕು.
  • ಆಗಾಗ ನೀರು ಕುಡಿಯುತ್ತಿರಬೇಕು.
  • ಮೂರು ತಿಂಗಳಿಗೊಮ್ಮೆ ಟೂಥ್ ಬ್ರಷ್‌ ಬದಲಿಸಬೇಕು.
  • ಗ್ಯಾಸ್ಟಿಕ್ ಸಮಸ್ಯೆಗೆ ವೈದ್ಯರಿಂದ ಪರಿಹಾರ ಪಡೆಯಬೇಕು.
  • ನಾಲಿಗೆಯನ್ನು ಬೆರಳಿನಿಂದ, ಬ್ರಷ್‌ನಿಂದ ಸ್ವಚ್ಛಗೊಳಿಸಬೇಕು
  • ಚಟಗಳಿಗೆ ವಿದಾಯ ಹೇಳಬೇಕು.
  • ಈರುಳ್ಳಿ, ಬೆಳ್ಳುಳ್ಳಿಯಂತಹ ವಸ್ತುಗಳನ್ನು ಹಸಿಯಾಗಿ ಸೇವಿಸಿದಲ್ಲಿ ಹಲ್ಲುಜ್ಜಬೇಕು.
  • ಊಟದ ನಂತರ ಏಲಕ್ಕಿಚೂರು, ಲವಂಗ, ತುಳಸಿ ಎಲೆ ತಿನ್ನಬೇಕು.

ಇದನ್ನೂ ಓದಿ: Diabetes | ಇಂದು ಮಧುಮೇಹ ದಿನ; ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಿ, ಮಧುಮೇಹಿಗಳ ಆಹಾರ ಕ್ರಮ ಹೀಗಿರಲಿ

Vijayaprabha Mobile App free

Bad breath : ಬಾಯಿಯ ದುರ್ವಾಸನೆ ತಡೆಯಲು ಹೀಗೆ ಮಾಡಬೇಡಿ..

  • ಅಡಿಕೆ ಚೀಟಿ, ಮಿಂಟ್, ಮೌತ್‌ವಾಶ್, ಬಳಸದಿರಿ, ಬಳಸಿದರೂ ಅದರ ಪರಿಹಾರ ತಾತ್ಕಾಲಿಕವಷ್ಟೆ.
  • ಹಳದಿ ಹಲ್ಲುಗಳಿಗೂ ವಾಸನೆಗೂ ಸ೦ಬ೦ಧವಿಲ್ಲ, ಬಿಳಿಯ ಹಲ್ಲುಗಳೇ ಕೊಳೆ ಕಟ್ಟಿಕೊಂಡು ಹಳದಿಯಾಗಿರುತ್ತದೆ.
  • ಇದಕ್ಕೆ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು.
  • ಸ್ವಚ್ಚತೆ ಕಾಪಾಡುವುದನ್ನು ಹೊರತುಪಡಿಸಿ ದುರ್ವಾಸನೆಗೆ ಸ್ವಯಂ ಚಿಕಿತ್ಸೆ ಮಾಡದಿರಿ. ವೈದ್ಯರ ಸಲಹೆ ಪಡೆದುಕೊಳ್ಳಿ.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.